ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಾಳೆ ‘ಪೋಷಕ -ಶಿಕ್ಷಕರ ಮಹಾಸಭೆ’ : ಎಲ್ಲರಿಗೂ ‘ಬಿಸಿಯೂಟ’ ನೀಡಲು ಶಿಕ್ಷಣ ಇಲಾಖೆ ಆದೇಶ.!-ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಾಳೆ ಪೋಷಕ -ಶಿಕ್ಷಕರ ಮಹಾಸಭೆ ನಡೆಯಲಿದ್ದು, ಎಲ್ಲರಿಗೂ ಬಿಸಿಯೂಟ ನೀಡಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ದಿನಾಂಕ 14.11.2025 ರಂದು ಸರ್ಕಾರದ ಆದೇಶದಂತೆ ಮಕ್ಕಳ ದಿನಾಚರಣೆ ಅಂಗವಾಗಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಪೋಷಕ-ಶಿಕ್ಷಕರ ಮಹಾಸಭೆಯನ್ನು ಆಯೋಜಿಸಲು ತಿಳಿಸಲಾಗಿದೆ.













