
ಬೆಂಗಳೂರು: ಬಿಗ್ ಬಾಸ್ ಮನೆಯ ಆಟ ಕಿಚ್ಚ ಸುದೀಪ್ (Kiccha Sudeep) ಅವರ ಆಜ್ಞೆಯಂತೆ ಈ ವಾರ ಯಾವುದೇ ಟಾಸ್ಕ್ ಇಲ್ಲದೆ ಸಾಗಲಿದೆ. ಅದರಂತೆ ಮುಖಕ್ಕೆ ಮಸಿ ಬಳಿದು ಯಾರು ಅರ್ಹರು ಯಾರು ಮನೆಯಲ್ಲಿ ಇರಲು ಅರ್ಹರಲ್ಲವೆನ್ನುವ ಅಭಿಪ್ರಾಯವನ್ನು ಸ್ಪರ್ಧಿಗಳು ತಿಳಿಸಿದ್ದಾರೆ. ಈ ವಿಚಾರದಲ್ಲಿ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಾರ ಎಲ್ಲರೂ ನಾಮಿನೇಟ್ ಆಗಿದ್ದಾರೆ. ಮನೆಯ ನಿಯಮ ಉಲ್ಲಂಘನೆ ಆಗಿದೆ. ಇದರ ಶಿಕ್ಷೆಯೂ ಸ್ಪರ್ಧಿಗಳಿಗೆ ಸಿಗಲಿದೆ.
ಮನೆಯಲ್ಲಿ ಉಳಿಯುವ ನಿಟ್ಟಿನಲ್ಲಿ ಸ್ಪರ್ಧಿಗಳಿಗೆ ಕುಟುಂಬದವರಿಂದ ಪತ್ರಗಳು ಬಂದಿದೆ. ಈ ಪತ್ರಗಳನ್ನು ಪಡೆದುಕೊಂಡವರು ನಾಮಿನೇಷನ್‌ನಿಂದ ಪಾರಾಗುತ್ತಾರೆ ಇಲ್ಲದಿದ್ರೆ ನಾಮಿನೇಟ್ ಆಗಿಯೇ ಉಳಿಯುತ್ತಾರೆ.
ಧನುಷ್ ಹಾಗೂ ಅಭಿಷೇಕ್ ಅವರಿಗೆ ಮನೆಯವರ ಪತ್ರ ಬಂದಿದೆ. ಧನುಷ್ ಅವರಿಗೆ ಬಿಗ್ ಬಾಸ್ ಇಲ್ಲಿ ಒಂದು ಸವಾಲನ್ನು ನೀಡಿದ್ದಾರೆ. ಅಭಿಷೇಕ್‌ಗೆ ಬಂದಿರುವ ಪತ್ರವನ್ನು ಧನುಷ್ ನೀಡಬಹುದು. ಆದರೆ ಧನುಷ್ ಅವರಿಗೆ ಬಂದಿರುವ ಪತ್ರವನ್ನು ತೆರೆಯುವಂತಿಲ್ಲ. ಇದಕ್ಕೆ ಧನುಷ್ ತನ್ನ ಮನೆಯಿಂದ ಬಂದಿರುವ ಪತ್ರವನ್ನು ನೀರಿಗೆ ಹಾಕಿದ್ದಾರೆ. ಅಭಿಷೇಕ್ ಅವರಿಗೆ ಪತ್ರವನ್ನು ನೀಡಿದ್ದಾರೆ. ಆ ಮೂಲಕ ಧನುಷ್ ತ್ಯಾಗವನ್ನು ಮಾಡಿದ್ದಾರೆ.
ಇನ್ನೊಂದು ಕಡೆ ಸ್ಪರ್ಧಿಗಳ ಮನೆಯವರ ಪತ್ರವನ್ನು ತೋರಿಸಲಾಗಿದ್ದು, ಇದಕ್ಕೆ ರಿಷಾ ಅವರು ಸ್ಪಂದನಾ ಅವರ ಫೋಟೋ ಹೊಂದಿರುವ ಮನೆಯವರ ಪತ್ರವನ್ನು ಆಯ್ಕೆ ಮಾಡಿದ್ದು, ಆ ಫೋಟೋವನ್ನು ಕಾಗದ ಹರಿಯುವ ಮಿಷನ್‌ಗೆ ಹಾಕಲಾಗಿದೆ. ತನ್ನ ಫೋಟೋ ಹರಿದು ಹೋದದ್ದನ್ನು ನೋಡಿ ಸ್ಪಂದನಾ ಕುಗ್ಗಿ ಹೋಗಿದ್ದು ಕಣ್ಣೀರು ಹಾಕಿದ್ದಾರೆ.
ಸೂರಜ್ ಅವರ ಹೆಸರನ್ನು ಕೂಡ ಮಿಷನ್‌ಗೆ ಹಾಕಿದ್ದು, ಸೂರಜ್ ಮನೆಯವರ ಪತ್ರ ಕೂಡ ನುಚ್ಚುನೂರಾಗಿದೆ. ಇದನ್ನು ನೋಡಿದ ಸೂರಜ್ ಕೂಡ ಕಣ್ಣೀರಿಟ್ಟಿದ್ದು, ನಾನೇನು ಮಾಡಿದೆ ಎಂದು ದುಃಖದಲ್ಲಿ ಮಾತನಾಡಿದ್ದಾರೆ.
ಕೊಟ್ಟವರಿಗೆ ತಕ್ಕೊಳ್ಳುವ ತಾಕತ್ ಇರಬೇಕೆಂದು ಸೂರಜ್ ರಿಷಾಗೆ ಹೇಳಿದ್ದಾರೆ. ಮುಗ್ದ ಮುಖಗಳನ್ನು ನಾನು ನಂಬಲ್ಲ. ಕಳ್ಳನನ್ನು ನಂಬಿದ್ರೂ, ಮಳ್ಳನನ್ನು ನಂಬಲ್ಲವೆಂದು ರಿಷಾ ಹೇಳಿದ್ದಾರೆ.













