ಪಶ್ಚಿಮ ಘಟ್ಟದಲ್ಲಿ ಹೊಸ ಪ್ರಭೇದ ಸಿಹಿನೀರಿನ ಏಡಿ ಪತ್ತೆ- ಕಹಳೆ ನ್ಯೂಸ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟ ಭಾಗದಲ್ಲಿ ಅನೇಕ ಜೀವಸಂಕುಲಗಳು ಆಶ್ರಯ ಪಡೆದಿವೆ. ಹೊಸ ಪ್ರಭೇದ ಸಿಹಿನೀರಿನ ಏಡಿ ಪತ್ತೆಯಾಗಿದೆ.
ಏನಿದರ ವಿಶೇಷ?
ಬಹುತೇಕ ಏಡಿಗಳು ಒಂದು ಅಥವಾ ಎರಡು ಬಣ್ಣಗಳಲ್ಲಿ ತನ್ನ ಜೀವಿತ ಅವಧಿಯನ್ನು ಕಳೆಯುತ್ತವೆ. ಆದರೆ, ಈ ಏಡಿ ಮೂರು ಬಣ್ಣದಲ್ಲಿ ತನ್ನ ಜೀವಿತಾವಧಿಯಲ್ಲಿ ಕಾಣಸಿಗುತ್ತದೆ. ಮರಿ ಇರುವಾಗ ಕಪ್ಪು ಮಿಶ್ರಿತ ನೇರಲೆ, ಮಧ್ಯ ವಯಸ್ಸಿಗೆ ಬಂದಾಗ ಹಳದಿ ಮಿಶ್ರಿತ ಬಿಳಿ, ಕಪ್ಪು ಮಿಶ್ರಿತ ಬಿಳಿ ಇದ್ದು, ಕಾಲುಗಳು ಕೇಸರಿ ಕಲರ್ ಇರುತ್ತದೆ. ಜೀವನದ ಕೊನೆಯ ಭಾಗದಲ್ಲಿ ಹಳದಿ ಮಿಶ್ರಿತ ಶ್ವೇತ ವರ್ಣದಲ್ಲಿ ಕಾಣುತ್ತದೆ. ಕಾಲಿನ ಉಗುರು ಮಾತ್ರ ಕೇಸರಿ ಬಣ್ಣದಲ್ಲಿ ಕಾಣಸಿಗುತ್ತವೆ.
ಅತೀ ಹೆಚ್ಚಿನ ಮಳೆ ಬೀಳುವ ಪ್ರದೇಶದಲ್ಲಿ ಕಾಣಸಿಗುವ ಇವು ಸಮುದ್ರಮಟ್ಟದಿಂದ 500 ಮೀಟರ್ ಎತ್ತರದಲ್ಲಿ ಕೆಂಪು ಕಲ್ಲುಗಳಲ್ಲಿ (ಮಣ್ಣಿನ ಕೆಂಪು ಚೀರೇಕಲ್ಲು) ಇರುವ ಹೋಲುಗಳಲ್ಲಿ ಕಾಲೋನಿ ರೀತಿ ಗುಂಪಾಗಿ ವಾಸವಾಗಿರುತ್ತದೆ. ಇದಲ್ಲದೆ, ನೀರು ತುಂಬಿದ ಸಣ್ಣ ಮರದ ಪೊಟರೆಗಳಲ್ಲಿ ವಾಸಿಸುತ್ತವೆ. ಆಗಸ್ಟ್ ತಿಂಗಳಲ್ಲಿ ತನ್ನ ಸಂತಾನೋತ್ಪತ್ತಿ ಮಾಡುತ್ತದೆ. ಒಂದೂವರೆ ಇಂಚು ಉದ್ದ ಮಾತ್ರ ಬೆಳೆಯುವ ಇವು ಅತ್ಯಂತ ಚಿಕ್ಕ ಏಡಿ ಪ್ರಭೇದಕ್ಕೆ ಸೇರಿವೆ.
ಈ ಏಡಿಗಳು ಪರಿಸರಕ್ಕೆ ತನ್ನದೇ ರೀತಿಯಲ್ಲಿ ಕೊಡುಗೆ ನೀಡುತ್ತಿವೆ. ಇವುಗಳ ಬಗ್ಗೆ ಹಲವು ವರ್ಷದಿಂದ ಅಧ್ಯಯನ ನಡೆಸುತ್ತಿರುವ ವನಪಾಲಕ ಗೋಪಾಲನಾಯ್ಕ ಅವರು ಹೇಳುವಂತೆ ಇವು ಎಲ್ಲಿ ವಾಸವಾಗಿರುತ್ತದೆಯೋ ಅಲ್ಲಿ ಸಂವೃದ್ಧ ಅರಣ್ಯ ಪರಿಸರವಿದೆ ಎಂದರ್ಥ. ಇವುಗಳು ಕೆಂಪು ಕಲ್ಲುಬಂಡೆಗಳನ್ನು ಕೊರೆದು ಗುಂಪಾಗಿ ವಾಸಮಾಡುತ್ತವೆ. ಇದಲ್ಲದೆ, ಮರಗಳ ಪೊಟರೆಗಳಲ್ಲಿ ನೀರು ಇರುವ ಭಾಗದಲ್ಲಿ ಇರುತ್ತವೆ. ಹೀಗಾಗಿ, ಇವು ಅಂತರ್ಜಲ ಹೆಚ್ಚಿಸುವಲ್ಲಿ ಸಹ ತನ್ನದೇ ಆದ ಕೊಡುಗೆ ನೀಡುತ್ತಿದ್ದು, ಗಿಡಮರಗಳು ವೃದ್ಧಿಯಾಗಲು ಪರಿಸರಕ್ಕೆ ಪೂರಕವಾಗಿದೆ ಎನ್ನುತ್ತಾರೆ. ಕೀಟನಾಶಗಳಾಗಿದ್ದರಿಂದ ಇವುಗಳು ವೃದ್ಧಿಯಾಗುವ ಸಸ್ಯಗಳಿಗೆ ಪೌಷ್ಟಿಕಾಂಶವನ್ನು ಒದಗಿಸಲು ಪ್ರಮುಖ ಪಾತ್ರ ವಹಿಸುತ್ತದೆ.
ಕಾರವಾರದಲ್ಲಿ ಹಾವುಗಳ ರಕ್ಷಣೆಯಲ್ಲಿ ತೊಡಗಿರುವ ಗೋಪಾಲ್ ನಾಯ್ಕ ಅವರು ಹಿರಿಯ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ SciELO ಬ್ರಸಿಲ್ನಲ್ಲಿ ಫೆ.9 ರಂದು ಹೊಸ ಪ್ರಬೇಧದ ಏಡಿಯ ಬಗ್ಗೆ ತನ್ನ ಅಧ್ಯಯನ ವರದಿಯನ್ನು ನೀಡಿದ್ದು, ಇದನ್ನು ಮಾನ್ಯ ಮಾಡಿ ಪ್ರಕಟಿಸಿದೆ. ತಾವು ಗುರುತಿಸಿದ ಈ ಏಡಿಗೆ ತಮ್ಮ ಮಗಳು ದೃತಿ ಅವರ ಹೆಸರನ್ನು ಸೇರಿಸಿ “ಘಾಟಿಯಾನದೃತಿಆರ್ಮ್ಸ್” ಎಂದು ಹೆಸರಿಟ್ಟಿದ್ದು, ಇದರ ಜೀವನ ಹಾಗೂ ಇತರೆ ಮಾಹಿತಿಯ ಬಗ್ಗೆ ಅಧ್ಯಯನ ಮುಂದುವರೆಸಿದ್ದಾರೆ.














