Sunday, March 8, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು: ಕೆಟ್ಟು ನಿಂತ ವಾಹನ; ಅಕ್ರಮ ಗೋವುಗಳನ್ನು ರಸ್ತೆಬದಿ ಬಿಟ್ಟು ಪರಾರಿಯಾದ ಗೋಕಳ್ಳರು,ವಿಶ್ವ ಹಿಂದೂ ಪರಿಷದ್‌ ಬಜರಂಗದಳದ ಕಾರ್ಯಕರ್ತರಿಂದ ರಕ್ಷಣೆ – ಕಹಳೆ ನ್ಯೂಸ್

Screenshot

ಪುತ್ತೂರು ಸರ್ವೆ ಗಡಿಪಿಲದಲ್ಲಿ ಆಕ್ರಮ ಗೋಸಾಗಾಟ ನಡೆದಿದ್ದು ಗೋಕಳ್ಳರು ಅವರ ಗೋಸಾಗಾಟದ ವಾಹನ ಹಾಳಾದುದರಿಂದ ಗೋವುಗಳನ್ನು ರಸ್ತೆಬದಿ ಬಿಟ್ಟು ಪರಾರಿಯಾದ ಶಂಕೆ ವ್ಯಕ್ತವಾಗಿದ್ದು ಸ್ಥಳದಲ್ಲಿ 5 ಗೋವುಗಳು ಪತ್ತೆಯಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ತಕ್ಷಣ ಕಾರ್ಯಪ್ರವೃತರಾದ ಸ್ಥಳೀಯ ವಿಶ್ವ ಹಿಂದೂ ಪರಿಷದ್‌ ಬಜರಂಗದಳದ ಕಾರ್ಯಕರ್ತರು ಮತ್ತು ಸ್ಥಳೀಯರು ಪುತ್ತೂರು ಪೋಲಿಸ್ ಇಲಾಖೆಯ ಸಿಬ್ಬಂದಿಗಳ ಜೋತೆ ಸೇರಿ ಗೋವುಗಳನ್ನು ಸುರಕ್ಷಿತವಾಗಿ ಪುತ್ತೂರು ನಗರ ಫೋಲಿಸ್ ಠಾಣೆಗೆ ಸಾಗಿಸಿ ರಕ್ಷಿಸಲಾಗಿದೆ.
ವಿಶ್ವ ಹಿಂದೂ ಪರಿಷದ್‌ ಬಜರಂಗದಳ ಕಾರ್ಯಕರ್ತರ ಸಹಕಾರದಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಗೋಶಾಲೆಯಿಂದ ಗೋವುಗಳಿಗೆ ಬೈಹುಲ್ಲು ವ್ಯವಸ್ಥೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು

ಈ ಆಕ್ರಮ ಗೋಸಾಗಾಟವನ್ನು ವಿಶ್ವ ಹಿಂದೂ ಪರಿಷದ್‌ ಬಜರಂಗದಳದ ವತಿಯಿಂದ ಉಗ್ರವಾಗಿ ಖಂಡಿಸುತ್ತೇವೆ ಹಾಗೂ ತಕ್ಷಣ ಆರೋಪಿಗಳನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷದ್‌ ಬಜರಂಗದಳ ಆಗ್ರಹಿಸುತ್ತದೆ.