ರಾತ್ರಿ ಮನೆಯಲ್ಲಿ ಮಲಗಿದ್ದ ತಾಯಿ-ಮಗು ಬೆಳಗಾಗುವಷ್ಟರಲ್ಲಿ ಕೆರೆಯಲ್ಲಿ ಶವವಾಗಿ ಪತ್ತೆ – ಕಹಳೆ ನ್ಯೂಸ್

ಸುಳ್ಯ : ರಾತ್ರಿ ಮನೆಯಲ್ಲಿ ನಿದ್ದೆಗೆ ಜಾರಿದ್ದ ತಾಯಿ ಹಾಗೂ ಮೂರು ವರ್ಷದ ಮಗು ಇಂದು ಬೆಳಗಾಗುವಷ್ಟರಲ್ಲಿ ಮನೆಯ ಬಳಿಯ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಸುಳ್ಯ ತಾಲೂಕಿನ ಕೋಡಿಯಾಲ ಗ್ರಾಮದ ಅರ್ವಾರ ಹರೀಶ್ ಎಂಬುವವರ ಪತ್ನಿ ಮಧುಶ್ರೀ (34) ಹಾಗು ಮದು ಧನ್ವಿ (3) ಮೃತರು.
ಹರೀಶ್ ತನ್ನ ಪತ್ನಿ, ಮಗು ಹಾಗೂ ತಾಯಿ ಜೊತೆ ಅರ್ವಾರ ಮನೆಯಲ್ಲಿ ವಾಸವಾಗಿದ್ದರು. ರಾತ್ರಿ ಎಲ್ಲಾ ಕೆಲಸ ಮುಗಿಸಿ ಮಲಗಿದ್ದ ಪತ್ನಿ ಹಾಗೂ ಮಗು ಬೆಳಿಗ್ಗೆ ಎದ್ದು ನೋಡಿದಾಗ ಮನೆಯಲ್ಲಿ ಕಾಣುತ್ತಿರಲಿಲ್ಲ.
ಮನೆಯ ಬಳಿ ಇಬ್ಬರಿಗಾಗಿ ತೀವ್ರ ಹುಡುಕಾಟ ನಡೆಸಲಾಗಿದೆ. ಈ ವೇಳೆ ಮನೆಯ ಬಳಿಯ ಕೆರೆಯಲ್ಲಿ ತಾಯಿ-ಮಗುವಿನ ಶವ ಪತ್ತೆಯಾಗಿದೆ. ಮಧುಶ್ರೀ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.














