
ಭಾರತೀಯರಿಗೆ ಚಿನ್ನ ಅಂದ್ರೆ ತುಂಬಾ ಇಷ್ಟ. ಹೆಚ್ಚಿನವರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಲೇ ಇರುತ್ತಾರೆ. ಆದರೆ ಇತ್ತೀಚಿನ ಬೆಲೆ ಏರಿಕೆಯಿಂದಾಗಿ ಚಿನ್ನದ ಮೇಲಿನ ಖರೀದಿ, ಹೂಡಿಕೆ ಮಾಡಲು ಹಿಂದೇಟು ಹಾಕುವಂತಾಗಿದೆ. ಆದ್ರೆಭಾರತದಲ್ಲಿ ಚಿನ್ನದ ಬೆಲೆಏರಿಕೆ ಮಾತ್ರ ನಿಲ್ಲುತ್ತಲೇ ಇಲ್ಲ.
ಕಳೆದೆರಡು ದಿನಗಳಿಂದ ಚಿನ್ನದ ಮಾರುಕಟ್ಟೆ ಸ್ಥಿರವಾಗಿದ್ದರೂ, ಇಂದು ಮತ್ತೆ ಏರಿಕೆಯಾಗಿದೆ. ಹಾಗಿದ್ರೆ ಇಂದು ಭಾರತದಲ್ಲಿ 24K, 22K, 18K ಚಿನ್ನದ ಬೆಲೆ ಎಷ್ಟಿದೆ ಗೊತ್ತಾ?
ಭಾರತದಲ್ಲಿ 24K ಚಿನ್ನದ ಬೆಲೆ:
24 ಕ್ಯಾರಟ್ ಚಿನ್ನದ ಬೆಲೆ ಮತ್ತೆ ಎರಡು ದಿನಗಳ ಸ್ಥಿರದ ನಂತರ ಇಂದು ದಿಢೀರ್ ಏರಿಕೆ ಕಂಡಿದೆ. ಅಂದರೆ ಇಂದು 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹12,322 ರೂ. ಆಗಿದೆ. ನಿನ್ನೆ ₹12,202 ರೂ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ ₹120 ರೂ. ಏರಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹98,576 ರೂ. ಆಗಿದ್ದು, ನಿನ್ನೆ ₹97,616 ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಎಂಟು ಗ್ರಾಂ ಚಿನ್ನದ ಬೆಲೆ ₹960 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,23,220 ರೂ. ಆಗಿದ್ದು, ನಿನ್ನೆ 1,22,020 ರೂ. ಇತ್ತು. ನಿನ್ನೆಗಿಂತ 1,200 ರೂ ಏರಿಕೆಯಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ಒಟ್ಟು ಬೆಲೆ ₹12,32,200 ರೂ. ಆಗಿದ್ದು, ನಿನ್ನೆ 12,20,200 ರೂ. ಇತ್ತು. ಈ ಮೂಲಕ ಒಂದೇ ದಿನದಲ್ಲಿ 12,000 ರೂ.ನಷ್ಟು ಏರಿಕೆಯಾಗಿದೆ. ಇತ್ತೀಚಿನ ಬೆಲೆ ಏರಿಕೆಗಳನ್ನು ಗಮನಿಸಿದ್ರೆ ಇಳಿಕೆಯಾದ ಪ್ರಮಾಣಕ್ಕಿಂತ, ಏರಿಕೆಯಾದ ಪ್ರಮಾಣವೇ ಹೆಚ್ಚು.
ಭಾರತದಲ್ಲಿ 22K ಚಿನ್ನದ ಬೆಲೆ:
ಇಂದು 22K ಚಿನ್ನದ 1 ಗ್ರಾಂ ಬೆಲೆಯಲ್ಲೂ ಇಂದು ಏರಿಕೆಯಾಗಿದೆ. ಅದೇ ರೀತಿ ಇಂದು ಚಿನ್ನದ ಬೆಲೆ 11,295 ರೂ. ಆಗಿದ್ದು, ನಿನ್ನೆ ₹11,185 ರೂ. ಇತ್ತು. ಈ ಮೂಲಕ ಒಂದೇ ದಿನದಲ್ಲಿ ದಿಢೀರ್ ಅಂತ ₹110 ರೂ. ಹೆಚ್ಚಳ ಕಂಡುಬಂದಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 90,360 ರೂ. ಆಗಿದ್ದು, ನಿನ್ನೆ 89,480 ರೂ. ಇತ್ತು. ಒಂದೇ ದಿನದಲ್ಲಿ ₹880 ರೂ. ದಿಢೀರ್ ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,12,950 ರೂ ಆಗಿದ್ದು, ನಿನ್ನೆ ₹1,11,850 ರೂ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,100 ರೂ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 11,29,500 ರೂ. ಆಗಿದ್ದು, ನಿನ್ನೆ ₹11,18,500 ರೂ. ಇತ್ತು. ಒಂದೇ ದಿನದಲ್ಲಿ 11,000 ರೂ. ಏರಿಕೆ ಕಂಡಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
