Saturday, March 7, 2026
ಸುದ್ದಿ

ಪ್ರಧಾನಿಗಳಿಂದ ಇಂದು ʻಸೇವಾ ತೀರ್ಥʼ ಸಂಕೀರ್ಣ ಉದ್ಘಾಟನೆ : ಶೀಘ್ರವೇ ಮೋದಿ ಹೊಸ ಕಚೇರಿಗೆ ಶಿಫ್ಟ್‌- ಕಹಳೆ ನ್ಯೂಸ್

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ʻಸೆಂಟ್ರಲ್‌ ವಿಸ್ಟಾʼ (Central Vista) ಯೋಜನೆಯ ಭಾಗವಾಗಿ ನಿರ್ಮಿಸಲಾದ ʻಸೇವಾ ತೀರ್ಥʼ ಸಂಕೀರ್ಣವನ್ನ ಪ್ರಧಾನಿ ನರೇಂದ್ರ ಮೋದಿ ಅವರಿಂದು ಅನಾವರಣಗೊಳಿಸಲಿದ್ದಾರೆ. ಶೀಘ್ರದಲ್ಲೇ ಪ್ರಧಾನಿಗಳ ಕಚೇರಿಯನ್ನ ಇದೇ ಸಂಕೀರ್ಣದ ಕಚೇರಿಗೆ ಸ್ಥಳಾಂತರಿಸಲಾಗುತ್ತದೆ. 1947 ರ ಬಳಿಕ ಅಂದ್ರೆ ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಗಳ ಕಚೇರಿ ಬದಲಾವಣೆ ಮಾಡುತ್ತಿರುವುದು ಗಮನಾರ್ಹ.

ʻಸೇವಾ ತೀರ್ಥʼ, ಕರ್ತವ್ಯ ಭವನ -1 ಮತ್ತು 2 ಅನ್ನು ಔಪಚಾರಿಕವಾಗಿ ಉದ್ಘಾಟಿಸಲಾಗುತ್ತಿದೆ. ಮಧ್ಯಾಹ್ನ 1:30 ಕ್ಕೆ ʻಸೇವಾ ತೀರ್ಥʼ ಹೆಸರನ್ನ ಅನಾವರಣಗೊಳಿಸಲಿದ್ದಾರೆ. ಸಂಜೆ 6 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದ್ದು, ಸಾರ್ವಜನಿಕ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ.
ಹೊಸ ಕಟ್ಟಡವು ಪ್ರಧಾನಿಗಳ ಕಚೇರಿ, ಕ್ಯಾಬಿನೆಟ್‌ ಸಚಿವಾಲಯ ಹಾಗೂ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ (NSCS) ಕಚೇರಿಗಳನ್ನ ಒಳಗೊಂಡಿರಲಿದೆ. ಇವೆಲ್ಲವೂ ಈ ಹಿಂದೆ ಪ್ರತ್ಯೇಕ ಸ್ಥಳಗಳಲ್ಲಿ ನಿರ್ಮಾಣವಾಗಿದ್ದವು.
ಏಕೆ ಸೇವಾ ತೀರ್ಥ ಹೆಸರು?
ಪ್ರಧಾನಿಗಳ ಹೊಸ ಕಚೇರಿಗೆ ʻಸೇವೆʼ ಎಂಬ ವಸ್ತುವಿಷಯವನ್ನಾಧರಿಸಿ ʻಸೇವಾ ತೀರ್ಥ-1ʼ ಎಂದು ನಾಮಕರಣ ಮಾಡಲಾಗಿದೆ. ಜೊತೆಗೆ ಸೇವೆಯ ಮಹತ್ವವನ್ನ ಬಿಂಬಿಸುವ ಆಧುನಿಕ ಕಾರ್ಯಕ್ಷೇತ್ರಗಳು ಹಾಗೂ ಭವ್ಯ ಸಮಾರಂಭ ಕೊಠಡಿಗಳನ್ನೂ ಒಳಗೊಂಡಿದೆ. ಇನ್ನೂ ಕ್ಯಾಬಿನೆಟ್ ಸಚಿವಾಲಯಕ್ಕೆ ನಿರ್ಮಿಸಲಾದ ಕಚೇರಿಗೆ ʻಸೇವಾ ತೀರ್ಥ -2ʼ, ರಾಷ್ಟ್ರೀಯ ಭದ್ರತಾ ಸಲಹೆಗಾರರ ಕಚೇರಿಗೆ ʻಸೇವಾ ತೀರ್ಥ-3ʼ ಎಂದು ನಾಮಕರಣ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು