Friday, March 6, 2026
ದೆಹಲಿರಾಜ್ಯಸುದ್ದಿ

ಇಂದಿನಿಂದ AI ಇಂಪ್ಯಾಕ್ಟ್ ಶೃಂಗಸಭೆ : ಭಾರತದಲ್ಲಿ ರಸ್ತೆ ಸುರಕ್ಷತೆಗೆ ಎಐ ಬಳಕೆ ಕುರಿತು ಚರ್ಚೆ-ಕಹಳೆ ನ್ಯೂಸ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಇಂದಿನಿಂದ (ಫೆ.16) 5 ದಿನಗಳ ಕಾಲ ಎಐ ಇಂಪ್ಯಾಕ್ಟ್ ಶೃಂಗಸಭೆ ನಡೆಯಲಿದೆ. ವಿಶ್ವದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಯುಗದಲ್ಲಿ ಐಐ ಕುರಿತ ಮೊದಲ ಶೃಂಗ ಸಮ್ಮೇಳನ ಇದಾಗಿದೆ.

ಎಐ ಕುರಿತು ಅರಿವು ಮೂಡಿಸುವ ಜೊತೆಗೆ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಭಾರತದ ಯೋಜನೆಗಳನ್ನ ಪ್ರಚುರಪಡಿಸುವ ಕಾರ್ಯ ಈ ಸಮ್ಮೇಳನದಲ್ಲಿ ಆಗಲಿದೆ. ವಿಶ್ವದ ಅನೇಕ ದೇಶಗಳಿಂದ ಟೆಕ್ ಮುಖಂಡರು ಮತ್ತು ಕಂಪನಿಗಳು ಈ ಸಮಿಟ್​ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅದರಲ್ಲೂ ಸುಮಾರು 50 ದಕ್ಷಿಣ ದೇಶಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೊದಲ ಜಾಗತಿಕ ಅತಿದೊಡ್ಡ ಎಐ ಶೃಂಗಸಭೆಯನ್ನ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 5 ಗಂಟೆ ವೇಳೆಗೆ ನವದಹೆಲಿಯ ಭಾರತ್‌ ಮಂಟಪದಲ್ಲಿ‌ ಉದ್ಘಾಟಿಸಲಿದ್ದಾರೆ. ಎಐನಿಂದ ಮಾನವನ ಬದುಕಿಗೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಎಷ್ಟು ಒಳಿತು? ಎಷ್ಟು ಮಾರಕ ಎಂಬುದನ್ನು ಅರಿಯುವ ಮತ್ತು ನಿವೇದಿಸುವ ಪ್ರಯತ್ನವಾಗಲಿದೆ. ಸಮಗ್ರ ಅಭಿವೃದ್ಧಿಗೆ ಎಐ ಅನ್ನು ಹೇಗೆ ಬಳಸಬಹುದು? ಉದ್ಯೋಗ ಸೃಷ್ಟಿ ಹೆಚ್ಚಿಸುವುದು ಹೇಗೆ ಎಂಬ ಆಯಾಮಗಳ ಬಗ್ಗೆ ಚರ್ಚಿಸಲಾಗುತ್ತದೆ.

ಜಾಹೀರಾತು
ಜಾಹೀರಾತು

300 ಕ್ಕೂ ಹೆಚ್ಚು ಪ್ರದರ್ಶನ
ಎಐ ಶೃಂಗಸಭೆಯಲ್ಲಿ ಬೃಹತ್‌ ಎಕ್ಸ್‌ಪೋ ಸಹ ಇರಲಿದ್ದು, 300 ಕ್ಕೂ ಹೆಚ್ಚು ಕ್ಯೂರೇಟೆಡ್‌ ಪ್ರದರ್ಶನ ಮಳಿಗೆಗಳು ಮತ್ತು ನೇರ ಪ್ರದರ್ಶನಗಳು ಇರಲಿವೆ. ಇದವು ಜನರು, ಗ್ರಹ ಮತ್ತು ಪ್ರಗತಿಯ ವಿಷಯಗಳನ್ನ ಒಳಗೊಂಡಿರಲಿವೆ.

600ಕ್ಕೂ ನವೋದ್ಯಮ ಭಾಗಿ
ಇನ್ನೂ ಈ ಎಕ್ಸ್‌ಪೋನಲ್ಲಿ 13 ದೇಶಗಳಿಂದ 600 ಕ್ಕೂ ಹೆಚ್ಚು ಉನ್ನತ-ಶಕ್ತಿಯ ನವೋದ್ಯಮಗಳು ಭಾಗಿಯಾಗಿದ್ದು, AI ಪರಿಸರ ವ್ಯವಸ್ಥೆಯಲ್ಲಿ ಅಂತಾರಾಷ್ಟ್ರೀಯ ಸಹಯೋಗಗಳನ್ನ ಪ್ರದರ್ಶಿಸುತ್ತವೆ. ಇದನ್ನೂ ಓದಿ: ಕರ್ನಾಟಕದ 22,000ಕ್ಕೂ ಹೆಚ್ಚು ರೈತರಿಗೆ ಪಿಎಂ-ಕಿಸಾನ್ ಹಣ ಬಿಡುಗಡೆ

ಭಾರತದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಚರ್ಚೆ
ಮೊದಲ ದಿನ ಭಾರತದಲ್ಲಿ ರಸ್ತೆ ಸುರಕ್ಷತೆಗಾಗಿ AI ಮೇಲೆ ಕೇಂದ್ರೀಕರಿಸುವ ವ್ಯವಸ್ಥೆಗಳ ಬಗ್ಗೆ ಚರ್ಚಿಸಲಾಗುತ್ತದೆ. ಅಂದ್ರೆ ಎಐ ನಿಂದ ಅಳೆಯಬಹುದಾದ ಸುಧಾರಣೆ ಕ್ರಮಗಳ ಬಗ್ಗೆ ಚರ್ಚಿಸಲಾಗುತ್ತದೆ. ಈ ಚರ್ಚೆಯಲ್ಲಿ ಸಾರಿಗೆ ಸಚಿವಾಲಯ, ಐಐಟಿಗಳು ಮತ್ತು ವಿವಿಧ ಕ್ಷೇತ್ರಗಳ ತಜ್ಞರು ಪಾಲ್ಗೊಳ್ಳಲಿದ್ದಾರೆ. ರಸ್ತೆಯಲ್ಲಿ ಅಪಘಾತದ ಮಾದರಿಗಳನ್ನ ಅರ್ಥಮಾಡಿಕೊಳ್ಳುವುದು, ಅಪಾಯವನ್ನ ಊಹಿಸುವುದು ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಸಕ್ರಿಯಗೊಳಿಸುವ ಡೇಟಾ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಚರ್ಚಿಸಲಾಗುತ್ತದೆ.