Thursday, March 12, 2026
ಸುದ್ದಿ

ಫೆ.22 ವಿದುಷಿ ಶ್ರೀಯಾ ರಾವ್ ಸಣ್ಣಯ್ಯ ಭರತನಾಟ್ಯ ರಂಗಪ್ರವೇಶ – ಕಹಳೆ ನ್ಯೂಸ್

ಮಂಗಳೂರು : ವಿದುಷಿ ಶ್ರೀಯಾ ರಾವ್ ಸಣ್ಣಯ್ಯ ಇವರ ಭರತನಾಟ್ಯ ರಂಗಪ್ರವೇಶವು ಫೆ.22 ರಂದುಸಂಜೆ 5 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ನೃತ್ಯ ಸುಧಾ (ರಿ) ಸಂಸ್ಥೆಯ ಸ್ಥಾಪಕಿ ಮತ್ತು ಶ್ರೀಯಾ ತಾಯಿ ವಿದುಷಿ ಸೌಮ್ಯ ಸುಧೀಂದ್ರ ರಾವ್ ತಿಳಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ  ಮಾತನಾಡಿದ ಅವರು ವಿದುಷಿ ಶ್ರೀಯಾ ರಾವ್ ಸಣ್ಣಯ್ಯ ಅವರು ಸಂತ ಅಲೋಶಿಯೆಸ್ ಪರಿಗಣಿತ ವಿವಿಯಲ್ಲಿ ಪ್ರಥಮ ವರ್ಷದ ಬಿಎಸ್‌ಸಿ ವಿದ್ಯಾರ್ಥಿನಿಯಾಗಿದ್ದಾರೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಯಾ ರಾವ್ ಭರತ ನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಶಾಂತಲಾ ಪ್ರಶಸ್ತಿ ವಿಜೇತ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ , ಸಂತ ಅಲೋಶಿಯಸ್ ಪರಿಗಣಿತ ವಿವಿ ಉಪಕುಲಪತಿ ಡಾ. ಪ್ರವೀಣ್ ಮಾರ್ಟಿಸ್ ಎಸ್ ಜೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ.ಕೆ.ರಾಮ್ ಮೂರ್ತಿ ರಾವ್, ಮಾಜಿ ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲ್, ಯಕ್ಷ ಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲಗುತ್ತು ಸತೀಶ್ ಶೆಟ್ಟಿ ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಶ್ರೀಯಾ ಇವರ ಮೃದಂಗ ಗುರುಗಳಾದ ವಿದ್ವಾನ್ ರವಿಕುಮಾರ್ ಕುಂಜೂರು ಇವರಿಗೆ ಗುರುವಂದನೆ ಮಾಡಲಾಗುವುದು ಎಂದು ವಿದುಷಿ ಸೌಮ್ಯ ಸುಧೀಂದ್ರ ರಾವ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಸುಧೀಂದ್ರ ರಾವ್, ವಿದುಷಿ ಸಹನಾ, ವಿದುಷಿ ನವ್ಯಾ ಭಟ್ ಉಪಸ್ಥಿತರಿದ್ದರು.