Saturday, March 7, 2026
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ಗಿಲ್ಲಿ ಬಿಗ್‌ ಬಾಸ್‌ ವಿನ್ನರ್‌ ಆದ್ರೆ ಅರ್ಧ ಗಡ್ಡ, ಮೀಸೆ ತೆಗೆಯುತ್ತೇನೆ ಅಂತ ಚಾಲೆಂಜ್‌ – ನುಡಿದಂತೆ ನಡೆದ ವ್ಯಕ್ತಿ – ಕಹಳೆ ನ್ಯೂಸ್

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಗಿಲ್ಲಿ ನಟ ವಿನ್ನರ್‌ ಆದರೆ ಅರ್ಧ ಗಡ್ಡ ಮತ್ತು ಮೀಸೆ ತೆಗೆಯುತ್ತೇನೆಂದು ಚಾಲೆಂಜ್‌ ಮಾಡಿದ್ದ ವ್ಯಕ್ತಿಯೊಬ್ಬರು ನುಡಿದಂತೆ ನಡೆದುಕೊಂಡಿದ್ದಾರೆ.

ಅಬ್ದುಲ್‌ ರಜಾಕ್‌ ಎಂಬ ವ್ಯಕ್ತಿ ಈ ಸವಾಲು ಹಾಕಿದ್ದರು. ಗಿಲ್ಲಿ ಗೆಲುವು ದಾಖಲಿಸುತ್ತಿದ್ದಂತೆ, ಅರ್ಧ ಗಡ್ಡ ಮತ್ತು ಮೀಸೆಯನ್ನು ತೆಗೆದಿದ್ದಾರೆ. ಇದನ್ನು ವೀಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಒಂದುವೇಳೆ ಗಿಲ್ಲಿ ಬಿಗ್‌ ಬಾಸ್‌ನಲ್ಲಿ ವಿನ್ನರ್‌ ಆದ್ರೆ ಅರ್ಧ ಗಡ್ಡ ಮತ್ತು ಮೀಸೆಯನ್ನು ತೆಗೆಯುತ್ತೇನೆಂದು ಚಾಲೆಂಜ್‌ ಮಾಡಿದ್ದೆ. ಅವರು ಗೆದ್ದಿದ್ದಾರೆ. ಗಿಲ್ಲಿನ ಫ್ಯಾನ್ಸ್‌ ಗೆಲ್ಲಿಸಿದ್ದಾರೆ. ಅದಕ್ಕಾಗಿ ಗಡ್ಡ, ಮೀಸೆ ತೆಗೆಯುತ್ತಿದ್ದೇನೆ ಎಂದು ವೀಡಿಯೋದಲ್ಲಿ ವ್ಯಕ್ತಿ ಹೇಳಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು

ಬಿಗ್‌ ಬಾಸ್‌ ಸೀಸನ್‌ 12ರ ವಿಜೇತರಾಗಿ ಗಿಲ್ಲಿ ನಟರಾಜ್‌ ಹೊರಹೊಮ್ಮಿದ್ದಾರೆ. ರಕ್ಷಿತಾ ಶೆಟ್ಟಿ ರನ್ನರ್‌ ಅಪ್‌ ಹಾಗೂ ಅಶ್ವಿನಿ ಗೌಡ 2ನೇ ರನ್ನರ್‌ ಅಪ್‌ ಆಗಿದ್ದಾರೆ. ಗಿಲ್ಲಿ ನಟನಿಗೆ 50 ಲಕ್ಷ ರೂ., ಕಾರು ಹಾಗೂ ಸುದೀಪ್‌ ಅವರ ಕಡೆಯಿಂದ 10 ಲಕ್ಷ ರೂ. ಬಹುಮಾನ ಸಿಕ್ಕಿದೆ.

ಗಿಲ್ಲಿ ವಿನ್‌ ಆಗ್ತಿದ್ದಂತೆ ತವರಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಜನರು ಮತ್ತು ಅಭಿಮಾನಿಗಳು ವಿನ್ನರ್‌ಗೆ ಅದ್ಧೂರಿ ಸ್ವಾಗತ ಕೋರಲು ತವರು ಮಳವಳ್ಳಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಗಿಲ್ಲಿ ನಟನಿಗೆ ಎಲ್ಲೆಡೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.