Thursday, March 12, 2026
ಸುದ್ದಿ

ಬೆಳ್ತಂಗಡಿ ಕೋರ್ಟ್‌ಗೆ ನಕ್ಸಲ್ ಆರೋಪಿ ಜಯಣ್ಣ ಹಾಜರು – ಕಹಳೆ ನ್ಯೂಸ್

ಬೆಳ್ತಂಗಡಿ :ಕುತ್ಲೂರು ಗ್ರಾಮದ ಲಿಂಗಪ್ಪ ಮಲೆಕುಡಿಯ ಅವರ ಮನೆಯಲ್ಲಿ ನಕ್ಸಲ್ ಸಂಬಂಧಿತ ಕರಪತ್ರ ಹಂಚಿಕೆ ಹಾಗೂ ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದಡಿ ದಾಖಲಾಗಿದ್ದ ಪ್ರಕರಣದ ಆರೋಪಿ ಜಾನ್ ಅಲಿಯಾಸ್ ಜಯಣ್ಣ ರಾಯಚೂರು ಅವರು ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾದರು.

ಈ ಪ್ರಕರಣವು ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿ ವಿರುದ್ದ ನಕ್ಸಲ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಶಂಕೆ ವ್ಯಕ್ತವಾಗಿತ್ತು. ಪ್ರಕರಣದ ಅನುಸಂಧಾನದ ಭಾಗವಾಗಿ ಕೇರಳ ಪೊಲೀಸರು ‘ಬಾಡಿ ವರಂಟಿ ‘ ಮೂಲಕ ಆರೋಪಿ ಜಯಣ್ಣರನ್ನು ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿ ಪರ ವಕೀಲರಾಗಿ ಶಿವಕುಮಾರ್ ಹಾಜರಾಗಿದ್ದು, ಸರಕಾರದ ಪರ ವಕೀಲರಾಗಿ ದಿವ್ಯರಾಜ್ ಹೆಗ್ಡೆ ಪುತ್ತೂರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು.

ಜಾಹೀರಾತು
ಜಾಹೀರಾತು

ಪ್ರಕರಣದ ಕುರಿತು ಮುಂದಿನ ವಿಚಾರಣೆ ನಡೆಯಲಿದ್ದು, ನ್ಯಾಯಾಲಯದ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.