Saturday, March 7, 2026
ಅಂಕಣದಕ್ಷಿಣ ಕನ್ನಡಪುತ್ತೂರುರಾಜಕೀಯರಾಜ್ಯಸುದ್ದಿ

ಪುತ್ತೂರು ಬಿಜೆಪಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿದ ಯುವ ಉದ್ಯಮಿ ; ಪುತ್ತೂರು ಬಿಜೆಪಿಯ ಮುಂದಿನ ಅಭ್ಯರ್ಥಿಯಾಗ್ತಾರಾ ಯುವ ನಾಯಕ.!? ಬಿಸಿ ಬಿಸಿ ಚರ್ಚೆ – ಕಹಳೆ ನ್ಯೂಸ್

ಸಂಪಾದಕೀಯ :

ಪ್ರೀತಿಯ ಓದುಗ ಮಿತ್ರರೇ, ನಮಸ್ಕಾರ
ಹತ್ತೂರಿನಲ್ಲೂ ಪುತ್ತೂರಿನದ್ದೇ ಚರ್ಚೆ. ಯಾಕೆ ಅಂತೀರಾ..!? ಕಾರಣ ಉಂಟು. ಕಳೆದ ವಿಧಾನಸಭಾ ಚುನಾವಣೆ ಪುತೂರಿನ ರಾಜಕೀಯ ಇತಿಹಾಸದಲ್ಲೇ ಒಂದು ಹೊಸ ಅಧ್ಯಾಯವನ್ನು ಬರೆದದ್ದಂತು ನಿಜ. ಆದರೂ, ಬಿಜೆಪಿ ಪಾಲಿಗೆ ಕಹಿಯಾಗಿಯೇ ಪರಿಣಮಿಸಿದೆ ಎಂಬುವುದು ಸುಳ್ಳಲ್ಲ. ಚುನಾವಣೆ ಗೆದ್ದು ಬೀಗಿದ ಅಶೋಕ್ ಕುಮಾರ್ ರೈ, ೨೦೦೦ ಮತಗಳ ಅಂತರದಲ್ಲಿ ಸೋತ ಅರುಣ್ ಕುಮಾರ್ ಪುತ್ತಿಲ, ೩ ನೇ ಸ್ಥಾನದಲ್ಲಿ ತೃಪ್ತಿಪಟ್ಟ ಕಮಲದ ಅಭ್ಯರ್ಥಿ ಅಶಾ ತಿಮ್ಮಪ್ಪ ಗೌಡ ಎಲ್ಲರೂ ಒಂದೇ ಗೂಡಿನ ಹಕ್ಕಿಗಳು. ಆದರೆ, ಕಾಲ ಎಲ್ಲವನ್ನೂ ಬದಲಾಯಿಸಿತು. ಗುಡುಬಿಟ್ಟು ಹಾರಿದ ಅಶೋಕ್ ರೈ ಕೈ’ಹಿಡಿದು ಶಾಸಕರಾದ್ರು.. ಪಕ್ಷ ಏನೂ ಕೊಟ್ಟಿಲ್ಲ ಎಂದು ಪಕ್ಷೇತರ ನಿಂತ ಪುತ್ತಿಲ ಮಾತ್ರ.., ಗೂಡನ್ನೇ ಒಡೆಯುವಲ್ಲಿ ಯಶಸ್ವಿಯಾದ್ರು..!! ಇನ್ನು ಪಾಪಾ ಬಿಡಿ… ಆಶಾ ತಿಮ್ಮಪ್ಪ ಅವರದ್ದೇನು ತಪ್ಪಿರ್ಕಿಲ್ಲ.. ಅಂದುಕೊಳ್ಳೊದು, ಒಳ ಲಾಭಿ ಶಿವನೇ ಬಲ್ಲ. ಅಂತು ಕಮಲ ಪಡೆಗೆ ರಾಂಗ್ ಚಾಯ್ಸ್ ಇನ್ ರಾಂಗ್ ಟೈಮ್ ಆಗಿಬಿಡ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಬಿಜೆಪಿ ತನ್ನ ಸರ್ವಶ್ರೇಷ್ಠನಾಯಕ ಯೋಗಿ ಆದಿತ್ಯನಾಥರನ್ನೇ ಪುತ್ತೂರಿಗೆ ಕರೆಸಿ, ಪುತ್ತೂರು ರಸ್ತೆಗಳ ದರ್ಶನ ಮಾಡಿಸಿದ್ದು, ಬಿಟ್ರೆ ಏನೂ ಪ್ರಯೋಜನ ಆಗಲೇ ಇಲ್ಲ. ಫಾರ್ ಆ ಚೇಂಜ್.. ಅಲ್ಲೂ ಎಂದಿನಂತೆ ಪುತ್ತಿಲ ಮೈಲೇಜ್ ತೆಗೆದುಕೊಳ್ತಿದ್ರು ಆದ್ರೆ, ಬಿಜೆಪಿ ಚುನಾವಣಾ ಪ್ರಚಾರ ಮತ್ತು ಪುತ್ತಿಲ ಪಕ್ಷೇತರ ಅಭ್ಯರ್ಥಿ ಆದದ್ದರಿಂದ ಆಯ್ತು.., ಬಚ್ಚಾವು ಮಾರ್ರೆ ಎಂದು ಕೆಲ ಯುವಕರೂ ಸಹಿತ ನಾಯಕರು ಎದುಸಿರು ಬಿಟ್ಟುಕೊಂಡದ್ದು, ಮರೆಯೂವುದುಂಟೆ. ಪ್ರಚಂಡ ಸೋಶಿಯಲ್ ಮೀಡಿಯಾ ವಾರ್! ಸರಿ – ತಪ್ಪು ಚರ್ಚೆ, ಕೆಸರೆರೆಚಾಟ.! ಎಲ್ಲವೂ ಚುನಾವಣೆ ಅಂದ್ರೆ ಸಹಜ. ಆದರೂ ಸಂಘ ಪರಿವಾರದ ಭದ್ರಕೋಟೆಯ ಈ ಸೋಲು ಪರಿವಾರದ ಸಂಘಟನೆಗೆ ಬಿಸಿತುಪ್ಪವೇ ಸರಿ. ಶತಾಯ ಘತಾಯ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಲೇ ಬೇಕು ಎಂಬ ಸಂಕಲ್ಪ ಬಿಜೆಪಿಯದ್ದು. ಇನ್ನು ಕಾಂಗ್ರೆಸ್ ಅಶೋಕ್ ರೈ ಅವರನ್ನೇ ಸದ್ಯಕ್ಕೆ ನೆಚ್ಚಿಕೊಂಡಿದೆ.

