
ಪುತ್ತೂರು : ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ (MYAS), ಖೇಲೋ ಇಂಡಿಯಾ ಉಪಕ್ರಮದ ಮೂಲಕ, ಅಸ್ಮಿತಾ – ಖೇಲೋ ಇಂಡಿಯಾ ಮಹಿಳಾಲೀಗ್ಗಳನ್ನು ಉತ್ತೇಜಿಸುತ್ತಿದ. ಕ್ರೀಡೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಅಸ್ಮಿತಾ ಎಂಬ ಮಹಿಳಾಲೀಗ್ಗನ್ನು ದೇಶದಾದ್ಯಂತ ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ವಿವಿಧ ಕ್ರೀಡೆಗಳಾದ ಸ್ವಿಮ್ಮಿಂಗ್, ವೆಯಿಟ್ಲಿಫ್ಟಿಂಗ್,ಯೋಗ ,ಕರಾಟೆ, ವಾಲಿಬಾಲ್ ತ್ಯಾದಿ ವಿಭಾಗಗಳಲ್ಲಿ ಹಮ್ಮಿಕ್ಕೊಳ್ಳಲಾಗುತ್ತಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ (SAI), MyGov ಸಹಯೋಗದೊಂದಿಗೆ ಅಸ್ಮಿತಾ – ಖೇಲೋ ಇಂಡಿಯಾ ಮಹಿಳಾ ಲೀಗ್ ಸ್ಪರ್ಧೆಗಳಲ್ಲಿ ಭಾಗವಹಿಸಲು ನಾಗರಿಕರನ್ನು ಆಹ್ವಾನಿಸುತ್ತಿದೆ.
ಈ ನಿಟ್ಟಿನಲ್ಲಿ ಪುತ್ತೂರು ಅಕ್ವಾಟಿಕ್ ಕ್ಲಬ್ Eದೇ ಬರುವ ಫೆಬ್ರವರಿ 21ನೇತಾರೀಕು ಶನಿವಾರ ದಂದು 9 ರಿಂದ ಹದಿನಾಲ್ಕು ವರುಷದ ಒಳಗಿನ ಬಾಲಕಿಯರಿಗಾಗಿ ಅಸ್ಮಿತಾ -ಖೇಲೋ ಇಂಡಿಯಾ ಮಹಿಳಾ ಲೀಗ್ ಸ್ವಿಮ್ಮಿಂಗ್ ಸ್ಪರ್ಧೆ ಯನ್ನು ಡಾ .ಶಿವರಾಮಕಾರಂತ ಬಾಲವನ ಈಜುಕೊಳ ,ಪರ್ಲಡ್ಕ ಪುತ್ತೂರುನಲ್ಲಿ ಆಯೋಜಿಸಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ಹೆಸರನ್ನು ಕೆಯಸ್ಎ (KSA) ಸಂಯೋಜಿತ ಘಟಕದ ಮೂಲಕ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 7898583697,9108464327.














