Friday, March 13, 2026
ಸುದ್ದಿ

ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆ ಆಗ್ತಿದೆ: ಡಿಕೆಶಿ -ಕಹಳೆನ್ಯೂಸ್

ಬೆಂಗಳೂರು: ಗ್ಯಾರಂಟಿಗಳು ಸರ್ಕಾರಕ್ಕೆ ಹೊರೆಯಾಗುತ್ತಿವೆ ಎಂದು ಖುದ್ದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವ್ರೇ ತಿಳಿಸಿದ್ರು.

ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಹಿಮೋಫಿಲಿಯಾ ರೋಗಿಗಳಿಗೆ ಉಚಿತ ಆಂಬುಲೆನ್ಸ್ ಸೇವೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

200 ಯೂನಿಟ್‌ ಉಚಿತ ಕರೆಂಟ್‌, ಗೃಹಲಕ್ಷ್ಮಿ, ಫ್ರೀ ಬಸ್‌, ಅನ್ನಭಾಗ್ಯ, ಶಕ್ತಿಯೋಜನೆಯಂತಹ ಗ್ಯಾರಂಟಿಗಳನ್ನ ರಾಜ್ಯ ಸರ್ಕಾರ ಕೊಟ್ಟಿದೆ. ಸರ್ಕಾರಕ್ಕೆ ಇದರಿಂದ ಹೊರೆಯಾಗುತ್ತಿರಬಹುದು, ಆದ್ರೆ ನಿಮಗೆ ಮಾನಸಿಕವಾಗಿ ಧೈರ್ಯ ತುಂಬಲು ಹಾಗೂ ಆರ್ಥಿಕವಾಗಿ ಶಕ್ತಿ ತುಂಬಲು ಇಂತಹ ದೊಡ್ಡ ತೀರ್ಮಾನವನ್ನ ನಮ್ಮ ಸರ್ಕಾರ ಮಾಡಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು

ಜೇಬಲ್ಲಿ 10 ರೂಪಾಯಿ ಇದ್ರೆ ಕೊಡೋನು 100 ರೂಪಾಯಿ ಕೊಡೋಕೆ ಮುಂದೆ ಬರ್ತಾನೆ. ಆದ್ದರಿಂದ ಸರ್ಕಾರಕ್ಕೆ ಹೊರೆಯಾದ್ರೂ ಗ್ಯಾರಂಟಿಗಳನ್ನ ಜಾರಿಗೊಳಿಸಿದೆ ಎಂದರು.