ಪುತ್ತೂರಿನ ಫ್ಯಾಷನ್ ಲೋಕದಲ್ಲಿ ಹೊಸ ಸಂಚಲನ : ಫೆ.5ಕ್ಕೆ ‘ತಮನ್ವಿ ಸಿಲ್ಕ್ಸ್’ನ ಎರಡನೇ ಮಳಿಗೆ ಲೋಕಾರ್ಪಣೆ!-ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ವಸ್ತ್ರ ಪ್ರಿಯರಿಗೆ ಸಿಹಿ ಸುದ್ದಿ! ಗುಣಮಟ್ಟ ಮತ್ತು ವಿನ್ಯಾಸಕ್ಕೆ ಹೆಸರಾಗಿರುವ ‘ತಮನ್ವಿ ಸಿಲ್ಕ್ಸ್’ ಇದೀಗ ತನ್ನ ಯಶಸ್ವಿ ಪಯಣವನ್ನು ವಿಸ್ತರಿಸುತ್ತಿದ್ದು, ಬಪ್ಪಳಿಗೆಯಲ್ಲಿ ತನ್ನ ನೂತನ ಮತ್ತು ಎರಡನೇ ಸುಸಜ್ಜಿತ ಶಾಖೆಯನ್ನು ಲೋಕಾರ್ಪಣೆಗೊಳಿಸಲು ಸಜ್ಜಾಗಿದೆ.
ತಮನ್ವಿ ಸಿಲ್ಕ್ಸ್: ಸೌಂದರ್ಯ ಮತ್ತು ಸಂಪ್ರದಾಯದ ಸಂಗಮ
ಬೊಳುವಾರಿನ ಇನ್ ಲ್ಯಾಂಡ್ ಮಯೂರ ಬಿಲ್ಡಿಂಗ್‌ನಲ್ಲಿರುವ ಮೊದಲ ಶಾಖೆಯ ಅಭೂತಪೂರ್ವ ಯಶಸ್ಸಿನ ನಂತರ, ಈಗ ಬಪ್ಪಳಿಗೆಯಲ್ಲಿ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ‘ತಮನ್ವಿ ಸಿಲ್ಕ್ಸ್’ ಎಂದರೆ ಕೇವಲ ಬಟ್ಟೆಯ ಅಂಗಡಿಯಲ್ಲ, ಅದು ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುವ ವಿಶಿಷ್ಟ ಮಳಿಗೆಯಾಗಿ ಪರಿವರ್ತಿತಗೊಂಡಿದೆ.
ವೈವಿಧ್ಯಮಯ ಕಲೆಕ್ಷನ್: ಮದುವೆ. ಗೃಹಪ್ರವೇಶ ಮತ್ತು ಯಾವುದೇ ಶುಭ ಕಾರ್ಯಕ್ರಮಗಳಿಗೆ ಹೇಳಿ ಮಾಡಿಸಿದಂತಹ ವಿಶಿಷ್ಟ ಉಡುಪುಗಳು. ಸಿಲ್ಕ್ ಸೀರೆಗಳ ಲೋಕ: ಕಾಂಜೀವರಂ. ಬನಾರಸ್, ಮೈಸೂರು ಸಿಲ್ಕ್ ಸೇರಿದಂತೆ ರೇಷ್ಮೆ ಸೀರೆಗಳ ಅದ್ಭುತ ಸಂಗ್ರಹ. ಸ್ಪರ್ಧಾತ್ಮಕ ದರ: ಅತ್ಯುತ್ತಮ ಗುಣಮಟ್ಟದ ಬಟ್ಟೆಗಳು ಕೈಗೆಟುಕುವ ಮತ್ತು ಸ್ಪರ್ಧಾತ್ಮಕ ದರದಲ್ಲಿ ಲಭ್ಯ. ಬಪ್ಪಳಿಗೆ ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್‌ನ ನೆಲ ಅಂತಸ್ತಿನಲ್ಲಿ ನೆಲೆಗೊಂಡಿರುವ ಈ ಹೊಸ ಶೋರೂಮ್. ಫೆಬ್ರವರಿ 5ರಂದು ಬೆಳಿಗ್ಗೆ 9: 15ಕ್ಕೆ ಅದ್ದೂರಿಯಾಗಿ ಉದ್ಘಾಟನೆಗೊಳ್ಳಲಿದೆ. ಈ ಶುಭ ಸಮಾರಂಭದಲ್ಲಿ ನಾಡಿನ ಗಣ್ಯರು, ಸಮಾಜಮುಖಿ ನಾಯಕರು ಹಾಗೂ ವಿವಿಧ ಕ್ಷೇತ್ರದ ಸಾಧಕರು ಉಪಸ್ಥಿತರಿದ್ದು. ದೀಪ ಪ್ರಜ್ವಲಿಸುವ ಮೂಲಕ ಮಳಿಗೆಗೆ ಚಾಲನೆ ನೀಡಲಿದ್ದಾರೆ.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಪುತ್ತಿಲ ಪರಿವಾರದ ಸ್ಥಾಪಕ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್, ನಗರಸಭೆಯ ಮಾಜಿ ಅಧ್ಯಕ್ಷರಾದ ಜೀವಂಧರ್ ಜೈನ್ ಹಾಗೂ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಉಪಸ್ಥಿತರಿರುವರು.
