ಮಡಿಕೇರಿ : ತನ್ನ ತಂದೆಯನ್ನು ಕೊಂದು ಸುಟ್ಟು ಹಾಕಿದ ಆರೋಪದ ಮೇರೆಗೆ ಪ್ರಶಾಂತ್ (27) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬುರೊ ಮುದಿ (65) ಕೊಲೆಯಾದವರು. ಪ್ರಕರಣ ಮುಚ್ಚಿ ಹಾಕಲು ಸಹಕರಿಸಿದ ಆರೋಪದ ಮೇರೆಗೆ ಇತರ 7 ಮಂದಿಯನ್ನೂ ಪೊಲೀಸರು ಬಂಧಿಸಿದ್ದಾರೆ. ‘ಪಶ್ಚಿಮ ಬಂಗಾಳದ ಆರೋಪಿ ಪ್ರಶಾಂತ್ ತಾಲ್ಲೂಕಿನ ಹೊಸ್ಕೇರಿ ಗ್ರಾಮದ ತೋಟವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ.
ಭಾನುವಾರ ಜಗಳ ಉಂಟಾಗಿ ದೊಣ್ಣೆಯಿಂದ ಪ್ರಶಾಂತ್ ತನ್ನ ತಂದೆಯನ್ನು ಹೊಡೆದು ಕೊಲೆ ಮಾಡಿದ್ದ. ಬಳಿಕ ಮೃತದೇಹವನ್ನು ಸುಟ್ಟು ಹಾಕಿದ್ದ. ತೋಟದಲ್ಲಿದ್ದ ಇತರ 7 ಮಂದಿ ಈ ಪ್ರಕರಣವನ್ನು ಮುಚ್ಚಿ ಹಾಕಲು ಸಹಕಾರ ನೀಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














