ಪಂಚಾಯಿತಿ ಕಚೇರಿ ಮುಂದೆಯೇ ಲೋಡ್ ಗಟ್ಟಲೆ ಕಸ ಸುರಿದು ಆಕ್ರೋಶ ವ್ಯಕ್ತಪಡಿಸಿದ ಜನರು – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವವವರ ಮನೆ ಬಾಗಿಲಿನಲ್ಲಿಯೇ ಕಸ ಸುರಿದು, ದಂಡ ವಿಧಿಸಿ ಜಿಬಿಎ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಬೆಂಗಳೂರಿನ ನೆಲಮಂಗಲದಲ್ಲಿ ಅಧಿಕಾರಿಗಳ ಈ ಅಭಿಯಾನ ಉಲ್ಟಾ ಹೊಡೆದಿದೆ.
ಮನೆ ಬಳಿ ಎಷ್ಟು ದಿನವಾದರೂ ಕಸ ಸಂಗ್ರಹಿಸಲು ಬಾರದ ಕಸದ ಸಿಬ್ಬಂದಿ ಪಂಚಾಯಿತಿ ಸಿಬ್ಬಂದಿಗಳ ವಿರುದ್ಧ ನೆಲಮಂಗಲದ ಸೋಂಪುರ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದರಎ.














