ಡಿವೋರ್ಸ್ ಕೊಟ್ಟಿದ್ದಕ್ಕೆ ಪತ್ನಿಯನ್ನು ನಡುರಸ್ತೆಯಲ್ಲಿ ಗುಂಡಿಕ್ಕಿ ಹತ್ಯೆಗೈದ ಪತಿ.-ಕಹಳೆ ನ್ಯೂಸ್

ಬೆಂಗಳೂರು: ಬೆಂಗಳೂರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಡಿವೋರ್ಸ್ ಕೊಟ್ಟಿದ್ದಕ್ಕೆ ಪತ್ನಿಯನ್ನು ಪತಿ ನಡುರಸ್ತೆಯಲ್ಲೇ ಗುಂಡಿಕ್ಕಿ ಹತ್ಯೆಗೈದ ಘಟನೆ ನಡೆದಿದೆ.
ಬೆಂಗಳೂರಿನ ಬಸವೇಶ್ವರನಗರದ ವೇಸ್ಟಿನ್ ಹೋಟೆಲ್ ಬಳಿ ಈ ಘಟನೆ ನಡೆದಿದೆ.ಬಾಲಮುರುಗನ್ ಪತ್ನಿ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ.
ಪತ್ನಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆಂದು ಶಂಕಿಸಿದ ಪತಿ ಆಕೆಗೆ ಮಾನಸಿಕ ಕಿರುಕುಳ ನೀಡುತ್ತಿದ್ದನು. ಆದ್ದರಿಂದ ಪತ್ನಿ ಡಿವೋರ್ಸ್ ಕೊಟ್ಟಿದ್ದಾಳೆ. ಇದರಿಂದ ರೊಚ್ಚಿಗೆದ್ದ ಪತಿ ನಡುರಸ್ತೆಯಲ್ಲೇ ಏಕಾಏಕಿ ಗನ್ ತೆಗೆದು ಪತ್ನಿಯ ಮೇಲೆ ಫೈರಿಂಗ್ ಮಾಡಿ ಬಾಲಮುರುಗನ್ ಕೊಲೆ ಮಾಡಿದ್ದಾರೆ. ಪತ್ನಿಯನ್ನು ಕೊಲೆ ಮಾಡಿ ಬಾಲಮುರುಗನ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾರೆ.
ಬಾಲಮುರುಗನ್ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಇತ್ತೀಚೆಗೆ ರಿಸೈನ್ ಮಾಡಿದ್ದ. ಪತ್ನಿ ಭುವನೇಶ್ವರಿ ಬ್ಯಾಂಕ್ ಉದ್ಯೋಗಿ ಆಗಿದ್ದರು.ದಂಪತಿಯ ಡೈವೋರ್ಸ್ ಕೇಸ್ ವಿಚಾರಣೆ ಕೋರ್ಟ್ ನಲ್ಲಿತ್ತು. ಇಂದು ಇಬ್ಬರೂ ವಿಚಾರಣೆ ಮುಗಿಸಿಕೊಂಡು ಬಂದಿದ್ದು, ಈ ವೇಳೆ ದಂಪತಿಯ ನಡುವೆ ಜಗಳವಾಗಿದೆ ಎನ್ನಲಾಗಿದೆ . ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ದು ಬಾಲಮುರುಗನ್ ಪತ್ನಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮಾಗಡಿ ರೋಡ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.