ಮತ್ತೆ ಪುತ್ತೂರಿಗೆ ಪುತ್ತಿಲ ಸೋಶಿಯಲ್ ಮೀಡಿಯಾ ಕೂಗು.. ಹೌದು.. ಚುನಾವಣೆ ಬಳಿಕ, ಇನ್ನು ಒಗ್ಗಟ್ಟಾಗದಿದ್ದರೆ ಉಳಿಗಾಲ ಇಲ್ಲ ಎಂದು ಅರಿತ ಕೆಲ ಬಿಜೆಪಿ ಹಾಗೂ ಪುತ್ತಿಲ ಬೆಂಬಲಿಗರು ಜೊತೆಯಾಗಿ ರಾಜ್ಯ ನಾಯಕರು ಮನೆಗೆ ದುಂಬಾಲು ಬಿದ್ದು, ಕೊನೆಗೂ ಪುತ್ತಿಲ ಬಿಜೆಪಿ ಮರು ಸೇರ್ಪಡೆ ಪ್ರಹಾಸನ ಯಶಸ್ವಿಯಾಗಿ ನಡೆಯಿತಾದರೂ, ಹೇಗಾದರೂ ಅಧಿಕಾರ ಸಿಗುವುದು ಕಷ್ಟ ಎಂಬ ಮುನ್ಸೂಚನೆ ಸಿಗುತ್ತಲೆ, ಮತ್ತೆ ಬೆಕ್ಕಿನ ಬಿಡಾರ ಬೇರೆ ಎನ್ನುತ್ತಿರುವುದು ನಿಜ ಅಲ್ವಾ! ಪುತ್ತಿಲ ಸೇರ್ಪಡೆ ಸಂದರ್ಭದಲ್ಲಿ ಪುತ್ತಿಲ ಬೆಂಬಲಿಗರು ಬಿಜೆಪಿಯಲ್ಲಿ ನಾಲ್ಕಾರು ಪೋಸ್ಟ್ ಗಿಟ್ಟಿಸಿಕೊಂಡಿದ್ದರಾದರೂ, ಪಕ್ಷ ಸಂಘಟನೆಯ ಯಾವುದೇ ಕಾರ್ಯಕ್ರಮಗಳಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತಿಲ ಎಂದು ಆರೋಪಿಸಿ, ಬಿಜೆಪಿ ಜವಾಬ್ದಾರಿಯಿಂದ ಅವರನ್ನು ಮುಕ್ತಗೊಳಿಸಿ, ಹೊಸ ಪದಾಧಿಕಾರಿಗಳ ಆಯ್ಕೆಯನ್ನು ಜಿಲ್ಲಾ ಬಿಜೆಪಿ ಮಾಡಿತ್ತು, ಉಳಿದ ಒಂದೆರಡು ಪುತ್ತಿಲ ಬೆಂಬಲಿಗರು ರಾಜೀನಾಮೆ ಕೊಟ್ಟರು, ಆದರೆ, ಬಿಜೆಪಿ ಸೇರಿದ ಮೊದಲ ದಿನದಿಂದಲೇ ಪಕ್ಷದ ಜೊತೆ ಸಕ್ರೀಯರಾಗಿದ್ದ, ಪುತ್ತಿಲ ಬಣದಲ್ಲಿ ಗುರುತಿಸಲ್ಪಟ್ಟ, ಬಿಜೆಪಿ ಜಿಲ್ಲಾ ನಾಯಕ ಪ್ರಸನ್ನ ಮಾರ್ತರಿಗೂ ರಾಜೀನಾಮೆ ನೀಡುವಂತೆ ಪುತ್ತಿಲ ಬಲಗೈ ಬಂಟರು ಒತ್ತಡ ಹಾಕಿದ್ರು, ಜಗ್ಗದೇ ಇದ್ದಾಗ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮದಲ್ಲಿ ಅವರನ್ನು ಅಪಮಾನಿಸುವ ಕೆಲಸವೂ ನಡೆದದ್ದು, ಸುಳ್ಳಲ್ಲ..!! ಒಟ್ಟಿನಲ್ಲಿ ದಿನ ಕಳೆಯುತ್ತಿದ್ದಂತೆ ಬಿಜೆಪಿ vs ಪುತ್ತಿಲ ವಾರ್ ಜಾಸ್ತಿಯಾಗುತ್ತಲೇ ಇದೆ. ಮತ್ತು ಮುಂದಿನ ಬಾರಿಯೂ ಪುತ್ತಿಲ ಸ್ಪರ್ಧೆ ಇರಬಹುದು ಎಂದು ಒಂದಿಷ್ಟು ಮಂದಿ ಹೇಳುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಬಿಜೆಪಿ ಮುಂದಿನ ಅಭ್ಯರ್ಥಿ ಯಾರು.!? ಎಂಬುದು ಯಕ್ಷ ಪ್ರಶ್ನೆಯಾಗಿದೆ.

