
ಕೇರಳದ ಕೊಲ್ಲಂನಲ್ಲಿ ಗುರುವಾರ ಭಾರತೀಯ ಕ್ರೀಡಾ ಪ್ರಾಧಿಕಾರ (SAI) ನಡೆಸುತ್ತಿರುವ ಹಾಸ್ಟೆಲ್‌ನಲ್ಲಿ ಇಬ್ಬರು ಐಊಔ ಕ್ರೀಡಾಪಟುಗಳ ಮೃತದೇಹ ಪತ್ತೆಯಾಗಿದ್ದು, ಮೃತರನ್ನು ಕೋಚಿಕೋಡ್‌ನ ವೈಷ್ಣವಿ (15 ವರ್ಷ), ತಿರುವನಂತಪುರಂನ ಸಂದ್ರಾ ಎಂದು ಗುರುತಿಸಲಾಗಿದೆ.
ಗುರುವಾರ ಬೆಳಗ್ಗೆ ಐದು ಗಂಟೆಯ ಸುಮಾರಿಗೆ ಈ ದುರಂತ ಬೆಳಕಿಗೆ ಬಂದಿದೆ.
ಬಾಲಕಿಯರು ತರಬೇತಿಗೆ ಹಾಜರಾಗದ ಹಿನ್ನೆಲೆಯಲ್ಲಿ, ಅಧಿಕಾರಿಗಳು ಕ್ರೀಡಾಪಟುಗಳ ಕೊಠಡಿಗೆ ತೆರಳಿ ಪ್ರವೇಶಿಸಿದ್ದಾರೆ. ಕೋಣೆಯ ಹೊರಗಡೆ ನಿಂತು ಪದೆ ಪದೆ ಕರೆದರೂ ಸಹ ಕ್ರೀಡಾಪಟುಗಳು ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದಾಗ, ಸಿಬ್ಬಂದಿಗಳು ಬಾಗಿಲನ್ನು ಒಡೆದು ಒಳಗೆ ಪ್ರಾಲಕಿವೇಶಿಸಿದ್ದಾರೆ. ಆಗ ಬಾಲಕಿಯರಿಬ್ಬರ ಮೃತದೇಹಗಳು ಕಂಡು ಬಂದಿವೆ.














