Saturday, March 7, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದಲ್ಲಿ ಜನಪ್ರತಿನಿಧಿಗೆ ಜನ ಗೌರವ ಕೊಡುವುದಿಲ್ಲ : ಶಾಸಕ ಅಶೋಕ್ ರೈ – ಕಹಳೆ ನ್ಯೂಸ್

ಪುತ್ತೂರು: ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಜನರಿಗೆ ನಾನಾ ಭರವಸೆಗಳನ್ನು ನೀಡುತ್ತಾರೆ, ಆದರೆ ಚುನಾವಣೆಯ ಬಳಿಕ ಅದನ್ನು ಪೂರ್ಣವಾಗಿ ಮರೆತುಬಿಡುತ್ತಾರೆ,ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದಲ್ಲಿ ಜನ ಗೌರವ ಕೊಡುವುದಿಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಪಾಣಾಜೆ ಸೇವಾ ಸಹಕಾರಿ ಸಂಘದ ಸಭಾ ಭವನದಲ್ಲಿ ನಡೆದ ತಾಲೂಕು ಮಟ್ಟದ ಅಕ್ರಮ ಸಕ್ರಮ ಬೈಠಕ್ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಕಳೆದ ಚುನಾವಣಾ ಸಮಯದಲ್ಲಿ ಪಂಚ ಗ್ಯಾರಂಟಿ ಭರವಸೆ ನೀಡಿತ್ತು ಅಧಿಕಾರವಹಿಸಿದ ಮೂರೇ ತಿಂಗಳಲ್ಲಿ ಅದನ್ನು ಈಡೇರಿಸಿದೆ. ಕಳೆದ ಚುನಾವಣೆಯಲ್ಲಿ ನಾನು ನನ್ನ ಕ್ಷೇತ್ರದ ಜನತೆಗೂ ಭರವಸೆ ನೀಡಿದ್ದೆ. ಐದು ಭರವಸೆಗಳ ಪೈಕಿ ನಾಲ್ಕು ಭರವಸೆ ಈಡೇರಿಸಿದ್ದೇನೆ ಇನ್ನೊಂದು ಬಾಕಿ ಇದ್ದು ಅದು ಪ್ರಗತಿ ಹಂತದಲ್ಲಿದ್ದೆ. ನಾನು ಹೇಳಿದ ಭರವಸೆಯನ್ನು ತೀರಿಸಬೇಕೆಂಬ ಹಂಬಲದಲ್ಲಿದ್ದೇನೆ ಎಂದು ಹೇಳಿದರು. ಪುತ್ತೂರಿಗೆ ಮೆಡಿಕಲ್ ಕಾಲೇಜು, ದೇವಸ್ಥಾನಗಳ ಅಭಿವೃದ್ದಿ, ಅಕ್ರಮ ಸಕ್ರಮ ,94 ಸಿ 94 ಸಿ ಸಿ ಹಕ್ಕು ಪತ್ರವಿತರಣೆ, ನಿವೇಶನ ರಹಿತರಿಗೆ ನಿವೇಶನ ಹಂಚಿಕೆ, ತಾಲೂಕು ಕ್ರೀಡಾಂಗಣ ಸೇರಿದಂತೆ ಹತ್ತು ಹಲವು ಅಭಿವೃದ್ದಿ ಕೆಲಸವನ್ನು ಮಾಡಿದ್ದು ಜನ ಇದನ್ನು ಸ್ವೀಕರಿಸಿದ್ದಾರೆ ಎಂಬ ನಂಬಿಕೆ ಇದೆ ಎಂದು ಶಾಸಕರು ಹೇಳಿದರು.

ಜಾಹೀರಾತು
ಜಾಹೀರಾತು

ಮುಂದಿನ ಮೂರು ವರ್ಷದಲ್ಲಿ 30 ಸಾವಿರ ಉದ್ಯೋಗ ಸೃಷ್ಟಿ:
ಮುಂದಿನ ಮೂರು ವರ್ಷದಲ್ಲಿ ಪುತ್ತೂರಿನಲ್ಲಿ 30 ಸಾವಿರ ಉದ್ಯೋಗ ಸೃಷ್ಟಿಯಾಗಿದೆ. ಮೆಡಿಕಲ್ ಕಾಲೇಜು ನಿರ್ಮಾಣದಲ್ಲಿ 8 ಸಾವಿರ,ಕೇಂಎಫ್ ನಿಂದ 7 ಸಾವಿರ ಹಾಗೂ ಆಯುರ್ವೆದ ಕಾಲೇಜು, ಫಿಸಿಯೋಥೆರಫಿ ಕಾಲೇಜು, ಪಶು ವೈದ್ಯಕೀಯ ಕಾಲೇಜು, ಆರ್ ಟಿ ಒ ಟ್ರ್ಯಾಕ್ ಸೇರಿದಂತೆ ಹಲವು ಉದ್ಯಮಗಳು ಪುತ್ತೂರಿಗೆ ಬರಲಿದ್ದು ಇವೆಲ್ಲವೂ ಪುತ್ತೂರಿಗೆ ಬರಲಿದ್ದು ಈ ಮೂಲಕ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಶಾಸಕರು ತಿಳಿಸಿದರು.