 ಅಶೋಕ್ ಕುಮಾರ್ ರೈ ಮರಳಿ ಗೂಡು ಸೇರಲಿದ್ದಾರೆಯೇ..?


ಕೈ ಹಿಡಿದು ಶಾಸಕರಾದ ಅಶೋಕ್ ಕುಮಾರ್ ರೈ ಕೊಟ್ಯಾಂತರ ರೂಪಾಯಿ ಅನುದಾನಗಳನ್ನು ಕ್ಷೇತ್ರಕ್ಕೆ ತರುವಲ್ಲಿ ಯಶಸ್ವಿಯಾಗಿದ್ರೂ, ಕೆಲ ಕಾಂಗ್ರೆಸ್ಸಿಗರು ಇನ್ನು ಪೂರ್ಣಪ್ರಮಾಣದಲ್ಲಿ ಅಶೋಕ್ ಕುಮಾರ್ ರೈ ನಮ್ಮವರು ಎಂದು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಾರೆ.. ರೈ ಸಹಜವಾಗಿಯೇ ದೇವಸ್ಥಾನ, ಗೋ ಸಂರಕ್ಷಣೆ, ಹಿಂದೂ ಧರ್ಮದ ಅಗಾದ ವಿಚಾರಧಾರೆಗಳನ್ನು ತಮ್ಮಲ್ಲಿ ಮೈಗೂಡಿಸಿಕೊಂಡವರು ಅದರಲ್ಲಿ ಗೋ ಹಂತಕರ ಕೈ ಕಡಿಯಬೇಕು, ಅತ್ಯಾಚಾರಿಗಳನ್ನು ಗಲ್ಲಿಗೆ ಹಾಕಬೇಕು ಎಂದು ಕಟುವಾಗಿಯೇ ಹೇಳಿಕೆಗಳನ್ನು ನೀಡಿರುವುದು ಗಮನಾರ್ಹ ಸಂಗತಿ. ಕಾಂಗ್ರೆಸ್ಸಿನಲ್ಲಿ ಇದ್ದರೂ, ಬಿಜೆಪಿಗರೂ ಅಶೋಕ್ ಕುಮಾರ್ ರೈ ಯವರನ್ನು ಅಷ್ಟಾಗಿ ಟೀಕಿಸುವುದಾಗಲೀ, ವೇದಿಕೆಗಳಲ್ಲಿ ಅಶೋಕ್ ರೈ ವಿರುದ್ಧ ಮಾತನಾಡುವುದಾಗಲೀ, ಕಂಡುಬಂದಿಲ್ಲ.. ಅಶೋಕ್ ರೈ ಅವರು ಸಹ ಬಿಜೆಪಿ, ಸಂಘ ಪರಿವಾರದ ಹಿರಿಯ ನಾಯಕರೊಂದಿಗೆ ಒಳ್ಳೆಯ ಸಂಬಂಧವನ್ನು ಇಂದಿಗೂ ಕಾಪಾಡಿಕೊಂಡು ಬಂದಿದ್ದಾರೆ.. ಇವೆಲ್ಲವನ್ನೂ ಗಮನಿಸಿದ್ರೆ, ಬಿಜೆಪಿ ಅಶೋಕ್ ಕುಮಾರ್ ರೈ ಅವರನ್ನು ದ್ವೇಷಿಸುವುದಿಲ್ಲ.. ಅಶೋಕ್ ಕುಮಾರ್ ರೈ ಬಿಜೆಪಿಯನ್ನು ದೂರುವುದಿಲ್ಲ.. ಇಂಪ್ಯಾಕ್ಟ್ ಬಿಜೆಪಿಗರಿಗೆ ಪುತ್ತಿಲಕ್ಕಿಂತ ಅಶೋಕ್ ಕುಮಾರ್ ರೈ ಮೇಲೆಯೇ ಒಲವು.. !
ಅಶೋಕ್ ಕುಮಾರ್ ರೈ ಕೈ’ಗೆ ಕೈಕೊಟ್ಟು ಬಿಜೆಪಿಗೆ ಮರಳಿ ಬಂದರೂ ಆಶ್ಚರ್ಯ ಇಲ್ಲ ಎಂದು ಕೆಲ ವ್ಯಕ್ತಿಗಳು ವ್ಯಾಖ್ಯಾನ ಮಾಡಿದ್ರೆ, ಇನ್ನೂ ಕೆಲವರು ನಳಿನ್ ಕುಮಾರ್ ಕಟೀಲ, ಹಾಲಿ ಶಾಸಕ ಹರೀಶ್ ಪೂಂಜ.. ಕೆಲವರಂತೂ ನ್ಯಾಯವಾದಿ ಅರುಣ್ ಶ್ಯಾಮ್ ಹೀಗೆ ಒಬ್ಬೊಬ್ಬರ ಹೆಸರು ಹೇಳುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಬಿಜೆಪಿ ಉನ್ನತಮಟ್ಟದ ನಾಯಕರು, ಸಂಘದ ಹಿರಿಯರು ಹೊಸ ಮುಖದ ಹುಡುಕಾಟದಲ್ಲಿರುವುದು ನೂರಕ್ಕೆ ನೂರರಷ್ಟು ಸತ್ಯ.

ಅರುಣ್ ಕುಮಾರ್ ಪುತ್ತಿಲ ಮಾಸ್ ಲೀಡರ್ ಹೌದು.. ನೋ ಡೌಟ್..!


ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತಿಲ ಸ್ಪರ್ಧೆ ಮತ್ತು ಸೋಲಿನ ಅಂತರ ಈ ಮಾತುಗಳನ್ನು ಪುಷ್ಟಿಕರಿಸಿದೆ. ಪುತ್ತಿಲರ ಜೊತೆ ಇರುವ ಅವರಿಗಾಗಿಯೇ ಏನೂ ಬೇಕಾದರೂ ಮಾಡುತ್ತೇವೆ ಎನ್ನುವ ಯುವಕರ ಪಡೆ ಪುತ್ತಿಲ ವರ್ಚಸ್ಸು ಹೆಚ್ಚಿಸಿದ್ರೆ, ಸಹಜವಾಗಿಯೇ ಬಿಜೆಪಿಯೊಳಗಿನ ಕೆಲ ಸ್ಥಳೀಯ ನಾಯಕರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದ್ದು, ಅಷ್ಟೇ ಸತ್ಯ.. ನಿಜವಾಗಿಯೂ ಪುತ್ತಿಲ ಎಲ್ಲರೊಂದಿಗೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡು, ಸಂಘ ಪರಿವಾರದ ಹಿರಿಯರಿಗೆ ಗೌರವ ನೀಡಿ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರೆ, ಅಂದರೆ ಹತ್ತರೊಟ್ಟಿಗೆ ಹನ್ನೊಂದಾಗದೆ ಹತ್ತರಲ್ಲಿ ತಾವು ಒಬ್ಬರಾಗಿ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ನೋ ಡೌಟ್.. ಇವತ್ತು ಪುತ್ತೂರಿಗೆ ಪುತ್ತಿಲರೇ ಶಾಸಕರು ಪ್ರತಿ ಹಂತದಲ್ಲೂ ರೇಬಲ್ ಮನಸ್ಥಿತಿ ಇಂದು ಪುತ್ತಿಲರನ್ನೂ ಶಾಸಕ ಸ್ಥಾನದಿಂದ ವಂಚಿತರನ್ನಾಗಿ ಮಾಡಿದೆ ಆದರೆ ಸಾವಿರಾರು ಹಿಂದುತ್ವದ ಕಾರ್ಯಕರ್ತರಲ್ಲಿ ನಮ್ಮ ನಾಯಕ ಎಂಬ ಭಾವನೆಯನ್ನು ಮತ್ತಷ್ಟು ಜಾಗೃತಗೊಳಿಸಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದಾಂತು ಪುತ್ತಿಲರಿಗೆ ಟಿಕೇಟ್ ಸಿಗುವುದು ಬಹುತೇಕ ಡೌಟೇ..? ಎಲ್ಲಾ ಲೆಕ್ಕಾಚಾರ ಸರಿಯಾಗುತ್ತಿದ್ದರೆ ಪುತ್ತಿಲ ಬೆರೆತು ಕೆಲಸ ಮಾಡುತ್ತಿದ್ದರೆ ಇಂದು ಈ ಪ್ರಶ್ನೆಯೇ ಅಪ್ರಸ್ತುತ. ಮೊನ್ನೆ ಮೊನ್ನೆ ನನ್ನನ್ನು ಎರಡು ಮಂಡಲವನ್ನು ಒಂದು ಮಾಡಿ, ಅಧ್ಯಕ್ಷನನ್ನಾಗಿ ಮಾಡಿ, ಬಿಜೆಪಿಯನ್ನು ಗೆಲ್ಲಿಸುತ್ತೇನೆ ಎಂದು ಸುದ್ದಿಗೋಷ್ಟಿಯಲ್ಲಿ ಘಂಟಾಘೋಷವಾಗಿ ಹೇಳಿದ ಪುತ್ತಿಲರ ಗಟ್ಟಿಧ್ವನಿ ಅವರ ಸಂಘಟನ ಚಾಕಚಕ್ಯೆತೆಗೆ ಹಿಡಿದ ಕೈಗನ್ನಡಿ ಹೌದು ಅದರ ಜೊತೆಗೆ ಅದು ಎಲ್ಲವೂ ಸರಿ ಇಲ್ಲ ಎಂಬುವುದರ ಪ್ರತಿಫಲನವೂ ಹೌದು..

ಯುವ ಉದ್ಯಮಿಯ ಹೆಸರು ಮುನ್ನಲೆಗೆ..


ಹೌದು, ಯುವ ಉದ್ಯಮಿ ಉಜ್ವಲ್ ಪ್ರಭು ಹೆಸರು ಇದೀಗ ಮುನ್ನಲೆಗೆ ಬಂದಿದ್ದು, ಬಿಜೆಪಿ ವಲಯದಲ್ಲೂ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಅವರ ಲೇಔಟ್ ಉದ್ಘಾಟನಾ ಕಾರ್ಯಕ್ರಮ ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಮಾಜಿ ಸಚಿವ ಮಾಧುಸ್ವಾಮಿ ಸೇರಿದಂತೆ ಬಿಜೆಪಿಯ ಪ್ರಮುಖ ಜಿಲ್ಲೆಯ ನಾಯಕರು ಜನ ಪ್ರತಿನಿಧಿಗಳು ಸಾಕ್ಷಿಯಾಗಿದ್ರು, ಇನ್ನು ಉಜ್ವಲ್ ಪ್ರಭು ಯುವಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ಸಂಜೀವ ಮಠಂದೂರು ಶಾಸಕರಾಗಿದ್ದಾಗಲೂ, ಕಳೆದ ಚುನಾವಣೆಯ ಸಂದರ್ಭದಲ್ಲೂ ಪಕ್ಷಕ್ಕೆ ಕೆಲಸ ಮಾಡಿದ್ದು ಗಮನಾರ್ಹ ಸಂಗತಿ. ಅಧಿಕೃತ ಜವಾಬ್ದಾರಿ ಇಲ್ಲದಿದ್ದರೂ, ಬಿಜೆಪಿ ಜೊತೆ ಉಜ್ವಲ್ ಗುರುತಿಸಿಕೊಂಡಿದ್ದರು. ಹಾಗೆಂದು ಕಾಂಗ್ರೆಸ್ ನಾಯಕರ ಜೊತೆಗೆ ಸ್ನೇಹಾಚಾರವನ್ನು ಹೊಂದಿರುವುದನ್ನು ಕಾಣಬಹುದು. ಇನ್ನು ಅರುಣ್ ಕುಮಾರ್ ಪುತ್ತಿಲ ಜೊತೆಗೂ ಉತ್ತಮ ಸ್ನೇಹ ಹೊಂದಿದ್ದು, ಕಳೆದ ಚುನಾವಣೆ ಸಂದರ್ಭದಲ್ಲಿ ಪುತ್ತಿಲ ಪಕ್ಷದ ವಿರುದ್ಧ ಹೋಗದಂತೆ ಮನವೊಲಿಸುವಲ್ಲಿಯೂ ಉಜ್ವಲ್ ಅವರು ಪ್ರಯತ್ನಿಸಿದ ಬಗ್ಗೆಯೂ ನಂಬಲರ್ಹ ಮೂಲಗಳಿಂದ ಮಾಹಿತಿ ಇದೆ.
ಸಂಘದ ಹಿನ್ನೆಲೆಯನ್ನು ನೋಡುವುದಾದರೆ, ಸಂಘದ ಹಿರಿಯರಾದ ಎಸ್.ಆರ್. ರಂಗಮೂರ್ತಿಯವರ ಅಳಿಯ ಈ ಉಜ್ವಲ್ ಪ್ರಭು. ಹಾಗೂ ಅನೇಕ ಸಂಘದ ಕಾರ್ಯಕ್ರಮಗಳಲ್ಲಿ ಪಥಸಂಚಲನದಲ್ಲಿ ಭಾಗವಹಿಸುವುದನ್ನು ಗಮನಿಸಬಹುದು. ಹೀಗೆ ಬಿಜೆಪಿ ಹಾಗೂ ಸಂಘ ಪರಿವಾರದ ಜೊತೆಗಿನ ನಂಟು ಹೊಸದಲ್ಲ.

ಇತ್ತಿಚೆಗೆ ಉಜ್ವಲ್ ಪ್ರಭು ಹೆಸರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಅವರು ” ಪಕ್ಷದ ಹೈಕಮಾಂಡ್ ನನ್ನ ಮೇಲೆ ವಿಶ್ವಾಸ ವ್ಯಕ್ತಪಡಿಸಿರುವುದು ಸತ್ಯ. ಆದರೆ ನಾನು ಸ್ಪಷ್ಟವಾಗಿ ಹೇಳಿರುವುದು ಒಂದೇ ಈ ಕ್ಷೇತ್ರದಲ್ಲಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ. ಅವರ ಗೆಲುವಿಗಾಗಿ ಸಂಪೂರ್ಣವಾಗಿ ದುಡಿಯುತ್ತೇನೆ. ” ಹೀಗೆ ಹೇಳಿದ್ದಾರೆ. ಒಂದು ವೇಳೆ ಮುಂದೆ ಪಕ್ಷದ ರಾಷ್ಟ್ರೀಯ ನಾಯಕರು ಒತ್ತಡ ಹಾಕಿದರೆ ಉಜ್ವಲ್ ಸ್ಫರ್ಧೆ ಮಾಡಿದ್ರು ಆಶ್ಚರ್ಯ ಇಲ್ಲ.. ಒಟ್ಟಿನಲ್ಲಿ ಇನ್ನು ಚುನಾವಣೆಗೆಎರಡುವರೆ ವರುಷ ಇದ್ದರೂ ಬಿಜೆಪಿಯಲ್ಲಿ ಈಗಲೇ ಮುಂದಿನ ಅಭ್ಯರ್ಥಿಯ ಕುರಿತು ಚರ್ಚೆಗಳು ಆರಂಭವಾಗಿದ್ದು, ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.