Saturday, March 7, 2026
ದಕ್ಷಿಣ ಕನ್ನಡಮಂಗಳೂರುಯಕ್ಷಗಾನ / ಕಲೆಸುದ್ದಿ

ಜ.17 ರಿಂದ 19 ರ ತನಕ “ದ ದಾಪರ್ ಎಕ್ಸ್ಪೋ ಚಿತ್ರ ಕಲಾ ಪ್ರದರ್ಶನ”…. !

ಮಂಗಳೂರು:ಉದಯ ಕೃಷ್ಣ ಜಿ ಮತ್ತು ನಿಯತಿ. ಯು ಭಟ್ ಬೆಂಗಳೂರು ತಂದೆ ಮತ್ತು ಮಗಳು ಜೊತೆಯಾಗಿ ನಡೆಸುವ ದ ದಾಪರ್ ಎಕ್ಸ್ಪೋ ನಾಮದ ಚಿತ್ರ ಕಲಾ ಪ್ರದರ್ಶನವು ಜನವರಿ 17 ರಿಂದ 19 ರ ತನಕ ನಗರದ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ ಎಂದು ಖ್ಯಾತ ಚಿತ್ರ ಕಲಾವಿದರಾದ ಉದಯ ಕೃಷ್ಣ ಜಿ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡು , ಕಾರ್ಯಕ್ರಮದ ಉದ್ಘಾಟನೆಯು ಜನವರಿ 17 ರಂದು ಅಪರಾಹ್ನ 3 ಗಂಟೆಗೆ ನಡೆಯಲಿದ್ದು . ಉದ್ಘಾಟನೆಯನ್ನು ವಿಶ್ರಾಂತ ಪ್ರಾಂಶುಪಾಲರಾದ ಪ್ರೋ ಜಿ ಎನ್ ಭಟ್ , ಖ್ಯಾತ ಜಾದೂ ಕಲಾವಿದರಾದ ಪ್ರೋ ಶಂಕರ್ , ಖ್ಯಾತ ಚಿತ್ರ ಕಲಾವಿದರಾದ ಗಣೇಶ ಸೋಮಯಾಜಿ ನಡೆಸುವರು . ಈ ಚಿತ್ರಕಲಾ ಪ್ರದರ್ಶನದಲ್ಲಿ ಪೈಂಟಿಂಗ್ ಆರ್ಟ್ , ಡ್ರಾಯಿಂಗ್ , ಫೋಟೋಗ್ರಾಫಿ , ಮಂಡಳ ಆರ್ಟ್ , ಸ್ಟ್ರಿಂಗ್ ಆರ್ಟ್ ಗಳೆಂಬ 5 ತರದ ಚಿತ್ರಗಳ ಬೇರೆ ಬೇರೆ ಪ್ರದರ್ಶಗಳಿವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಖ್ಯಾತ ಚಿತ್ರ ಕಲಾವಿದರಾದ ಗಣೇಶ ಸೋಮಯಾಜಿ, ಕೋಟಿ ಪ್ರಸಾದ್ ಆಳ್ವ  ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು