ಕಂಡ್ಲೂರು ಸೇತುವೆಯ ಪುನರ್ ನಿರ್ಮಾಣ ಮತ್ತು ಪುನಶ್ವೇತನ ಕಾಮಗಾರಿಗಳ ಅನುಮೋದನೆಗೆ ಕುಂದಾಪುರ ಶಾಸಕ ಎ.ಕಿರಣ್ ಕೊಡ್ಗಿ ಹರ್ಷ- ಕಹಳೆ ನ್ಯೂಸ್

ಕುಂದಾಪುರ : ಕುಂದಾಪುರ ತಾಲೂಕಿನ ತೀರ್ಥಳ್ಳಿ ಕುಂದಾಪುರ ರಾಜ್ಯ ಹೆದ್ದಾರಿ 52ರ ಕಿಲೋ ಮೀಟರ್.79.00ರಲ್ಲಿ ಬಳ್ಕೂರು ಕಂಡ್ಲೂರು ಮಧ್ಯ ವರಾಹಿ ನದಿಗೆ ಅಡ್ಡಲಾಗಿ ಇರುವ ಸೇತುವೆಯ ಮರು ನಿರ್ಮಾಣದ ಬಗ್ಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿಯವರು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳೆ ಅವರನ್ನು ಭೇಟಿ ಮಾಡಿ ತೀರ್ಥಳ್ಳಿ ಕುಂದಾಪುರ ರಸ್ತೆಯ ರಾಜ್ಯ ಹೆದ್ದಾರಿ 52 ಆಗಿದ್ದು ಉಡುಪಿ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಅತಿ ಹತ್ತಿರದ ರಸ್ತೆಯಾಗಿದ್ದು ಈ ರಸ್ತೆಯು ಕಿ. ಮೀ 79.00 ರಲ್ಲಿ ಬಳ್ಕೂರು – ಕಂಡ್ಲೂರು ಮಧ್ಯ ಸೇತುವೆ ಇದ್ದು ಈ ಸೇತುವೆಯನ್ನು 1972 ರಲ್ಲಿ ನಿರ್ಮಾಣವಾಗಿದ್ದು ಸೇತುವೆಯ 10 ಅಂಕಣಗಳಿದ್ದು ಒಟ್ಟು 312.00ಮೀ ಉದ್ದವಿದ್ದು ಸದರಿ ಸೇತುವೆ ಈಗಾಗಲೇ ಶಿಥಿಲ ಗೊಂಡಿರುವ ಕಾರಣ ಈ ಸೇತುವೆ ಮೇಲೆ ಅಧಿಕ ಭಾರ ಹೊತ್ತು ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಕುಸಿಯ ಬಹುದಾಗಿದ್ದು ಇದರಿಂದ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಂಭವವಿರುವುದರಿಂದ ಸೇತುವೆಯ ಮರು ನಿರ್ಮಾಣಕ್ಕೆ *ಅಂದಾಜು ರೂ.4000.00 ಲಕ್ಷಗಳ* ಅನುದಾನವನ್ನು ಮಂಜೂರು ಮಾಡುವಂತೆ ವಿನಂತಿಸಿದ್ದು ಶಾಸಕರ ಮನವಿಗೆ ಸಚಿವರು ಶೀಘ್ರವಾಗಿ ಸ್ಪಂದಿಸಿದ್ದು ಸೇತುವೆಯ ಮರು ನಿರ್ಮಾಣಕ್ಕೆ *55 ಕೋಟಿ ಕಾಮಗಾರಿಗಳಿಗೆ ಮಂಜೂರು ಮಾಡಿರುತ್ತಾರೆ* ಬಳ್ಕೂರು – ಕಂಡ್ಲೂರು ಮಧ್ಯ ಸೇತುವೆಯ ಪುನರ್ ನಿರ್ಮಾಣ ಮತ್ತು ಪುನಶ್ವೇತನ ಕಾಮಗಾರಿಗಳಿಗೆ ಅನುಮೋದನೆಗೆ ಶಾಸಕರು ಹರ್ಷ ವ್ಯಕ್ತಪಡಿಸಿ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.














