Saturday, March 7, 2026
ಸಂತಾಪಸುದ್ದಿ

ಹಿಂದೂಜಾ ಗ್ರೂಪ್‌ ಅಧ್ಯಕ್ಷ‌, ಬಿಲಿಯನೇರ್ ಗೋಪಿಚಂದ್‌ ಪಿ ಹಿಂದುಜಾ ವಿಧಿವಶ-ಕಹಳೆ ನ್ಯೂಸ್

ಲಂಡನ್‌ : ಹಿಂದುಜಾ ಗ್ರೂಪ್‌ ನ ಅಧ್ಯಕ್ಷ ಗೋಪಿಚಂದ್‌ ಪಿ. ಹಿಂದುಜಾ (85ವರ್ಷ) ಲಂಡನ್‌ ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ನಾಲ್ವರು ಹಿಂದುಜಾ ಸಹೋದರರಲ್ಲಿ ಗೋಪಿಚಂದ್‌ ಅವರು ಎರಡನೇಯವರಾಗಿದ್ದಾರೆ.

ಹಿರಿಯ ಸೋದರ ಶ್ರೀಚಂದ್‌ ಹಿಂದುಜಾ 2023ರಲ್ಲಿ ನಿಧನರಾಗಿದ್ದರು. ಇನ್ನಿಬ್ಬರು ಸಹೋದರರು ಪ್ರಕಾಶ್‌ ಹಿಂದುಜಾ ಮತ್ತು ಅಶೋಕ್‌ ಹಿಂದುಜಾ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಉದ್ಯಮ ವಲಯದಲ್ಲಿ “ಜಿಪಿ” ಎಂದೇ ಖ್ಯಾತರಾಗಿದ್ದ ಗೋಪಿಚಂದ್‌ ಹಿಂದುಜಾ ಅವರು 1950ರಲ್ಲಿ ತಮ್ಮ ಕುಟುಂಬದ ಉದ್ಯಮಕ್ಕೆ ಪದಾರ್ಪಣೆಗೈದಿದ್ದರು. ಗೋಪಿಚಂದ್‌ ಅವರು ಕಂಪನಿಯನ್ನು ಇಂಡೋ-ಮಧ್ಯಪ್ರಾಚ್ಯ ವ್ಯಾಪಾರದ ಮೂಲಕ ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿಗೆ ಪಾತ್ರರಾಗಿದ್ದರು.

ಜಾಹೀರಾತು
ಜಾಹೀರಾತು

ಕಂಪನಿ ವೆಬ್‌ ಸೈಟ್‌ ನ ಮಾಹಿತಿ ಪ್ರಕಾರ, ಗೋಪಿಚಂದ್‌ ಅವರು ಬಾಂಬೆಯ ಜೈ ಹಿಂದ್‌ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ನಂತರ ವೆಸ್ಟ್‌ ಮಿನಿಸ್ಟರ್‌ ಯೂನಿರ್ವಸಿಟಿ ಮತ್ತು ರಿಚ್ಮಂಡ್‌ ಕಾಲೇಜ್‌ ನಿಂದ ಗೌರವ ಡಾಕ್ಟರೇಟ್‌ ಗೆ ಭಾಜನರಾಗಿದ್ದರು.

ಹಿಂದುಜಾ ಗ್ರೂಪ್‌ ಆಟೋಮೊಟಿವ್‌, ಬ್ಯಾಂಕಿಂಗ್‌, ಫೈನಾನ್ಸ್‌, ಐಟಿ, ಹೆಲ್ತ್‌ ಕೇರ್‌, ರಿಯಲ್‌ ಎಸ್ಟೇಟ್‌, ಇಂಧನ, ಮಾಧ್ಯಮ, ಎಂಟರ್‌ ಟೈನ್‌ ಮೆಂಟ್‌ ಸೇರಿ 11 ಸೆಕ್ಟರ್‌ ಗಳಲ್ಲಿ ಉದ್ಯಮ ಹೊಂದಿದೆ. ಇವುಗಳಲ್ಲಿ ಅಶೋಕ್‌ ಲೇಲ್ಯಾಂಡ್‌, ಇಂಡಸ್‌ ಇಂಡ್‌ ಬ್ಯಾಂಕ್‌, ಎನ್‌ ಎಕ್ಸ್‌ ಟಿ ಡಿಜಿಟಲ್‌ ಲಿಮಿಟೆಡ್‌ ಹಿಂದುಜಾ ಬ್ರ್ಯಾಂಡ್‌ ನ ಉದ್ಯಮವಾಗಿದೆ.

ಸಂಡೇ ಟೈಮ್ಸ್‌ ಇತ್ತೀಚೆಗೆ ಬಿಡುಗಡೆಗೊಳಿಸಿದ ಶ್ರೀಮಂತರ ಪಟ್ಟಿಯ ಪ್ರಕಾರ, ಗೋಪಿಚಂದ್‌ ಹಿಂದುಜಾ ಫ್ಯಾಮಿಲಿಯ ಯುಕೆಯ ಶ್ರೀಮಂತ ವ್ಯಕ್ತಿ ಎಂದು ತಿಳಿಸಿತ್ತು. ಗೋಪಿಚಂದ್‌ ಅವರ ಒಟ್ಟು ಆಸ್ತಿಯ ಮೌಲ್ಯ 32.3 ಬಿಲಿಯನ್‌ ಪೌಂಡ್ಸ್.‌