ಫೆ.14ರಂದು ಶ್ರೀ ದುರ್ಗಾ-ವೆಂಕಟ್ರಮಣ ಭಜನಾ ಮಂಡಳಿ (ರಿ.) ಸಾಜ, ಬಲ್ನಾಡು ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಸಾಜ ಬಲ್ನಾಡು ಇದರ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ – ಕಹಳೆ ನ್ಯೂಸ್

ಶ್ರೀ ದುರ್ಗಾ-ವೆಂಕಟ್ರಮಣ ಭಜನಾ ಮಂಡಳಿ (ರಿ.) ಸಾಜ, ಬಲ್ನಾಡು ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಸಾಜ ಬಲ್ನಾಡು ಇದರ ಆಶ್ರಯದಲ್ಲಿ ಫೆ.14ರಂದು 36ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಶ್ರೀ ದುರ್ಗಾ-ವೆಂಕಟ್ರಮಣ ಭಜನಾ ಮಂದಿರದಲ್ಲಿ ನಡೆಯಲಿದೆ.
ಸಂಜೆ 4ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭಗೊಳ್ಳಲಿದ್ದು, ಬಲ್ನಾಡಿನ ಅರ್ಚಕರಾದ ಬಿ. ಕುಮಾರ ಹೊಳ್ಳ ಅವರಿಂದ ಪೂಜೆ ಕಥಾ ಪ್ರವಚನ ನಡೆಯಲಿದೆ. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ನಡೆದು, ಕುಣಿತ ಭಜನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಸಭಾ ಕಾರ್ಯಕ್ರಮದ ಸಭಾಧ್ಯಕ್ಷರಾಗಿ ಶ್ರೀ ದುರ್ಗಾ ವೆಂಕಟ್ರಮಣ ಭಜನಾ ಮಂಡಳಿ (ರಿ.) ಸಾಜ ಬಲ್ಲಾಡು ಇದರ ಅಧ್ಯಕ್ಷರಾದ ಬಾಲಕೃಷ್ಣ ಎಂ ಮುರುಂಗಿ ವಹಿಸಲಿದ್ದು, ಧಾರ್ಮಿಕ ಉಪನ್ಯಾಸವನ್ನು ನಿಡಳ್ಳಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ವೆಂಕಟ್ರಮಣ ಬೋರ್ಕರ್ ಬಿ., ಹಾಗೂ ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕರಾದ ಶ್ರೀಮತಿ ಕೃಷ್ಣವೇಣಿ ಕರುಣಾಕರ ರೈ , ಶ್ರೀ ದುರ್ಗಾ ವೆಂಕಟ್ರಮಣ ಮಂದಿರ ಶಾಖೆ ಸಾಜದ ಯೋಗ ಶಿಕ್ಷಕರು SPYSS ಮುರಳಿಧರ ನಾಯಕ್, ಮಾಜಿ ಧಾರ್ಮಿಕ ಪರಿಷತ್ ಸದಸ್ಯರು ಮುರಳಿ ಕೃಷ್ಣ ಭಟ್ ಹಸಂತಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಪುತ್ತೂರು ಇದರ ಯೋಜನಾಧಿಕಾರಿಗಳಾದ ಶಶಿಧರ್ ಎಂ ಭಾಗವಹಿಸಲಿದ್ದಾರೆ. ಬಳಿಕ ಅನ್ನಸಂತರ್ಪಣೆ ಹಾಗೂ “ಕಲ್ಟಿಗದ ಕಾಳಿ ಮಂತ್ರದೇವತೆ ” ಎಂಬ ಪೌರಾಣಿಕ ನಾಟಕ ನಡೆಯಲಿದೆ.














