ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಡಾ| ಡಿ ವೀರೇಂದ್ರ ಹಗ್ಗೆಡೆಯವರ ಜನುಮ ದಿನದ ನಿಮಿತ್ತ ವಿಶೇಷ ಕಾರ್ಯಕ್ರಮ -ಕಹಳೆ ನ್ಯೂಸ್

ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಡಾ| ಡಿ ವೀರೇಂದ್ರ ಹಗ್ಗೆಡೆಯವರ ಜನುಮ ದಿನಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಅದರಂತೆ ಕನ್ಯಾನ ಭಾರತ ಸೇವಾಶ್ರಮದಲ್ಲಿ ಅನ್ನದಾನ ಸೇವೆಯನ್ನು ಮಾಡಲಾಯಿತು . ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ (ರಿ) ದ.ಕ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ ರವರು ಮಾತನಾಡುತ್ತಾ ಪೂಜ್ಯರ ಹುಟ್ಟು ಹಬ್ಬದ ದಿನದಂದು ವಿಶೇಷ ದಿನ ಎಂದು ಆಚರಿಸುತ್ತಿದ್ದು, ಈ ದಿನ ಜಿಲ್ಲೆಯ ವಿವಿದ ಕಡೆ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ, ಆನಾರೋಗ ಪೀಡಿತರಿಗೆ ಆಹಾರ ಕಿಟ್ ವಿತರಣೆ , ಸ್ವಚ್ಚತಾ ಕಾರ್ಯಕ್ರಮ ಗಳು ಒಟ್ಟು 90 ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ ಎಂದರು.
ಆಶ್ರಮದ ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿ ಈಶ್ವರ್ ಭಟ್ ಮಾತನಾಡಿ ಸಮಾಜಸೇವೆಯಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಪೂಜ್ಯ ಖಾವಂದರಿಗೆ ಹುಟ್ಟು ಹಬ್ಬದ ಶುಬಾಶಯಗಳನ್ನು ತಿಳಿಸುತ್ತಾ .ಇನ್ನೂ ಕೂಡ ಇದೇ ರೀತಿ ಪೂಜ್ಯರಿಗೆ ಸಮಾಜಸೇವೆ ಮಾಡಲು ದೇವರು ಆರೋಗ್ಯ ಆಯಸ್ಸು ನೀಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿಟ್ಲ ತಾಲೂಕಿನ ಯೋಜನಾಧಿಕಾರಿ ಸುರೇಶ್ .ಗೌಡ ಎಸ್ , ಅಳಿಕೆ ವಯಲದ ಒಕ್ಕೂಟದ ವಲಯಾಧ್ಯಕ್ಷರ ರಾಜೇಂದ್ರ ರೈ, ಕೇಪು ವಲಯಾಧ್ಯಕ್ಷ ಗಣೇಶ ಮೈರುಗ, ಕಣಿಯೂರು ಒಕ್ಕೂಟದ ಅಧ್ಯಕ್ಷರಾದ ಸುಜಾತ, ಶಿರಂಕಲ್ಲು ಒಕ್ಕೂಟದ ಅಧ್ಯಕ್ಷರಾದ ಪೂವಪ್ಪ ಗೌಡ ,ಸೇವಾಪ್ರತಿನಿಧಿಯಾದ ಶೋಭಾ, ಯೋಜನಾಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹಾಗೆಯೇ ವಿಟ್ಲ ಯೋಜನಾ ವ್ಯಾಪ್ತಿಯಲ್ಲಿ ಅಳಿಕೆ ವಲಯದಲ್ಲಿ ಆರೋಗ್ಯ ತಪಾಸಣಾ ಶಿಬಿರ , ಸಿದ್ಧಿವಿನಾಯಕ ಭಜನಾ ಮಂದಿರ ತುಳಸೀವನದಲ್ಲಿ ಬಜನಾ ಕಾರ್ಯಕ್ರಮ , ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನದಲ್ಲಿ ಸರ್ವಸೇವಾ ಪೂಜೆ, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಕೋಲ್ಪೆ ಮಿತ್ತೂರು ನಲ್ಲಿ ವಿಶೇಷ ಪೂಜೆ, ಕಣಂತೂರು ತೋಡಕುಕ್ಕಿನಾರ್ ದೇವಸ್ಥಾನದಲ್ಲಿ ಸಂಕಲ್ಪ ಪೂಜೆ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಕುಡೆ ವಿಶೇಷ ಪೂಜೆ, ಶ್ರೀ ವನದುರ್ಗಾ ದೇವಸ್ಥಾನ ದೇಂತಡ್ಕ ಲ್ಲಿ ರಂಗಪೂಜೆ ಹಾಗೂ ಭಜನಾಕಾರ್ಯಕ್ರಮ, ಕುಂಡಡ್ಕ .ವಿಟ್ಲಮುಡ್ನೂರುನಲ್ಲಿ ಅನಾರೋಗ್ಯಪೀಡಿತರಿಗೆ ಕಿಟ್ ವಿತರಣೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪನಡು ನಲ್ಲಿ ರಂಗಪೂಜೆ ಹಾಗೂ ಅನ್ನಸಂತರ್ಪಣೆ ಹಮ್ಮಿ ಕೊಳ್ಳಲಾಗಿತ್ತು.













