Tuesday, March 10, 2026
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ : ಜೀರ್ಣೋದ್ಧಾರ ಹಾಗೂ ಆಡಳಿತ ಸಮಿತಿ ವತಿಯಿಂದ ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಭೇಟಿ – ಕಹಳೆ ನ್ಯೂಸ್

ವಿಟ್ಲ: ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಮಾ.30ರಿಂದ ಏ.6ರವರೆಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ದೇವಸ್ಥಾನದ ಬ್ರಹ್ಮಕಲಶೋತ್ಸವ, ಜೀರ್ಣೋದ್ಧಾರ ಹಾಗೂ ಆಡಳಿತ ಸಮಿತಿ ಭೇಟಿ ಮಾಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಸ್ವಾಮೀಜಿ ಅವರಿಂದ ಸ್ವರ್ಣ ಮಂತ್ರಾಕ್ಷತೆ ಪಡೆದು, ಬ್ರಹ್ಮಕಲಶೋತ್ಸವಕ್ಕೆ ಆಹ್ವಾನಿಸಲಾಯಿತು. ಉಭಯ ಸಮಿತಿಗಳ ಗೌರವಾಧ್ಯಕ್ಷರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಡಾ. ಅರುಣ್ ಶ್ಯಾಮ್, ಕಾರ್ಯದರ್ಶಿ ಕೃಷ್ಣ ಮಾಣಿಪ್ಪಾಡಿ, ಕಾರ್ಯಾಧ್ಯಕ್ಷರಾದ ಶ್ಯಾಮ ಸುದರ್ಶನ ಹೊಸಮೂಲೆ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ಆಡಳಿತ ಮೊಕ್ತೇಸರರಾದ ಸತ್ಯನಾರಾಯಣ ಭಟ್ ಸೇರಾಜೆ ಶ್ರೀಗಳ ಮಾರ್ಗದರ್ಶನ ಪಡೆದರು.

ಜಾಹೀರಾತು
ಜಾಹೀರಾತು