ಇತರ ಚಿನ್ನಗಳಿಗೆ ಹೋಲಿಸಿದ್ರೆ 18K ಚಿನ್ನದ ಬೆಲೆ ಕಡಿಮೆಯಾಗಿರುತ್ತದೆ. ಅದೇ ರೀತಿ 18K ಚಿನ್ನದ 1 ಗ್ರಾಂ ಬೆಲೆ ಇಂದು ₹9,242 ರೂ. ಆಗಿದ್ದು, ನಿನ್ನೆ 9,152 ರೂ. ಇತ್ತು. ನಿನ್ನೆಗಿಂತ ಇಂದು ಪ್ರತೀ ಗ್ರಾಂ ಚಿನ್ನದಲ್ಲಿ ದಿಢೀರ್ ಆಗಿ ₹90 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹73,936 ರೂ. ಆಗಿದ್ದು, ನಿನ್ನೆ 73,216 ರೂ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹720 ರೂ. ಏರಿಕೆಯಾಗಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ ಇಂದು 92,420 ರೂ. ಆಗಿದ್ದು, ನಿನ್ನೆ 91,520 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹320 ರೂ. ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 12,448, 22K ರೂ. 11,410, 18K ರೂ. 9,515
ಮುಂಬೈ: 24K ರೂ. 12,322, 22K ರೂ. 11,295, 18K ರೂ. 9,242
ದೆಹಲಿ: 24K ರೂ. 12,337, 22K ರೂ. 11,310, 18K ರೂ. 9,257
ಕೋಲ್ಕತ್ತಾ: 24K ರೂ. 12,322, 22K ರೂ. 11,295, 18K ರೂ. 9,242
ಬೆಂಗಳೂರು: 24K ರೂ. 12,322, 22K ರೂ. 11,295, 18K ರೂ. 9,242
ಹೈದರಾಬಾದ್: 24K ರೂ. 12,322, 22K ರೂ. 11,295, 18K ರೂ. 9,242
ಕೇರಳ: 24K ರೂ. 12,322, 22K ರೂ. 11,295, 18K ರೂ. 9,242
ಪುಣೆ: 24K ರೂ. 12,322, 22K ರೂ. 11,295, 18K ರೂ. 9,242
ವಡೋದರಾ: 24K ರೂ. 12,327, 22K ರೂ. 11,300, 18K ರೂ. 9,247
ಅಹಮದಾಬಾದ್: 24K ರೂ. 12,327, 22K ರೂ. 11,300, 18K ರೂ. 9,247
ಬೆಳ್ಳಿ ಬೆಲೆ ಹೇಗಿದೆ?
ಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆ, ಇತ್ತ ಬೆಳ್ಳಿ ಬೆಲೆಯಲ್ಲೂ ಭಾರೀ ಏರಿಕೆ ಕಂಡಿದೆ. ಅಂದರೆ ಇಂದು ಒಂದು ಗ್ರಾಂ ಬೆಳ್ಳಿ ದರ ₹155 ರೂ. ಆಗಿದ್ದು, ನಿನ್ನೆ 152.50 ರೂ. ಇತ್ತು. ಈ ಮೂಲಕ ಒಂದೇ ದಿನದಲ್ಲಿ ₹2.50 ರೂ. ಏರಿಕೆ ಕಂಡಿದೆ. ಇನ್ನು 8 ಗ್ರಾಂ ಬೆಳ್ಳಿದರ ಇಂದು ₹1,240 ರೂ. ಆಗಿದ್ದು, ನಿನ್ನೆ ₹1,220 ರೂ. ಇತ್ತು. ಒಂದೇ ದಿನದಲ್ಲಿ ₹20 ರೂ. ಹೆಚ್ಚಳವಾಗಿದೆ. ಹಾಗೆಯೇ 10 ಗ್ರಾಂ ಮತ್ತು 100 ಗ್ರಾಂ ಬೆಳ್ಳಿ ಬೆಲೆ ಇಂದು ಪ್ರತಿಯಾಗಿ ₹1,550 ರೂ. ಮತ್ತು 15,500 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ನವೆಂಬರ್ 10ರ ರಾಯಿಟರ್ಸ್ ವರದಿ ಪ್ರಕಾರ, ಡಿಸೆಂಬರ್‌ನಲ್ಲಿ ಫೆಡರಲ್ ರಿಸರ್ವ್ ಬಡ್ಡಿದರ ಕಡಿತದ ಬಗ್ಗೆ ಕಳವಳ ಮತ್ತು ದುರ್ಬಲ ಆರ್ಥಿಕ ದತ್ತಾಂಶಗಳಿಂದ ಸೋಮವಾರ ಶೇ.1 ಕ್ಕಿಂತ ಹೆಚ್ಚು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ.
ಜಿಎಂಟಿ 0435 ರ ವೇಳೆಗೆ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 1.4% ಏರಿಕೆಯಾಗಿದ್ದು, $4,053.40ಗೆ ತಲುಪಿದೆ.














