Friday, March 6, 2026
ದೆಹಲಿರಾಜ್ಯಸುದ್ದಿ

8 ದೇಶಗಳ ಮುಖ್ಯಸ್ಥರೊಂದಿಗೆ ಮೋದಿ ಮಾತು : ಭಾರತೀಯರ ಸುರಕ್ಷತೆ ಬಗ್ಗೆ ಚರ್ಚೆ, ಇರಾನ್‌ ದಾಳಿಗೆ ಖಂಡನೆ – ಕಹಳೆ ನ್ಯೂಸ್

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಓಮನ್, ಕತಾರ್, ಕುವೈತ್‌ ಸೇರಿದಂತೆ 8 ದೇಶಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ. ಇರಾನ್‌ ದಾಲಿಯನ್ನ ತೀವ್ರವಾಗಿ ಖಂಡಿಸಿರುವ ಅವರು, ಭಾರತೀಯ ನಾಗರಿಕರ ಸುರಕ್ಷತೆಯನ್ನೂ ವಿಚಾರಿಸಿದ್ದಾರೆ.

ಇರಾನ್‌ನ ಪ್ರತೀಕಾರದ ದಾಳಿಗೆ ತುತ್ತಾಗಿರುವ ಒಮಾನ್‌ನ ಸುಲ್ತಾನ ಹೈತಮ್ ಬಿನ್ ತಾರಿಕ್, ಕುವೈತ್ ರಾಜಕುಮಾರ ಶೇಖ್ ಸಬಾಹ್ ಅಲ್-ಖಾಲಿದ್ ಅಲ್-ಹಮದ್ ಅಲ್-ಮುಬಾರಕ್ ಅಲ್ -ಸಬಾಹ್ ಮತ್ತು ಕತಾರ್‌ನ ಅಮೀರ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರತ್ಯೇಕವಾಗಿ ದೂರವಾಣಿ ಕರೆ ಮೂಲಕ ಮಾತುಕತೆ ನಡೆಸಿದ್ದಾರೆ. ಇರಾನ್‌ ದಾಳಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ 3 ದೇಶಗಳ ಸಾರ್ವ ಭೌಮತ್ವದ ಉಲ್ಲಂಘನೆಯನ್ನ ಖಂಡಿಸಿದ ಅವರು, ಅಲ್ಲಿನ ಭಾರತೀಯ ನಾಗರಿಕರ ಸುರಕ್ಷತೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಕಳೆದ 2 ದಿನಗಳಲ್ಲಿ ಮೋದಿ, ಇಸ್ರೇಲ್, ಬಹ್ರೇನ್‌, ಸೌದಿ ಅರೇಬಿಯಾ ಸೇರಿ 8 ರಾಷ್ಟ್ರಗಳ ಮುಖ್ಯಸ್ಥರಿಗೆ ಕರೆ ಮಾಡಿ ಮಾತಾಡಿದ್ದಾರೆ.

ಜಾಹೀರಾತು
ಜಾಹೀರಾತು