Saturday, March 7, 2026
ಜಿಲ್ಲೆದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ತಾರಿದೊಟ್ಟು ಪ್ರದೇಶದ ತೋಟವೊಂದರಲ್ಲಿ ಅಪರೂಪದ ಚಿಪ್ಪುಹಂದಿ ಪತ್ತೆ…!-ಕಹಳೆ ನ್ಯೂಸ್

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ತಾರಿದೊಟ್ಟು ಪ್ರದೇಶದ ತೋಟವೊಂದರಲ್ಲಿ ಅಪರೂಪದ ಚಿಪ್ಪು ಹಂದಿಯೊಂದು ಕಾಣಿಸಿಕೊಂಡಿದೆ.

ತಾರಿದೊಟ್ಟುದ ಹರೀಶ್ ರೈ ಎಂಬವರ ಮನೆಯ ಬಳಿಯ ತೋಟದಲ್ಲಿ ಚಿಪ್ಪುಹಂದಿಯೊಂದು ಓಡಾಡುತ್ತಿದೆ‌. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಅದರಂತೆ ವೇಣೂರು ವಲಯ ಅರಣ್ಯಾಧಿಕಾರಿ ಭರತ್ ಯು.ಜಿ. ಮಾರ್ಗದರ್ಶನದಲ್ಲಿ ತಂಡ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿ ಅದನ್ನು ಬೋನಿಗೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವೇಣೂರು ಅರಣ್ಯ ಇಲಾಖೆಯ ತಂಡ, ಈ ಅಪರೂಪದ ಚಿಪ್ಪುಹಂದಿಯನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸ್ಥಳೀಯರು ಕೈಜೋಡಿಸಿದ್ದರು.

ಜಾಹೀರಾತು
ಜಾಹೀರಾತು