Thursday, March 12, 2026
ಸುದ್ದಿ

ಪುತ್ತೂರಿನಲ್ಲಿ ರತ್ನಶ್ರೀ ಕ್ಯಾಟರರ್ಸ್ ಹೊಸ ಕಚೇರಿ ಉದ್ಘಾಟನೆ – 25 ವರ್ಷದ ಸಾಧನೆಗೆ ಸಂಭ್ರಮ -ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ತೆಂಕಿಲದಲ್ಲಿ ಪ್ರಸಿದ್ದ ಸಂಸ್ಥೆಯಾಗಿರುವ ರತ್ನಶ್ರೀ ಕ್ಯಾಟರರ್ಸ್ & ಅರೇಂಜರ್ಸ್‌ ತನ್ನ 25 ವರ್ಷಗಳ ಯಶಸ್ವಿ ಪಯಣವನ್ನು ಸಂಭ್ರಮಿಸುತ್ತಿದ್ದು, ಹೊಸ ಕಚೇರಿ ಉದ್ಘಾಟನೆಗೆ ಸಜ್ಜಾಗಿದೆ.

ಗುಣಮಟ್ಟದ ಸೇವೆ, ನಂಬಿಕೆ ಮತ್ತು ವ್ಯವಸ್ಥಿತ ಕಾರ್ಯಪದ್ಧತಿಯಿಂದ ಗ್ರಾಹಕರ ಮನ ಗೆದ್ದಿರುವ ಈ ಸಂಸ್ಥೆ, ಇದೀಗ ತನ್ನ ವ್ಯವಹಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಹೊಸ ಕಚೇರಿಯನ್ನು ಆರಂಭಿಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹೊಸ ಕಚೇರಿ ಉದ್ಘಾಟನಾ ಕಾರ್ಯಕ್ರಮವು ಫೆ. 20 ರಂದು ಬೆಳಿಗ್ಗೆ 9.00 ಗಂಟೆಗೆ ನಡೆಯಲಿದೆ. ಈ ಕಚೇರಿ ಪುತ್ತೂರಿನ ತೆಂಕಿಲದಲ್ಲಿರುವ ಪುಷ್ಪಾ ಸ್ಟ್‌‌ರ್ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿ ಕಾರ್ಯನಿರ್ವಹಿಸಲಿದೆ.

ಜಾಹೀರಾತು
ಜಾಹೀರಾತು

25 ವರ್ಷಗಳ ಸಾಧನೆಗೆ ಇದು ಒಂದು ಮೈಲುಗಲ್ಲಾಗಿದ್ದು, ಈ ಸಂದರ್ಭದಲ್ಲಿ ಗಣ್ಯರು,ಗ್ರಾಹಕರು ಹಾಗೂ ಆತ್ಮೀಯರು
ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವಾದಿಸುವಂತೆ ರತ್ನಶ್ರೀ ಗ್ರೂಪ್ಸ್ನ ಜಯಂತ ಶೆಟ್ಟಿ ಕಂಬಳತಡ್ಡ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.