Saturday, March 7, 2026
ಉಡುಪಿಜಿಲ್ಲೆಸುದ್ದಿ

ಉಡುಪಿ: ರಿವರ್ಸ್ ತೆಗೆಯುವ ವೇಳೆ ಒಮ್ಮೇಲೆ ಹಿಮ್ಮುಖವಾಗಿ ಚಲಿಸಿದ ಕಾರು :ಇಬ್ಬರಿಗೆ ಗಾಯ – ಕಹಳೆ ನ್ಯೂಸ್

ಉಡುಪಿ: ರಿವರ್ಸ್ ತೆಗೆಯುವ ವೇಳೆ ಚಾಲಕ ನಿಯಂತ್ರಣದ ತಪ್ಪಿದ ಕಾರೊಂದು ದ್ವಿಚಕ್ರ ವಾಹನ ಮತ್ತು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಅಂಗಡಿಯೊಂದಕ್ಕೆ ನುಗ್ಗಿದ ಘಟನೆ ಉಡುಪಿ ಜಾಮೀಯಾ ಮಸೀದಿ ಸಮೀಪದ ಐರೋಡಿ ಬಿಲ್ಡಿಂಗ್ ಬಳಿ ಸಂಭವಿಸಿದೆ.

ನಗರದ ಐರೋಡಿ ಬಿಲ್ಡಿಂಗ್ ನಲ್ಲಿ ಪಾರ್ಕ್ ಮಾಡಿದ್ದ ಕಾರನ್ನು ರಿವರ್ಸ್ ತೆಗೆಯುವ ವೇಳೆ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಅತೀ ವೇಗದಿಂದ ಪರಿವಾರ್ ಸ್ವೀಟ್ ಅಂಗಡಿಯ ಕಡೆಗೆ ಹಿಮ್ಮುಖವಾಗಿ ಚಲಿಸಿದೆ. ಇದರ ಪರಿಣಾಮ ಸಿಟಿ ಸೆಂಟರ್ ಮಾರ್ಗದಿಂದ ಸಂಸ್ಕೃತ ಕಾಲೇಜು ಕಡೆಗೆ ಸಾಗುತ್ತಿದ್ದ ಬೈಕ್ ಹಾಗೂ ಆಟೋಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ಹಾಗೂ ಆಟೋ ಚಾಲಕ ಗಾಯಗೊಂಡಿದ್ದಾರೆ. ಬಳಿಕ ಕಾರು ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳನ್ನು ಗುದ್ದಿಗೊಂಡು ಚಿಪ್ಸ್ ಅಂಗಡಿಯೊಂದಕ್ಕೆ ನುಗ್ಗಿದೆ‌. ಈ ಭಯಾನಕ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು