Saturday, March 7, 2026
ಸುದ್ದಿ

ಪಾಕಿಸ್ತಾನಕ್ಕೆ ಹೋಲಿಸಿದಾಗ ಸಿಟ್ಟುಗೊಳ್ಳುವ ನೀವು, ನಮ್ಮ ಸೈನಿಕರ ಮೇಲೆ ಪಾಕ್ ಪ್ರೇರಿತ ಉಗ್ರರಿಂದ ದಾಳಿಯಾದಾಗ ಖಂಡಿಸುವುದಿಲ್ಲ ಏಕೆ?: ಸದನದಲ್ಲಿ ಕಿಶೋರ್ ಕುಮಾರ್ ಪುತ್ತೂರು ಪ್ರಶ್ನೆ- ಕಹಳೆ ನ್ಯೂಸ್

ಬೆಂಗಳೂರು: “ಶಾಸಕ ಸಿ.ಟಿ. ರವಿ ಅವರು ಕಾಂಗ್ರೆಸ್ ಸದಸ್ಯರ ಹೇಳಿಕೆಯನ್ನು ಪಾಕಿಸ್ತಾನಕ್ಕೆ ಹೋಲಿಸಿದಾಗ ನಿಮಗೆ ತೀವ್ರ ಕೋಪ ಬರುತ್ತದೆ. ಪಾಕಿಸ್ತಾನ ನಮ್ಮ ಶತ್ರು ರಾಷ್ಟ್ರ ಎಂಬ ಅರಿವು ನಿಮಗಿದ್ದರೆ, ಪುಲ್ವಾಮಾ ಮತ್ತು ಪಹಲ್ಗಾಮ್‌ಗಳಲ್ಲಿ ನಮ್ಮ ಸೈನಿಕರ ಮೇಲೆ ಪಾಕ್ ಪ್ರೇರಿತ ದಾಳಿಯಾದಾಗ ನೀವು ಮೌನ ವಹಿಸುವುದು ಏಕೆ?” ಎಂದು ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ಸದನದಲ್ಲಿ ನೇರವಾಗಿ ಪ್ರಶ್ನಿಸಿದರು.

ವಿಬಿ ಜಿ – ರಾಮ್ ಜಿ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸದಸ್ಯರ ಇಬ್ಬಂದಿ ನೀತಿಯನ್ನು ತರಾಟೆಗೆ ತೆಗೆದುಕೊಂಡರು. ಕಿಶೋರ್ ಕುಮಾರ್ ಅವರು ಮಾತನಾಡುತ್ತಿದ್ದಾಗ ಕಾಂಗ್ರೆಸ್ ಸದಸ್ಯರಾದ ಶ್ರೀ ನಜ್ಹೀರ್ ಅಹಮದ್, ಶ್ರೀ ಬಿ.ಕೆ. ಹರಿಪ್ರಸಾದ್ ಹಾಗೂ ಸಚಿವ ಕೆ.ಜೆ. ಜಾರ್ಜ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಅಡ್ಡಿಪಡಿಸಲು ಯತ್ನಿಸಿದರು. ಇದಕ್ಕೆ ಜಗ್ಗದ ಕಿಶೋರ್ ಕುಮಾರ್ ಅವರು, ಪಾಕಿಸ್ತಾನದ ಯುವಕರೇ ಇಂದು “ನಮಗೆ ನರೇಂದ್ರ ಮೋದಿಯಂತಹ ಪ್ರಧಾನಿ ಬೇಕು” ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಹೀಗಿರುವಾಗ 140 ಕೋಟಿ ಜನರ ಪ್ರತಿನಿಧಿಯಾಗಿರುವ ಪ್ರಧಾನಿಗಳನ್ನು ವಿರೋಧಿಸುವ ನಿಮ್ಮ ಮನಸ್ಥಿತಿ ಎಂತಹದ್ದು ಎಂದು ಕಿಡಿಕಾರಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ತಮ್ಮ ಗ್ರಾಮೀಣ ಭಾಗದ ಪ್ರವಾಸದ ಅನುಭವವನ್ನು ಹಂಚಿಕೊಂಡ ಅವರು, “ನಾನು ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದವನು. ಇತ್ತೀಚೆಗೆ ಸುಮಾರು 378 ಪಂಚಾಯತ್‌ಗಳ ಪೈಕಿ 94 ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ, ಅಲ್ಲಿನ ಪ್ರತಿಯೊಂದು ಪಂಚಾಯತ್‌ನಲ್ಲಿ ತಲಾ ಮೂರು ಗಂಟೆಗಳ ಕಾಲ ಚರ್ಚೆ ನಡೆಸಿ ವಾಸ್ತವ ಸ್ಥಿತಿಯನ್ನು ಅರಿತು ಬಂದಿದ್ದೇನೆ. ನರೇಗಾ ಯೋಜನೆಯಲ್ಲಿ ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ವಿಬಿ ಜಿ – ರಾಮ್ ಜಿ’ಯಂತಹ ಸುಧಾರಣೆಗಳು ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿವೆ,” ಎಂದು ವಿವರಿಸಿದರು.

ಜಾಹೀರಾತು
ಜಾಹೀರಾತು

“ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕಾಗಿ ಇಡುವ ಪ್ರತಿ ಹೆಜ್ಜೆಯೂ ಈ ದೇಶದ 140 ಕೋಟಿ ಜನರ ಪ್ರಗತಿಯ ಹೆಜ್ಜೆಯಾಗಿದೆ. ಪಾಕಿಸ್ತಾನದ ವಿಚಾರದಲ್ಲಿ ನೀವು ಇಂದು ತೋರಿಸುತ್ತಿರುವ ಈ ಸಿಟ್ಟು ಅಂದು ನಿಮ್ಮ ಪೂರ್ವಜರಿಗೆ ಇದ್ದಿದ್ದರೆ ಈ ದೇಶ ಮೂರು ತುಂಡಾಗುತ್ತಿರಲಿಲ್ಲ,” ಎಂದು ಇತಿಹಾಸದ ಘಟನೆಗಳನ್ನು ಉಲ್ಲೇಖಿಸಿದರು. ವಾಜಪೇಯಿ ಅವರು ಶಾಂತಿಗಾಗಿ ಲಾಹೋರ್‌ಗೆ ಬಸ್ ಯಾತ್ರೆ ಮಾಡಿದ್ದರೂ ಪಾಕಿಸ್ತಾನ ಬೆನ್ನಿಗೆ ಚೂರಿ ಹಾಕಿದ್ದನ್ನು ಸ್ಮರಿಸಿದ ಅವರು, ವಿಕಸಿತ ಭಾರತ ಮತ್ತು ಅಖಂಡ ಭಾರತದ ನಿರ್ಮಾಣದಿಂದ ಮಾತ್ರ ದೇಶದ ಭದ್ರತೆ ಸಾಧ್ಯ ಎಂದು ಪ್ರತಿಪಾದಿಸಿದರು.