Saturday, March 7, 2026
ಕ್ರೈಮ್ದೆಹಲಿಸುದ್ದಿ

32 ವಾಹನ ಬಳಸಿ 4 ನಗರಗಳಲ್ಲಿ ಏಕಕಾಲದಲ್ಲಿ ಸರಣಿ ಬಾಂಬ್‌ ಸ್ಫೋಟಕ್ಕೆ ಡಾಕ್ಟರ್‌ ಗ್ಯಾಂಗ್‌ನಿಂದ ಸಂಚು!-ಕಹಳೆ ನ್ಯೂಸ್

ನವದೆಹಲಿ: ಬಂಧನಕ್ಕೆ ಒಳಗಾದ ಉಗ್ರರು ಸುಮಾರು 32 ಹಳೆಯ ವಾಹನಗಳನ್ನು ಬಳಸಿ ದೇಶದ 4 ನಗರಗಳಲ್ಲಿ ದೊಡ್ಡ ಪ್ರಮಾಣದದಲ್ಲಿ ಏಕಕಾಲದಲ್ಲಿ ಬಾಂಬ್‌ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

ಬಂಧಿತರನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು ದೆಹಲಿಯ ಹಲವು ಕಡೆ, ಅಯೋಧ್ಯೆ, ವಾರಾಣಸಿ ದೇವಸ್ಥಾನ ಸೇರಿದಂತೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ದೇಶದ ಹಲವು ಜಾಗಗಳಲ್ಲಿ ದಾಳಿ ನಡೆಸಲು ಮುಂದಾಗಿದ್ದರು.

ಐ20 ಕಾರು ಸ್ಫೋಟದಲ್ಲಿ ಹೊತ್ತಿ ಉರಿದರೆ ಇಕೋ ಸ್ಫೋರ್ಟ್‌ ಕಾರು ಹರ್ಯಾಣದಲ್ಲಿ ಬುಧವಾರ ಪತ್ತೆಯಾಗಿದೆ. ಈಗ ಈ ತಂಡಕ್ಕೆ ಸೇರಿದ ಬ್ರೀಜಾ ಕಾರನ್ನು ಪೊಲೀಸರು ಹುಡುಕುತ್ತಿದ್ದಾರೆ. ವೈದ್ಯೆ ಶಾಹೀನ್ ಶಾಹಿದ್ ಹೆಸರಿನಲ್ಲಿ ಬ್ರಿಜಾ ಕಾರ್ ನೋಂದಣಿಯಾಗಿದೆ.
32 ಕಾರುಗಳನ್ನು ಖರೀದಿಸಿದ ಬಳಿಕ ಅದರಲ್ಲಿಬಾಂಬ್‌ ಇಡಲು ಮಾರ್ಪಾಡು ಮಾಡಲು ಸಹ ಪ್ಲ್ಯಾನ್‌ ನಡೆದಿತ್ತು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಕೃತ್ಯ ಎಸಗಬೇಕಾದರೆ ಈ ಗುಂಪಿನಲ್ಲಿ ಮತ್ತಷ್ಟು ಸಂಖ್ಯೆ ಸದಸ್ಯರು ಇದ್ದಾರೆ ಎನ್ನುವುದು ದೃಢವಾಗುತ್ತದೆ. ಹೀಗಾಗಿ ಉಳಿದ ತಂಡದ ಸದಸ್ಯರ ಬಂಧನಕ್ಕೆ ಈಗ ತನಿಖಾ ಸಂಸ್ಥೆಗಳು ಮುಂದಾಗಿವೆ.

ಆರೋಪಿಗಳು ಜಂಟಿಯಾಗಿ ಸುಮಾರು 20 ಲಕ್ಷ ರೂ. ಹಣವನ್ನು ಸಂಗ್ರಹಿಸಿದ್ದರು. ಕಾರ್ಯಾಚರಣೆಯ ವೆಚ್ಚಗಳಿಗಾಗಿ ಉಮರ್‌ಗೆ ಈ ಹಣವನ್ನು ನೀಡಲಾಗಿತ್ತು. 32 ಕಾರುಗಳನ್ನು ಖರೀದಿ ಮಾಡಬೇಕಾದರೆ ಕೋಟ್ಯಂತರ ರೂ. ಹಣಕಾಸಿನ ನೆರವು ಬೇಕಾಗುತ್ತದೆ. ಇಷ್ಟೊಂದು ಹಣವನ್ನು ಇವರು ಎಲ್ಲಿಂದ ತರಲು ಮುಂದಾಗಿದ್ದರು? ಇವರಿಗೆ ಹಣ ಎಲ್ಲಿಂದ ಬರುತ್ತಿತ್ತು? ಈ ಎಲ್ಲಾ ವಿಚಾರಗಳು ಮುಂದಿನ ದಿನಗಳಲ್ಲಿ ಬೆಳಕಿಗೆ ಬರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು