Saturday, March 7, 2026
ಸುದ್ದಿ

ಮಾರ್ಚ್ 6 ರಂದು ರಾಜ್ಯ ಬಜೆಟ್ ಮಂಡನೆಗೆ ಚಿಂತನೆ- ಕಹಳೆ ನ್ಯೂಸ್

ಬೆಂಗಳೂರು: ಮುಂಬರುವ ಮಾರ್ಚ್‌ ತಿಂಗಳಿನಲ್ಲಿ ಬಜೆಟ್‌  ಮಂಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಮಾರ್ಚ್‌ 6ರಂದು ಬಜೆಟ್‌ ಮಂಡಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್ 5 ರಿಂದ ಬಜೆಟ್ ಅಧಿವೇಶನ ಶುರುವಾಗುವ ಸಾಧ್ಯತೆ ಇದೆ. ಅಂದು ವಿಧಾನ ಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದು, ಮಾರ್ಚ್ 6 ರಂದು ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಿದ್ರಾಮಯ್ಯ ದಾಖಲೆಯ ಬಜೆಟ್‌
ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಕಿತ್ತಾಟದ ನಡುವೆಯೂ ಸಿದ್ದರಾಮಯ್ಯ ದಾಖಲೆ ಬಜೆಟ್‌ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. 16 ಬಜೆಟ್‌ಗಳನ್ನ ಈಗಾಗಲೇ ಮಂಡಿಸಿದ್ದು, ಮಾರ್ಚ್‌ 6ರಂದು ಮಂಡಿಸುವ ಬಜೆಟ್‌ 17ನೇ ಬಜೆಟ್‌ ಆಗಲಿದೆ.

ಜಾಹೀರಾತು
ಜಾಹೀರಾತು
ಇನ್ನೂ 2025-26ನೇ ಸಾಲಿನ ಕೇಂದ್ರ ಬಜೆಟ್  ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌  ಅವರು ಫೆಬ್ರವರಿ 1ರ ಭಾನುವಾರ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ.