ಉಡುಪಿ ಮಠದಲ್ಲಿ ಶ್ರೀಮತಿ ಮಧುಮಿತಾ ಪಡುಮಲೆ ಇವರಿಂದ ಕರ್ನಾಟಕ ಶಾಸ್ತ್ರೀಯ ವೀಣಾವಾದನ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ಶ್ರೀ ಕೃಷ್ಣ ಮಠ , ಪರ್ಯಾಯ ಶ್ರೀ ಶೀರೂರು ಮಠ ಉಡುಪಿ ಇಲ್ಲಿನ ರಾಜಾಂಗಣದಲ್ಲಿ ಫೆ.18 ರಂದು ಶ್ರೀಮತಿ ಮಧುಮಿತಾ ಪಡುಮಲೆ ಇವರಿಂದ ಕರ್ನಾಟಕ ಶಾಸ್ತ್ರೀಯ ವೀಣಾವಾದನ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ವೈಣಿಕ ರತ್ನ ಆರ್.ಕೆ ಪದ್ಮನಾಭ ಮೈಸೂರು ಇವರ ಶಿಷ್ಯೆಯಾಗಿರುವ ಶ್ರೀಮತಿ ಮಧುಮಿತಾ ಇವರ ತಂಡದಲ್ಲಿ ಪನ್ನಗ ಶರ್ಮನ್ ಮೃದಂಗದಲ್ಲಿ ,ಸುಹಾಸ್ ಹೆಬ್ಬಾರ್ ರಿದಂ ಪ್ಯಾಡ್ ನಲ್ಲೂ ಹಾಗೂ ಕೃಷ್ಣ ಗೋಪಾಲ್ ಕೊಳಲು ವಾದನದಲ್ಲಿ ಸಹಕಾರ ನೀಡಿದರು. ಕಾರ್ಯಕ್ರಮ ವೇಳೆ ಪರ್ಯಾಯ ಮಠದ ವೇದವರ್ಧನ ತೀರ್ಥ ಶ್ರೀ ಪಾದರು ಕಲಾವಿದರನ್ನು ಆಶೀರ್ವಾದಿಸಿ , ಹರಸಿದರು.














