Saturday, March 7, 2026
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಗಳ ಮಾದರಿ ಯೋಜನೆ “ಭವಿಷ್ಯದ ಕನಸಿಗೆ ಹಸಿರಿನ ಹೆಜ್ಜೆ“ ಗಂಗಾಪೂಜೆ ಮತ್ತು ತೀರ್ಥಧಾರಾ ಕಾರ್ಯಕ್ರಮ – ಕಹಳೆ ನ್ಯೂಸ್

ಗಂಗಾಪೂಜೆ ಮತ್ತು ತೀರ್ಥಧಾರಾ ಕಾರ್ಯಕ್ರಮ “ನೀರಿಲ್ಲದೆ ಜೀವನವಿಲ್ಲ. ನೀರಿದ್ದರೆ ಭವಿಷ್ಯವೂ ಇರುತ್ತದೆ. ನೀರು ಮನುಷ್ಯರಿಗೆ ಮಾತ್ರವಲ್ಲದೆ ಇಡೀ ಪರಿಸರ ವ್ಯವಸ್ಥೆಗೆ ಮುಖ್ಯವಾಗಿದೆ. ಸಾಕಷ್ಟು ನೀರಿಲ್ಲದೆ, ಮಾನವರ ಹಾಗೂ ಪ್ರಾಣಿಗಳ ಅಸ್ತಿತ್ವವು ಅಸಾಧ್ಯದ ಪಕ್ಕದಲ್ಲಿದೆ. ಜಲ ಸಂರಕ್ಷಣೆಯ ಮಹತ್ವವು ಇದು ಜೀವ ಉಳಿಸಲು, ಆರ್ಥಿಕತೆಯನ್ನು ಬಲಪಡಿಸಲು ಮತ್ತು ಪರಿಸರವನ್ನು ರಕ್ಷಿಸಲು ಅತ್ಯಗತ್ಯವಾಗಿದೆ. ಶುದ್ಧ ನೀರು ಸೀಮಿತ ಸಂಪನ್ಮೂಲವಾಗಿರುವುದರಿ0ದ, ಅನಗತ್ಯ ಬಳಕೆಯನ್ನು ತಡೆಯುವುದು, ಮಿತವ್ಯಯದಿಂದ ಬಳಸುವುದು ಮತ್ತು ನೀರನ್ನು ಮರುಬಳಕೆ ಮಾಡುವುದು ಮುಖ್ಯವಾಗಿದೆ. ಇದರಿಂದ ಮುಂದಿನ ಪೀಳಿಗೆಗೆ ನೀರನ್ನು ಉಳಿಸಬಹುದು ಮತ್ತು ನೀರಿನ ಕೊರತೆ, ಮಾಲಿನ್ಯ ಮತ್ತು ಪರಿಸರ ವ್ಯವಸ್ಥೆಗಳ ನಾಶವನ್ನು ತಡೆಯಬಹುದು.

ಮಾನವ ಜೀವನದ ಅಸ್ತಿತ್ವಕ್ಕೆ ಜಲ ಸಂರಕ್ಷಣೆಯ ಅರಿವು ಬಹಳ ಮುಖ್ಯ. ಜನರಲ್ಲಿ ಜಲ ಸಂರಕ್ಷಣೆಗಾಗಿ ವಿಶೇಷ ಜಾಗೃತಿ ಮೂಡಿಸುವಲ್ಲಿ ಇಂತಹ ಯೋಜನೆಗಳ ಪಾತ್ರ ಮಹತ್ವದ್ದಾಗಿರುತ್ತದೆ. ”ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಹೇಳಿದರು.
ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿ ನಡೆದ “ಭವಿಷ್ಯದ ಕನಸಿಗೆ ಹಸಿರಿನ ಹೆಜ್ಜೆ“ ಎಂಬ ಶೀರ್ಷಿಕೆಯಡಿಲ್ಲಿ ನಡೆದ ಗಂಗಾಪೂಜೆ ಮತ್ತು ತೀರ್ಥಧಾರಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೀರು ಕೇವಲ ಜೀವದ್ರವ ಮಾತ್ರವಲ್ಲ. ಅದು ಸಕಲ ಜೀವರಾಶಿಯ ಉಸಿರಿನ ತ್ರಾಣ. ಮಾನವನ ಎಲ್ಲಾ ನಾಗರಿಕತೆಗಳು ಬೆಳೆದು ಬಂದುದು ಈ ಜಲ ಮೂಲಗಳ ಬಳಿ ಎಂಬುದನ್ನುಇತಿಹಾಸ ಸಾರಿ ಹೇಳುತ್ತಿದೆ.ನೀರು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತುಆರ್ಥಿಕ ಜೀವನದಲ್ಲಿ ಅತ್ಯಂತ ಪ್ರಭಾವಿ ಸಂಪನ್ಮೂಲ ಜೊತೆಗೆ ಕೃಷಿ, ವಾಣಿಜ್ಯ, ಗಡಿರಕ್ಷಣೆ, ಸರಕು ಸಾಗಾಣಿಕೆಯ ಸಾಧನವೂ ಆಗಿದೆ. ನಮ್ಮ ಭವಿಷ್ಯದ ಪೀಳಿಗೆಗೆ, ನೀರಿನ ಭವಿಷ್ಯವನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಗಳು ಜಲ ಸಂರಕ್ಷಣೆಗೆ ತಮ್ಮದೇ ವಿಶಿಷ್ಟ ಕಾರ್ಯಯೋಜನೆಗಳನ್ನು ಹಾಕಿಕೊಂಡು ಕ್ರಿಯಾಶೀಲವಾಗಿದೆ. ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿದ್ದ ಬಾವಿಯನ್ನು ಶುಚಿಗೊಳಿಸಿ ಸಮೃದ್ಧಿಗೊಳಿಸಿ, ಕುಡಿಯುವ ನೀರಿನ ವ್ಯವಸ್ಥೆಗಾಗಿ ಬಳಸಿಕೊಳ್ಳುವ ಹಾಗೆ ಜೀವತುಂಬುವ0ತೆ ಮಾಡಿದ ಈ ಯೋಜನೆ ಮಾದರಿಯಾಗಿದೆ.ಮಳೆಯ ನೀರು ಹರಿದು ಹೋಗದಂತೆ ತಡೆ ಹಿಡಿದು ಭೂಮಿಗೆ ಇಂಗುವAತೆ ನಿಯಂತ್ರಿಸುವ ಗಿಡಗಳನ್ನು ಈ ಬಾವಿಯ ಸುತ್ತ ಬೆಳೆಸಿ ಪೋಷಿಸುವ ಮೂಲಕ ಜಲ ಸಂರಕ್ಷಣೆಯ ಪ್ರಯತ್ನವನ್ನು ಕಾರ್ಯಗತಗೊಳಿಸಲಾಗಿದೆ.

ಜಾಹೀರಾತು
ಜಾಹೀರಾತು

ಇದಕ್ಕೆ ಪೂರಕವಾಗಿ ಪುತ್ತೂರಿನ ಆಸುಪಾಸಿನ ಸುಮಾರು 50ಕ್ಕೂ ಹೆಚ್ಚು ಪುಣ್ಯಕ್ಷೇತ್ರಗಳಾದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ , ವೆಂಕಟರಮಣ ದೇವಸ್ಥಾನ ,ಮಹಮಾಯಿ ದೇವಸ್ಥಾನ ,ಕೆಮ್ಮಿಂಜೆ ದೇವಸ್ಥಾನ, ರಾಘವೇಂದ್ರ ಮಠ, ಭವಾನಿ ಶಂಕರ ದೇವಸ್ಥಾನ ,ಕೆಮ್ಮಾಯಿ ವಿಷ್ಣು ಮೂರ್ತಿ ದೇವಸ್ಥಾನ, ಬನ್ನೂರು ಬಲಮುರಿ ಗಣಪತಿ ದೇವಸ್ಥಾನ ,ಪಡ್ನೂರು ಜನಾರ್ಧನ ದೇವಸ್ಥಾನ, ಕೊಡಿಪ್ಪಾಡಿ ಜನಾರ್ಧನ ದೇವಸ್ಥಾನ , ಬೆಳ್ಳಿಪಾಡಿ ಸುಬ್ರಹ್ಮಣ್ಯ ದೇವಸ್ಥಾನ ,ಶಾಂತಿನಗರ ವಿಷ್ಣುಮೂರ್ತಿ ದೇವಸ್ಥಾನ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ, ಕಡೆ ಶಿವಾಲಯ ,ದೇಂತಡ್ಕ ದೇವಸ್ಥಾನ ,ಕಬಕ ಮಹಾ ದೇವಿ ದೇವಸ್ಥಾನ, ಕೋಲ್ಪೆ ಷಣ್ಮುಖ ದೇವಸ್ಥಾನ ,ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನ , ವಿಟ್ಲ ಪಂಚಲಿAಗೇಶ್ವರ ದೇವಸ್ಥಾನ , ಕೇಪು ಶಿವ ದೇವಸ್ಥಾನ, ಪುಣಚ್ಚ ಮೈಹೀಶಾಮರ್ದಿನಿ ದೇವಸ್ಥಾನ , ಬಲ್ನಾಡು ಬಟ್ಟಿ ವಿನಾಯಕ ದೇವಸ್ಥಾನ, ಕುಂಜೂರು ಪಂಜ ದುರ್ಗಾಪರಮೇಶ್ವರಿ ದೇವಸ್ಥಾನ , ಕಾರ್ಪಾಡಿ ಸುಬ್ರಮಣ್ಯ ದೇವಸ್ಥಾನ , ಸಂಪ್ಯ ವಿಷ್ಣುಮೂರ್ತಿ ದೇವಸ್ಥಾನ, ಸಂಪ್ಯಾ ಅನ್ನಪೂರ್ಣೇಶ್ವರಿ ದೇವಸ್ಥಾನ, ಇರ್ದ ವಿಷ್ಣುಮೂರ್ತಿ ದೇವಸ್ಥಾನ, ಬೆಟ್ಟಂಪಾಡಿ ಪಂಚಲಿAಗೇಶ್ವರ ದೇವಸ್ಥಾನ , ಬೆಂದ್ರತೀರ್ಥ, ಪಾಣಜೆ ರಣಮಂಗಲ ದೇವಸ್ಥಾನ, ಕಾವು ಪಂಚಲಿAಗೇಶ್ವರ ದೇವಸ್ಥಾನ, ಈಶ್ವರಮಂಗಲ ಪಂಚಲಿAಗೇಶ್ವರ ದೇವಸ್ಥಾನ , ಹನುಮಗಿರಿ ದೇವಸ್ಥಾನ, ಆನಡ್ಕ ಜಲದುರ್ಗೆ, ವೀರಮಂಗಿಲ ವಿಷ್ಣು ಮೂರ್ತಿ ದೇವಸ್ಥಾನ, ಸರ್ವೆ ಸುಬ್ರಹ್ಮಣ್ಯ ದೇವಸ್ಥಾನ, ಇಡಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನ, ಕುರಿಯ ವಿಷ್ಣು ಮೂರ್ತಿ ದೇವಸ್ಥಾನ, ನುಳಿಯಲ ಸುಬ್ರಹ್ಮಣ್ಯ ದೇವಸ್ಥಾನ, ಬಾಯಂಬಾಡಿ ಷಣ್ಮುಖ ದೇವ ದೇವಸ್ಥಾನ, ಲಕ್ಷ್ಮೀದೇವಿ ಬೆಟ್ಟ, ಮಲೆರಾಯ ದೇವಸ್ಥಾನ ಬೊಳುವಾರು ,ಮಹಿಷ ಮರ್ದಿನಿ ದೇವಸ್ಥಾನ ಕೋಡಿಂಬಾಡಿ , ರಾಜರಾಜೇಶ್ವರಿ ದೇವಸ್ಥಾನ ಕೋಡಿಂಬಾಡಿ, ಶಾಂತಿಗೋಡು ವಿಷ್ಣುಮೂರ್ತಿ ದೇವಸ್ಥಾನ,ವೀರಮಂಗಲ ವಿಷ್ಣುಮೂರ್ತಿ ದೇವಸ್ಥಾನ, ಆನಡ್ಕ ವಿಷ್ಣುಮೂರ್ತಿ ದೇವಸ್ಥಾನ, ಮೃತ್ಯುಂಜೇಶ್ವರ ದೇವಸ್ಥಾನ ನರಿಮೊಗರು, ಉಮಾ ಮಹೇಶ್ವರಿ ದೇವಸ್ಥಾನ ಮಜಲು ಮಾರು,ಶಾಂತಿಗೋಡು ಶಾಸ್ತಾರ್ ದೇವಸ್ಥಾನ,ಕೆಯ್ಯೂರು ದುರ್ಗಾಪರಮೇಶ್ವರಿ ದೇವಸ್ಥಾನ, ಷೇವಿರೆ ,ಕರ್ಮಲ ,ಚಾಮುಂಡೇಶ್ವರಿ ದೇವಿ ದೇವಸ್ಥಾನ ಮೊಟ್ಟೆತಡ್ಕ ,ರಕ್ತೇಶ್ವರಿ ಗುಡಿ, ಬಪ್ಪಳಿಗೆ ,ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಕ್ಷೇತ್ರ ಮುಂಡ್ರಬೈಲು ,ಬನ್ನೂರ್ ಸದಾಶಿವ ದೇವಸ್ಥಾನ ,ಪೋಳ್ಯ ವೆಂಕಟರಮಣ ದೇವಸ್ಥಾನ ಗಳಿಂದ ಪವಿತ್ರ ಗಂಗಾಜಲವನ್ನು ತಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಕರ‍್ಯದರ್ಶಿಗಳಾದ ಡಾ.ಕೆ.ಎಮ್. ಕೃಷ್ಣ ಭಟ್,ಜೊತೆಕರ‍್ಯದರ್ಶಿಗಳಾದ ಶ್ರೀಮತಿ ರೂಪಲೇಖ, ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಪದಾಧಿಕಾರಿಗಳು, ಮುಖ್ಯಗುರುಗಳು,ಶಿಕ್ಷಕರು,ವಿದ್ಯಾರ್ಥಿಗಳ ಮತ್ತು ಪೋಷಕರ ಮೂಲಕ ಬಾವಿಗೆ ಸಮರ್ಪಿಸುವ, ಗಂಗಾಪೂಜೆ ಮತ್ತು ತೀರ್ಥಧಾರಾ ಕಾರ್ಯಕ್ರಮವು ದಿನಾಂಕ ೧೨/೧೧/೨೦೨೫ರಂದು ತೆಂಕಿಲ ಆವರಣದಲ್ಲಿ ನಡೆಯಿತು.ಹಲವು ಪುಣ್ಯಕ್ಷೇತ್ರಗಳ ಪುಣ್ಯಜಲವನ್ನು ಬಾವಿಗೆ ಸಮರ್ಪಿಸಿದ ಬಳಿಕ ಪವಿತ್ರ ಗಂಗೆಯನ್ನು ಆರತಿಯನ್ನು ಬೆಳಗಿ, ಪೂಜಿಸಲಾಯಿತು. ಬಾವಿಯ ನೀರಿನ ಶುದ್ಧತೆಗಾಗಿ ನೆಲ್ಲಿ ಮರದ ಚಕ್ಕೆಯನ್ನು (ಕೆತ್ತೆಯನ್ನು) ಅರ್ಪಿಸಲಾಯಿತು. ಅಂತಹ ನೀರಿನ ಸೇವನೆಯಿಂದ ಶಾರೀರಿಕ ಮತ್ತು ಮಾನಸಿಕ ಶುದ್ಧಿ ನಡೆಯುತ್ತದೆ. ಆಧ್ಯಾತ್ಮಿಕ ಬೆಳವಣಿಗೆಗೆ ಶಕ್ತಿ ಕೊಡುತ್ತದೆ.ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿಯರಿಂದ ವೇದ ಪಾರಾಯಣ ನಡೆಯಿತು.

ಕರ‍್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಕರ‍್ಯದರ್ಶಿಗಳಾದ ಡಾ.ಕೆ.ಎಮ್. ಕೃಷ್ಣ ಭಟ್, ಜೊತೆ ಕರ‍್ಯದರ್ಶಿಗಳಾದ ಶ್ರೀಮತಿ ರೂಪಲೇಖ ಉಪಸ್ಥಿತರಿದ್ದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ನರೇಂದ್ರ ಪ.ಪೂ. ಕಾಲೇಜು, ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ ಇದರ ಆಡಳಿತ ಮಂಡಳಿಯ ಪದಾಧಿಕಾರಿಗಳು, ಮುಖ್ಯಗುರುಗಳು,ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.

ಕರ‍್ಯಕ್ರಮದಲ್ಲಿ ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ ಇದರ ಪ್ರಾಂಶುಪಾಲರಾದ ಡಾ.ಶೋಭೀತಾ ಸತೀಶ್ ಸ್ವಾಗತಿಸಿ, ನರೇಂದ್ರ ಪ.ಪೂ. ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಮಧುರಾ ವಂದಿಸಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರಾದ ಪ್ರತೀಕ್ಷ ಕರ‍್ಯಕ್ರಮವನ್ನು ನಿರೂಪಿಸಿದರು.