ಕುದುರೆಮುಖಕ್ಕೆ ಚಾರಣ ಹೋಗಲು ತೆರಳುತ್ತಿದ್ದ ಪ್ರವಾಸಿಗರ ಬಸ್ ಪಲ್ಟಿ: ಹಲವರಿಗೆ ಗಾಯ – ಕಹಳೆ ನ್ಯೂಸ್

ಚಿಕ್ಕಮಗಳೂರು: ಕುದುರೆಮುಖ ಚಾರಣ ಹೋಗಲು ಪ್ರವಾಸಿಗರು ತೆರಳುತ್ತಿದ್ದ ಖಾಸಗಿ ಬಸ್ ಕಳಸ ಸಮೀಪದ ಕಂಚಿಗಾನೆ ತಿರುವಿನಲ್ಲಿ ಶನಿವಾರ ಬೆಳಿಗ್ಗೆ 5.30ರ ಸುಮಾರಿನಲ್ಲಿ ಪಲ್ಟಿಯಾಗಿದೆ.
ಬಸ್‌ನಲ್ಲಿ 48 ಜನ ಪ್ರಯಾಣ ಮಾಡುತ್ತಿದ್ದರು. ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, 14 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.














