Tuesday, March 10, 2026
ತುಮಕೂರುಸುದ್ದಿ

ತಾಳಿ ಕಟ್ಟುವಾಗಲೇ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟ ಮೊದಲ ಪತ್ನಿ…! ಮುಂದೇನಾಯ್ತು? -ಕಹಳೆ ನ್ಯೂಸ್

ತುಮಕೂರು : ತುಮಕೂರು ಕಲ್ಯಾಣ ಮಂಟಪದಲ್ಲಿ  ಹೈ ಡ್ರಾಮಾ ನಡೆದಿದೆ. ಮದುವೆಯ ಮುಹೂರ್ತದ ಸಮಯಕ್ಕೆ ಖಳನಾಯಕನ ಥರ ಎಂಟ್ರಿ ಕೊಟ್ಟ ಮೊದಲ ಪತ್ನಿ ಮದುವೆಯನ್ನು ನಿಲ್ಲಿಸಿ ಗಂಡನಿಗೆ ಸರಿಯಾದ ಶಾಕ್ ನೀಡಿದ್ದಾನೆ. ತುಮಕೂರಿನ ಕುಣಿಗಲ್ ತಾಲೂಕಿನ ಯಡಿಯೂರಿನಲ್ಲಿರುವ SLN ಕನ್ವೆನ್ಷನ್ ಹಾಲ್ ನಲ್ಲಿ ನಾಟಕೀಯ ಬೆಳವಣಿಗೆ ನಡೆದಿದೆ.

ಬೆಂಗಳೂರಿನ ವ್ಯಕ್ತಿಯೊಬ್ಬ ಮಂಡ್ಯ ಮೂಲದ ಯುವತಿಯೊಂದಿಗೆ ಎರಡನೇ ಮದುವೆಯಾಗಲು ಸಜ್ಜಾಗಿದ್ದನು. ಇದ್ರಿಂದ ರೊಚ್ಚಿಗೆದ್ದ ಮೊದಲ ಪತ್ನಿ ನೇರವಾಗಿ ವಕೀಲರು, ಪೊಲೀಸರು ಹಾಗೂ ತನ್ನ ಸಂಬಂಧಿಕರ ಪಡೆಯೊಂದಿಗೆ ಕಲ್ಯಾಣ ಮಂಟಪಕ್ಕೆ ಲಗ್ಗೆ ಇಟ್ಟು ಮದುವೆ ನಿಲ್ಲಿಸಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಮದುವೆ ಮಂಟಪಕ್ಕೆ ತಕ್ಷಣ ಎಂಟ್ರಿಕೊಟ್ಟ ಪೊಲೀಸರು ವರ ಹಾಗೂ ಆತನ ಕಡೆಯವರಿಗೆ ಕಾನೂನು ಪಾಠ ಮಾಡಿದ್ದಾರೆ ಮದುವೆಯನ್ನು ಅಲ್ಲಿಗೆ ನಿಲ್ಲಿಸಿ, ವರ, ಮೊದಲ ಪತ್ನಿ ಹಾಗೂ ಎರಡನೇ ಮದುವೆಗೆ ಸಜ್ಜಾಗಿದ್ದ ಯುವತಿಯ ಮನೆಯವರನ್ನು ಅಮೃತೂರು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ.

ಜಾಹೀರಾತು
ಜಾಹೀರಾತು