
ಮಂಗಳೂರು ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ತನ್ನ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿದ್ದು, ನಕಲಿ ಖಾತೆಯಲ್ಲಿ ಕಚೇರಿಯಲ್ಲಿ ಕುಳಿತಿರುವ ಪ್ರೊಫೈಲ್ ಫೋಟೊ ಮತ್ತು ಹಿಂದಿನ ಕಮಿಷನರ್ ಅಧಿಕಾರ ಹಸ್ತಾಂತರ ಮಾಡುವ ವಾಲ್ ಪೇಪರ್ ಹಾಕಿದ್ದು, ಇದು ಸೈಬರ್ ವಂಚಕರ ಕೃತ್ಯ ಅಗಿದು, ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ.














