ಶಾಸಕ ಶ್ರೀ ಹರೀಶ್ ಪೂಂಜಾ ಜನಸ್ಪಂದನಾ ಕಾರ್ಯಕ್ರಮದಲ್ಲಿ ಪ್ರಸ್ತಾಪವಾದ ಜನರ ಸಮಸ್ಯೆಗೆ ಪ್ರತಿಕ್ರಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು- ಕಹಳೆ ನ್ಯೂಸ್

ಇಂದಬೆಟ್ಟು 08.12.2025 ರಂದು ಇಂದಬೆಟ್ಟು ಚರ್ಚ್ ಹಾಲ್ ಸಭಾಂಗಣದಲ್ಲಿ ಮಾನ್ಯ ಬೆಳ್ತಂಗಡಿಯ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜಾ ರವರ ಅಧ್ಯಕ್ಷತೆಯಲ್ಲಿ ಇಂದಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನಸ್ಪಂದನ ಕಾರ್ಯಕ್ರಮದಲ್ಲಿ ಲಿಂಗಾಂತ್ಯಾರು, ಬೆದ್ರಪಲ್ಕೆ, ಎರ್ಮಲ ಗಡಿ ಭಾಗದ ಜನರಿಗೆ ಹಕ್ಕು ಪತ್ರ ಸಿಗದೆ ಇರುವ ಬೇಡಿಕೆಯ ಬಗ್ಗೆ ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜಾ ರವರ ಸೂಚನೆ ಮೇರೆಗೆ ಅರಣ್ಯಾ ಇಲಾಖೆ ಅಧಿಕಾರಿಗಳಾದ ವಲಯ ಅರಣ್ಯ ಅಧಿಕಾರಿಯಾದ ತ್ಯಾಗರಾಜ್ T N, ಉಪ ವಲಯ ಅರಣ್ಯ ಅಧಿಕಾರಿಯಾದ ರಾಘವೇಂದ್ರ. ಕೆ, ಹಾಗೂ ಗಸ್ತು ಅರಣ್ಯಪಾಲಕರಾದ ಪ್ರತಾಪ್ ಸ್ಥಳಕ್ಕೆ ಇಂದು 11.12.2025 ಆಗಮಿಸಿ ವಾಸ್ತವ ಸ್ಥಿತಿಯನ್ನು ಅವಲೋಕಿಸಿದರು ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಶ್ರೀಕಾಂತ್ ಎಸ್ ಇಂದಬೆಟ್ಟು, ಗ್ರಾಮಸ್ಥರಾದ ವಿ.ಜೆ ದೇವಸಿ ಎರ್ಮಲ, ರಾಮ ಮೊಯಿಲಿ ಬಂಗಾಡಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.














