ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಅವರು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ನಿವಾಸಕ್ಕೆ ಭೇಟಿ -ಕಹಳೆ ನ್ಯೂಸ್

ಕಾರ್ಕಳ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಅವರು ರವಿವಾರ ಬೆಳಗ್ಗೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದರು.

ಶೃಂಗೇರಿಗೆ ಆಗಮಿಸಿದ್ದ ಕೇಂದ್ರ ಸಚಿವರು, ಬಳಿಕ ಅಲ್ಲಿಂದ ನೇರವಾಗಿ ಕಾರ್ಕಳ ಶಾಸಕರ ನಿವಾಸಕ್ಕೆ ಆಗಮಿಸಿದರು. ಶಾಸಕರ ಕುಟುಂಬದವರು ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಸಚಿವರನ್ನು ಸ್ವಾಗತಿಸಿದರು. ಬಳಿಕ ಕುಶಾಲೋಪಚಾರಿಯಾಗಿ ಸ್ನೇಹ ಮಾತುಕತೆ ನಡೆಸಿದರು.
ಈ ಸಂಧರ್ಭದಲ್ಲಿ ಕ್ಷೇತ್ರಧ್ಯಕ್ಷರಾದ ಶ್ರೀ ನವೀನ್ ನಾಯಕ್, ಬಿಜೆಪಿ ಹಿರಿಯರಾದ ಶ್ರೀ ಮಣಿರಾಜ್ ಶೆಟ್ಟಿ , ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಮಹಾವೀರ ಹೆಗ್ಡೆ , ಪ್ರಧಾನ ಕಾರ್ಯದರ್ಶಿ ಶ್ರೀ ಸತೀಶ್ ಬೋಳ, ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ರಾಕೇಶ್ ಶೆಟ್ಟಿ, ಶ್ರೀ ಆನಂದ್ ನಾಯಕ್ ಹಾಗೂ ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.













