ಸಾಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ನಡೆದ 2025 -26ನೇ ಸಾಲಿನ ಕಲಿಕಾ ಹಬ್ಬಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ಸಾಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025 -26ನೇ ಸಾಲಿನ ಕಲಿಕಾ ಹಬ್ಬ ಕಾರ್ಯಕ್ರಮವು ಇಂದು ನಡೆಯಿತು.
ಕಾರ್ಯಕ್ರಮವನ್ನು ಮೊದಲು ಮೆರವಣಿಗೆಯ ಮೂಲಕ ಪ್ರಾರಂಭಿಸಿ ನಂತರ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷರಾಗಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುಧಾಕರ್ ನಾಯಕ್ ಉದ್ಘಾಟಕರಾಗಿ ಪಂಚಾಯತ್ ಅಧ್ಯಕ್ಷರಾದ ಪರಮೇಶ್ವರಿ ಬಿ ,ರಾಧಾಕೃಷ್ಣ ಆಳ್ವ ಅಧ್ಯಕ್ಷರು ರೋಟರಿ ಕ್ಲಬ್ ನಾರಾಯಣ್ ರೈ ಸಾಜ ,ಪುತ್ತೂರು ಬಿ ಆರ್ ಸಿ ಕೇಂದ್ರದ ಬಿ ಆರ್ ಪಿ ನವೀನ್ ಸ್ಟೀಫನ್ ವೇಗಸ್, ಬಿ ಆರ್ ಪಿ ನಾಗೇಶಪಾಟಾಲಿ, ಬಿ ಆರ್ ಪಿ ರತ್ನ ಮತ್ತು ಕವಿತಾ, CRP ಶಾಲಿನಿ ಬಿ,ನಿವ್ರತ್ತ ಮುಖ್ಯ ಶಿಕ್ಷಕಿ ಜಯಲಕ್ಷ್ಮಿವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಾಗೂ ಇರ್ದೆಉಪ್ಪಳಿಗೆ ಕ್ಲಸ್ಟರ್ CRP ಶಾಲಿನಿ ಬಿ ಪ್ರಸ್ತಾವಿಕ ಮಾತುಗಳಾಡಿದರು ಮುಖ್ಯೋಪಾಧ್ಯಾಯರಾದ ಶಶಿಕಾಂತ್ ಸಿ ಸ್ವಾಗತಿಸಿದರು, ಕವಿತಾ ಹೆಚ್ ಎಲ್ ಕಾರ್ಯಕ್ರಮ ನಿರೂಪಿಸಿದರು , ಹಿರಿಯ ಶಿಕ್ಷಕಿ ಸುವರ್ಣ ಲತಾ ಪಿ ಕಾರ್ಯಕ್ರಮ ವಂದಿಸಿದರು.