ಅಲ್ಲದೆ, ಕುಂಜೂರು ಅನ್ಸಾರುದ್ದೀನ್ ಜಮಾತ್ ಕಮಿಟಿ ಅಧ್ಯಕ್ಷ ಹಾಜಿ ಅಬ್ದುಲ್ ರಹಮಾನ್ ಆಜಾದ್, ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ್ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿ ಕುಮಾರ್ ರೈ ಬಾಲ್ಯೊಟ್ಟು, ಯು.ಆರ್ ಪ್ರಾಪರ್ಟೀಸ್ ಎಂ.ಡಿ ಉಜ್ವಲ್ ಪ್ರಭು, ವಿಜಯ ಸಾಮ್ರಾಟ್‌ನ ಸಹಜ್ ರೈ, ಅಕ್ಷಯ ಶಿಕ್ಷಣ ಸಮೂಹದ ಅಧ್ಯಕ್ಷ ಜಯಂತ್ ನಡುಬೈಲು, ಲಯನ್ಸ್ ಕ್ಲಬ್‌ನ ಮಾಜಿ ಜಿಲ್ಲಾ ಗವರ್ನರ್ ಡಾ. ಗೀತಾ ಪ್ರಕಾಶ್ ಎ., ಸುರಕ್ಷಾ ಹಾಸ್ಪಿಟಲ್ ವಿಟ್ಲದ ಡಾ. ಗಾಯತ್ರಿ, ವಕೀಲರಾದ ಮಹೇಶ್ ಕಜೆ ಹಾಗೂ ಶೈಲಜಾ ಅಮರನಾಥ್, ಒಕ್ಕಲಿಗ ಯುವ ಸಂಘದ ಅಧ್ಯಕ್ಷ ಅಮರನಾಥ ಗೌಡ, ನಗರಸಭೆಯ ಮಾಜಿ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ, ಜ್ಯೋತಿಷಿಗಳಾದ ಗಣೇಶ್ ಭಟ್, ಪ್ರಧಾನ ಅರ್ಚಕ ವಸಂತ್ ಕೆದಿಲಾಯ ಎ.ಎಸ್., ಐಶ್ವರ್ಯ ಬ್ಯೂಟಿ ಪಾರ್ಲರ್‌ನ ಐಶ್ವರ್ಯ ಚಂದ್ರಶೇಖರ್, ಎಸ್.ಡಿ.ಪಿ ರೆಮೆಡೀಸ್‌ನ ರೂಪಲೇಖ ಮತ್ತು ಸೈಕಾಲಜಿಸ್ಟ್ ಹಾಗೂ ಆರ್ಟಿಸ್ಟ್ ಅದಿತಿ ಎಂ.ಎಸ್ ಉಪಸ್ಥಿತರಿರಲಿದ್ದಾರೆ.
ಸಮಾಜದ ವಿವಿಧ ಹಿರಿಯರು ಮತ್ತು ಗಣ್ಯರ ಉಪಸ್ಥಿತಿಯು ಈ ಸಮಾರಂಭಕ್ಕೆ ಹೆಚ್ಚಿನ ಮೆರಗು ನೀಡಲಿದೆ. ಅತ್ಯಾಕರ್ಷಕ ವಿನ್ಯಾಸಗಳು ಮತ್ತು ಗುಣಮಟ್ಟದ ವಸ್ತ್ರಗಳ ಲೋಕವನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರಿಗೆ ಮಳಿಗೆಯ ಮಾಲೀಕರಾದ ಶ್ರೀಮತಿ ಮಾಲಾಶ್ರೀ ವಿಜೇತ್ ಅವರು ಆತ್ಮೀಯ ಆಹ್ವಾನ ನೀಡಿದ್ದಾರೆ.














