Wednesday, March 11, 2026
ದಕ್ಷಿಣ ಕನ್ನಡಸುದ್ದಿ

ಗಡಿಪಾರು ಆದೇಶದ ಆರೋಪಿಗೆ ಪುಣಚದಲ್ಲಿ ಆಶ್ರಯ ನೀಡಿದ ವ್ಯಕ್ತಿ ವಿಟ್ಲ ಪೊಲೀಸರ ಬಲೆಗೆ.. : ರೌಡಿ ಶೀಟರ್ ಬಂಧನಕ್ಕಾಗಿ ಪೊಲೀಸರಿಂದ ತೀವ್ರ ಶೋಧ – ಕಹಳೆ ನ್ಯೂಸ್

ಠಾಣಾ ವ್ಯಾಪ್ತಿಯಲ್ಲಿ ಗಡಿಪಾರು ಆದೇಶವಿರುವ ರೌಡಿಯೊಬ್ಬನಿಗೆ ಪೊಲೀಸರ ಬಂಧನವಾಗದAತೆ ಆಶ್ರಯ ನೀಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಪುಣಚ ಗ್ರಾಮದ ಕಲ್ಲಾಜೆ ಎಂಬಲ್ಲಿ ದಾಳಿ ನಡೆಸಿದಾಗ ರೌಡಿ ಶೀಟರ್ ಪರಾರಿಯಾಗಿದ್ದು, ಆಶ್ರಯ ನೀಡಿದ ನಿವಾಸಿ ಉದಯ ರೈ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ವಿಟ್ಲ ಠಾಣಾ ವ್ಯಾಪ್ತಿಯ ಗಂಭೀರ ಪ್ರಕರಣಗಳ ಆರೋಪಿ, ರೌಡಿ ಶೀಟರ್ ಕೇಪು ಗಣೇಶ್ ಎಂಬಾತನಿಗೆ ಗಡೀಪಾರು ಆದೇಶವಾಗಿತ್ತು. ಬಂಧನಕ್ಕೆ ಬೆದರಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಈತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರು. ಆರೋಪಿ ಪುಣಚ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಆಶ್ರಯದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಬಂದಿತ್ತು. ತಕ್ಷಣವೇ ತಾಂತ್ರಿಕ ಸಾಕ್ಷ್ಯಾಧಾರದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರ ತಂಡ ಪುಣಚ ಗ್ರಾಮದಲ್ಲಿ ಹುಡುಕಾಟ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆ ಸಂದರ್ಭ ಪುಣಚ ಗ್ರಾಮದ ಕಲ್ಲಾಜೆ ನಿವಾಸಿ ಉದಯ ರೈ ಎಂಬಾತ ತನ್ನ ಹಳೆಯ ಮನೆಯಲ್ಲಿ ರೌಡಿಶೀಟರ್ ಗೆ ಆಶ್ರಯ ನೀಡಿರುವುದು ಸ್ಪಷ್ಟವಾಗಿದೆ. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ರೌಡಿಶೀಟರ್ ಗಣೇಶ್ ಪೂಜಾರಿ ಪರಾರಿಯಾಗಿದ್ದಾನೆ.

ಜಾಹೀರಾತು
ಜಾಹೀರಾತು

ಅಕ್ರಮ ಜುಗಾರಿ ಅಡ್ಡೆ ಕಿಂಗ್ ಪಿನ್ ಉದಯ ರೈ..
ಕಲ್ಲಾಜೆ ಉದಯ ರೈ ತನ್ನ ವಾಸವಿಲ್ಲದ ಹಳೆಯ ಮನೆಯಲ್ಲಿ ಪ್ರತಿನಿತ್ಯ ಜುಗಾರಿ ನಡೆಸುತ್ತಾ ಸಮಾಜಘಾತುಕರ ಪಾಲಿಗೆ ಬಾಸ್ ಆಗಿದ್ದನೆಂದು ಸ್ಥಳೀಯರು ನೇರವಾಗಿ ಆರೋಪಿಸಿದ್ದಾರೆ.