ಉಳ್ಳವರು ಸಕ್ರಮ ಮಾಡಿದರಯ್ಯಾ..
ಬಡವ ಏನು ಮಾಡಲಿ…

ಈ ಹಿಂದೆ ನೂರಾರು ಅಕ್ರಮ ಸಕ್ರಮ ಆಗಿದೆ ಆದರೆ ಬಡವರ ಕಡತ ಕಚೇರಿಯ ಕಪಾಟಿನಲ್ಲೇ ಇತ್ತು. ಹಣ ಕೊಟ್ಟವನಿಗೆ ಮಾತ್ರ ಭೂಮಿ ಸಕ್ರಮದ ಹಕ್ಕು ಎಂಬಂತಿತ್ತು ಆದರೆ ನಾನು ಶಾಸಕನಾದ ಮೇಲೆ ಆ ನಿಯಮಕ್ಕೆ ಬ್ರೇಕ್ ಹಾಕಿದ್ದೇನೆ. ಜನರಿಂದ ಮರೆಯಾಗಿ ನಡೆಯುತ್ತಿದ್ದ ಬೈಠಕ್ ಈಗ ಗ್ರಾಮದಲ್ಲಿ ಲೈವಾಗಿ ನಡೆಯುತ್ತಿದೆ,ಮುಂದೆಯೂ ನಡೆಯುತ್ತದೆ.‌ನಿಮ್ಮ‌ ಮನೆಯ ಅಡಿಸ್ಥಳಕ್ಕೆ ಹಕ್ಕು ಪತ್ರ ಕೊಟ್ಟೇ ಕೊಡ್ತೇನೆ, ಸ್ವಾಧೀನದಲ್ಲಿದ್ದ ಜಾಗವನ್ನು ಸಕ್ರಮ ಮಾಡಿಯೇ ಸಿದ್ದ ಎಂದ ಶಾಸಕರು ಚುನಾವಣೆಯ ಸಮಯದಲ್ಲಿ ನಿಮ್ಮ ಆಶೀರ್ವಾದ ಕೊಟ್ಟರೆ ಇನ್ನಷ್ಟುಕೆಲಸ ಮಾಡಲು ಸಾಧ್ಯ ಎಂದು ಶಾಸಕರು ಹೇಳಿದರು.

ಹಿಂದುತ್ವದ ಭಾಷಣ ಮಾಡಿದವರೇ ದೇವಸ್ಥಾನದ ಜಾಗ ಒಳಗೆ ಹಾಕಿದ್ರು:

ಮೈಕ್ ಸಿಕ್ಕಿದರೆ ಸಾಕು ಇವರ ಬಾಯಲ್ಲಿ ಹಿಂದುತ್ವದ ಭಾಷಣ ಬರುತ್ತಿತ್ತು. ಭುಜಕ್ಕೊಂದು ಶಾಲು ಹಾಕಿ ಧರ್ಮದ ಬಗ್ಗೆ ಏನು ಭಾಷಣ ಇವರದ್ದು… ಭಾಷಣ ಮಾಡಿದ ಬಳಿಕ ದೇವರ ಜಾಗವನ್ನು‌ಕಬಳಿಸಿ ಅದರಲ್ಲಿ ಮನೆ ಕಟ್ಟಿ ಬಾಡಿಗೆ ಗೆ ಕೊಟ್ಟು ಹತ್ತೂರ ಒಡೆಯನಿಗೇ ಮೋಸ ಮಾಡಿದ್ದರು ಅವರೆಲ್ಲರಿಗೂ ತಕ್ಕ ಪಾಠ ಕಲಿಸಲಾಗಿದೆ. ಭಕ್ತರ ಆಸೆಯಂತೆ ಮುಂದೆ ದೇವಳ ಅಭಿವೃದ್ದಿ ಹೊಂದಲಿದೆ. ದೇವರ ಜಾಗವನ್ನು ತಿನ್ನಲು ಯಾರಿಗೂ ಬಿಡುವುದಿಲ್ಲ ಎಂದು ಶಾಸಕರು ಹೇಳಿದರು.

ಬಡವರ ಕೆಲಸ ಮಾಡದವರು ಇಲ್ಲಿಗೆ ಬೇಡ:
ಯಾವುದೇ ಅಧಿಕಾರಿಯೇ ಇರಲಿ ಕ್ಷೇತ್ರದ ಜನರ ಕೆಲಸ ಮಾಡಬೇಕು ಅದರಲ್ಲೂ ಬಡವರ ಕೆಲಸ ಚಾಚೂ ತಪ್ಪದೆ ಮಾಡಬೇಕು. ಕೆಲಸ ಮಾಡದ ಅಧಿಕಾರಿಗಳು ಇಲ್ಲಿರುವುದು ಬೇಡ ಎಂದು ಹೇಳಿದ ಶಾಸಕರು ಜನರ ಕೆಲಸ ಮಾಡುವಲ್ಲಿ ಹಿಂದಕ್ಕೆ ಜಾರಿದರೆ ನನ್ನಿಂದ ಬೈಗುಳ ಕೇಳಬೇಕಾದೀತು ಎಂದು ಎಚ್ಚರಿಸಿದ ಶಾಸಕರು ಪುತ್ತೂರಿನಲ್ಲಿ ಬಹುತೇಕರು ಉತ್ತಮ ಅಧಿಕಾರಿಗಳೇ ಆಗಿದ್ದಾರೆ ಎಂದು ಹೇಳಿದರು.

ಅಕ್ರಮ‌ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ ನುಡಿದಂತೆ ನಡೆಯುವ ಜಿಲ್ಲೆಯ ಏಕೈಕ ಶಾಸಕ ಅಶೋಕ್ ರೈ ಅವರ ಬಳಿ ಸುಳ್ಯ, ಬೆಳ್ತಂಗಡಿ ಹಾಗೂ ಬಂಟ್ವಾಳ ಕ್ಷೇತ್ರದ ಸಾರ್ವಜನಿಕರು ಆಗಮಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದ್ದಾರೆ.ಜಿಲ್ಲೆಯ ಬಿಜೆಪಿ ಶಾಸಕರು ಅಶೋಕ್ ರೈ ಜೊತೆ ಸೇರಿಕೊಂಡು ಕುಮ್ಕಿ ವಿಚಾರದಲ್ಲಿ ಹೋರಾಟ ನಡೆಸಬೇಕು ಎಂದು ಮನವಿ ಮಾಡಿದರು.

ತಹಶಿಲ್ದಾರ್ ಕೂಡ್ಲಿಗಿ ಮಾತನಾಡಿ ಬಡವರ ಪರ ಇರುವ ಶಾಸಕರನ್ನು ಆಯ್ಕೆ ಮಾಡಿದ ಪುತ್ತೂರಿನ‌ಜನತೆ ಭಾಗ್ಯವಂತರು, ಅವರನ್ನು ಇನ್ನಷ್ಟು ದಿನ ಪುತ್ತೂರಿನ ಶಾಸಕರಾಗಿ ಉಳಿಸಿಕೊಳ್ಳುವ ಮೂಲಕ ಕ್ಷೇತ್ರದ ಅಭಿವೃದ್ದಿ ಮಾಡಿಸಿ ಎಂದು ಹೇಳಿದರು.
ವೇದಿಕೆಯಲ್ಲಿ ಅಕ್ರಮ ಸಕ್ರಮ‌ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ , ರೂಪರೇಖಾ ಆಳ್ವ,ಪಾಣಾಜೆ ಗ್ರಾಪಂ ಅಧ್ಯಕ್ಷೆ ಮೈಮೂನತುಲ್ ಮೆಹ್ರಾ ಉಪಸ್ಥಿತರಿದ್ದರು.

ಕಂದಾಯ ನಿರೀಕ್ಷಕ ಗೋಪಾಲ ಸ್ವಾಗತಿಸಿದರು. ಡಿ ಟಿ ರವಿಕುಮಾರ್ ವಂದಿಸಿದರು. ಗ್ರಾಮ ಆಡಳಿತಾಧಿಕಾರಿ ಮಂಜುನಾಥ್ ಬಿ, ಪ್ರೀತಂ,ಸುನಿತಾ, ಸರೋಜಾ,ರಾಧಾಕೃಷ್ಣ,ಅಶ್ವಿನಿ, ವಿಜಯ್ ಸಹಕರಿಸಿದರು.