Saturday, March 7, 2026
ಸುದ್ದಿ

ವಿದ್ಯಾರ್ಥಿಗಳಿಂದ ಕಾಲಿಗೆ ಮಸಾಜ್ ಮಾಡಿಸುತ್ತಾ ಫೋನ್ ನಲ್ಲಿ ಬ್ಯುಸಿಯಾದ ಶಿಕ್ಷಕಿ.-ಕಹಳೆ ನ್ಯೂಸ್

ಆಂಧ್ರಪ್ರದೇಶ : ತರಗತಿ ನಡೆಯುತ್ತಿರುವ ಸಮಯದಲ್ಲೇ ಶಾಲಾ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಂದ ಕಾಲಿಗೆ ಮಸಾಜ್ ಮಾಡಿಕೊಳ್ಳುತ್ತಿರುವ ಘಟನೆಯೊಂದು ಆಂಧ್ರಪ್ರದೇಶ ದ ಶ್ರೀಕಾಕುಳಂ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ .

ಶ್ರೀಕಾಕುಳಂ ಜಿಲ್ಲೆಯ ಬಂಡಪಲ್ಲಿ ಬಾಲಕಿಯರ ಆಶ್ರಮ ಶಾಲೆಯಲ್ಲಿ ಈ ಘಟನೆ ನಡೆದಿದ್ದು ಈದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ .

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವೈರಲ್ ಆಗಿರುವ ವಿಡಿಯೋದಲ್ಲಿ ಶಿಕ್ಷಕಿಯೊಬ್ಬರು ಕುರ್ಚಿ ಮೇಲೆ ಕುಳಿತುಕೊಂಡು ಫೋನ್ ನಲ್ಲಿ ಮಾತನಾಡುತ್ತಿದ್ದರೆ ಶಾಲಾ ಸಮವಸ್ತ್ರದಲ್ಲಿರುವ ಇಬ್ಬರು ವಿದ್ಯಾರ್ಥಿನಿಯರು ಶಿಕ್ಷಕಿಯ ಪಾದದ ಬಳಿ ಕುಳಿತು ಕಾಲಿಗೆ ಮಸಾಜ್ ಮಾಡುತ್ತಿರುವುದು ಕಾಣಬಹುದು , ಇದನ್ನು ಶಾಲೆಯ ಸಿಬ್ಬಂದಿಗಳೇ ತಮಮ್ ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ .

ಜಾಹೀರಾತು
ಜಾಹೀರಾತು

ಅಲ್ಲದೆ ಶಿಕ್ಷಕಿ ಮಕ್ಕಳಿಂದ ತನ್ನ ಆರೈಕೆ ನಡೆಸುತ್ತಿರುವ ವಿಡಿಯೋ ಅನ್ನು ಯೋಜನಾ ಅಧಿಕಾರಿ ( ಸಮಗ್ರ ಬುಡಕಟ್ಟು ಅಭಿವೃದ್ಧಿ ಸಂಸ್ಥೆ ಸೀತಾಂಪೇಟ ( ಐಟಿಡಿಎ ) ಪವಾರ್ ಸ್ವಪ್ನಿಲ್ ಜಗನ್ನಾಥ್ ಸೇರಿದಂತೆ ಇತರ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಕೂಡಲೇ ಎಚ್ಚೆತ್ತ ಅಧಿಕಾರಿಗಳು ವಿಡಿಯೋ ಗಮನಿಸಿ ಶಿಕ್ಷಕಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ , ಅಲ್ಲದೆ ವಿಡಿಯೋ ಕುರಿತು ಸಮಗ್ರ ತನಿಖೆ ನಡೆಸುವಂತೆಯೂ ಸೂಚನೆಯನ್ನು ನೀಡಿದ್ದು ಒಂದು ವೇಳೆ ಶಿಕ್ಷಕಿ ಮಕ್ಕಳಿಂದ ಕಾಲಿಗೆ ಮಸಾಜ್ ಮಾಡಿಸಿದ್ದು ತನಿಖೆಯಲ್ಲಿ ತಿಳಿದುಬಂದರೆ ಕರ್ತವ್ಯದಿಂದ ವಜಾಗೊಳಿಸುವುದಾಗಿ ತಿಳಿಸಿದ್ದಾರೆ .

ಪೋಷಕರ ಆಕ್ರೋಶ :

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಾಲೆಯ ಶಿಕ್ಷಕಿ ವಿರುದ್ಧ ಪೋಷಕರು ಮತ್ತು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ . ಅಲ್ಲದೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನಡುತ್ತಾರೆಂದು ಸರಕಾರಿ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಿದರೆ ಶಿಕ್ಷಕರು ಈ ರೀತಿ ವರ್ತನೆ ತೋರಿದರೆ ಶಾಲಾ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ , ಸರಕಾರಿ ಶಾಲೆಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ ಎಂದು ಪೋಷಕರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