Saturday, March 7, 2026
ಸುದ್ದಿ

ಬಳಂತಿಮೊಗರು ಶ್ರೀ ಮಲರಾಯ, ಮಹಿಷಂದಾಯ, ಧೂಮಾವತಿ, ರಕೇಶ್ವರಿ, ಪಂಜುರ್ಲಿ, ಕಲ್ಲುರ್ಟಿ-ಕಲ್ಕುಡ, ನೆತ್ತರ್‌ಕಣ್ ಮತ್ತು ಪರಿವಾರ ದೈವಗಳ ದೈವಸ್ಥಾನ ಮತ್ತು ಸುವರ್ಣ ಕುಟುಂಬಸ್ಥರ ತರವಾಡು ಮನೆ ಆಡಳಿತ ಟ್ರಸ್ಟ್ (ರಿ.) ನಲ್ಲಿ ಜ.30 ಮತ್ತು ಜ.31ರಂದು ಶ್ರೀ ದೈವಗಳ ವರ್ಷಾವಧಿ ನೇಮೋತ್ಸವ – ಕಹಳೆ ನ್ಯೂಸ್

ಬಂಟ್ವಾಳ ತಾಲೂಕಿನ ಬಳಂತಿಮೊಗರು ಶ್ರೀ ಮಲರಾಯ, ಮಹಿಷಂದಾಯ, ಧೂಮಾವತಿ, ಪಂಜುರ್ಲಿ, ಕಲ್ಲುರ್ಟಿ-ಕಲ್ಕುಡ, ನೆತ್ತರ್‌ಕಣ್ ಮತ್ತು ಪರಿವಾರ ದೈವಸ್ಥಾನದಲ್ಲಿ ಶ್ರೀ ಧೂಮಾವತಿ, ಪಂಜುರ್ಲಿ, ಗುಳಿಗ, ಕಲ್ಕುಡ-ಕಲ್ಲುರ್ಟಿ ಹಾಗೂ ಪರಿವಾರ ದೈವಗಳಿಗೆ ವರ್ಷಾವಧಿ ನೇಮೋತ್ಸವವು ಜ.30 ಮತ್ತು ಜ.31ರಂದು ನಡೆಯಲಿದೆ.


ದಿನಾಂಕ 23-01-2026 ಶುಕ್ರವಾರರಂದು ಬೆಳಿಗ್ಗೆ ಗಂಟೆ 7-00ಕ್ಕೆ ಗೊನೆ ಮುಹೂರ್ತ ನಡೆದಿದ್ದು, ಜ.30ರ ಬೆಳಗ್ಗೆ ಗಂಟೆ 6-00ರಿಂದ ಗಣಪತಿ ಹೋಮ, ನಾಗ ತಂಬಿಲ, ಹರಿಸೇವೆ ನಡೆದು ಮಧ್ಯಾಹ್ನ ಗಂಟೆ 1-00ಕ್ಕೆ ಅನ್ನಸಂತರ್ಪಣೆ ಹಾಗೂ ಸಂಜೆ ಗಂಟೆ 5-00ಕ್ಕೆ ಶ್ರೀ ಮಲರಾಯ, ಮಹಿಷಂದಾಯ, ಧೂಮಾವತಿ, ಪಂಜುರ್ಲಿ, ರಕ್ತಶ್ವರಿ, ಗುಳಿಗ, ಕಲ್ಲುರ್ಟಿ-ಕಲ್ಕುಡ ಹಾಗೂ ಪರಿವಾರ ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ. ಸಂಜೆ ಗಂಟೆ 6-00ಕ್ಕೆ ಶ್ರೀ ಧೂಮಾವತಿ ದೈವದ ಹಾಗೂ ಪಂಜುರ್ಲಿ ದೈವದ ಭಂಡಾರ ತೆಗೆದು, ರಾತ್ರಿ 7-00ರಿಂದ ಪುದಕೋಲ, 8-00ಕ್ಕೆ ಗೊಂದೋಳು ಪೂಜೆ, 9-30ಕ್ಕೆ ಗುಳಿಗ ದೈವದ ನೇಮ ಹಾಗೂ ರಾತ್ರಿ ಗಂಟೆ 10-00ಕ್ಕೆ ಅನ್ನಸಂತರ್ಪಣೆ ಬಳಿಕ ರಾತ್ರಿ ಗಂಟೆ 10-30ಕ್ಕೆ ಪಂಜುರ್ಲಿ ದೈವದ ನೇಮ ನಡೆಯಲಿದೆ.
ಜ.31ರಂದು ಬೆಳಗ್ಗೆ ಗಂಟೆ 9-00ಕ್ಕೆ ಶ್ರೀ ಧೂಮಾವತಿ ದೈವದ ನೇಮ ನಡೆದು ಮಧ್ಯಾಹ್ನ ಗಂಟೆ 1-00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ರಾತ್ರಿ ಗಂಟೆ 7-00ಕ್ಕೆ ಶ್ರೀ ಕಲ್ಲುರ್ಟಿ-ಕಲ್ಕುಡ ದೈವದ ನೇಮ ಹಾಗೂ ರಾತ್ರಿ ಗಂಟೆ 8-30ಕ್ಕೆ ಅನ್ನಸಂತರ್ಪಣೆ ನಡೆಯಲಿದ್ದು, ಆ ಪ್ರಯುಕ್ತ ಭಗವದ್ಭಕ್ತರು, ಗ್ರಾಮಸ್ಥರು ಹಾಗೂ ಕುಟುಂಬಸ್ಥರೆಲ್ಲರೂ ಆಗಮಿಸಿ ಶ್ರೀ ದೈವಗಳ ತಂಬಿಲಾದಿ ನೇಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೈವಗಳ ಗಂಧ-ಪ್ರಸಾದ ಸ್ವೀಕರಿಸುವಂತೆ ವಿನಂತಿಸಲಾಗಿದೆ. ಹಾಗೂ ಭಕ್ತಾದಿಗಳಿಂದ ನೀಡಲ್ಪಡುವಂತಹ ಹೊರೆಕಾಣಿಕೆ, ಅನ್ನದಾನ ಸೇವೆ, ಹೂ-ಹಿಂಗಾರ, ಸಹಾಯ ಧನ ಇತ್ಯಾದಿಗಳನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು