Recent Posts

Tuesday, March 10, 2026
ರಾಜ್ಯಸುದ್ದಿ

ನವೆಂಬರ್‌ ಆರಂಭದಲ್ಲೇ ಚಿನ್ನದ ಬೆಲೆ ಭರ್ಜರಿ ಇಳಿಕೆ! ಎಷ್ಟಿದೆ ಗೊತ್ತಾ? – ಕಹಳೆ ನ್ಯೂಸ್

ದೇಶದಲ್ಲಿ ಚಿನ್ನದ ಬೆಲೆ ಇತ್ತೀಚೆಗೆ ಏರಿಳಿತಗಳು ಆಗುತ್ತಲೇ ಇದೆ. ಅದರಲ್ಲೂ ದೀಪಾವಳಿ ನಂತರವಂತೂ ಚಿನ್ನದ ಬೆಲೆಯಲ್ಲಿ ಇಳಿಕೆ ಪ್ರಮಾಣ ಕಡಿಮೆ, ಏರಿಕೆ ಪ್ರಮಾಣ ಜಾಸ್ತಿಯಾಗಿದೆ. ಇದೀಗ ಇಂದು ಚಿನ್ನ ಪ್ರಿಯರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ನಿನ್ನೆ ಏರಿಕೆ ಕಂಡಿದ್ದ ಚಿನ್ನದ ಬೆಲೆ, ಇಂದು ದಿಢೀರ್‌ ಇಳಿಕೆಯಾಗಿದೆ.

ಹಾಗಿದ್ರೆ ಇಂದು ಚಿನ್ನದ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತದಲ್ಲಿ 24K ಚಿನ್ನದ ಬೆಲೆ ಇಂದು ಎಷ್ಟಿದೆ?

ಜಾಹೀರಾತು
ಜಾಹೀರಾತು

24 ಕ್ಯಾರಟ್‌ ಚಿನ್ನದ ಬೆಲೆ ನಿನ್ನೆ ದಿಢೀರ್‌ ಏರಿಕೆ ಕಂಡಿತ್ತು. ಆದ್ರೆ ಇಂದು ಸಿಹಿಸುದ್ದಿ ನೀಡಿದೆ. ಅದೇನೆಂದರೆ 24K ಚಿನ್ನದ ಪ್ರತೀ ಗ್ರಾಂನಲ್ಲಿ 28 ರೂ. ಇಳಿಕೆಯಾಗಿದೆ. ಇಂದು 24 ಕ್ಯಾರೆಟ್‌ ಚಿನ್ನದ 1 ಗ್ರಾಂ ಬೆಲೆ ₹12,300 ರೂ. ಆಗಿದೆ. ನಿನ್ನೆ ₹12,328 ರೂ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹28 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹98,400 ರೂ. ಆಗಿದ್ದು, ನಿನ್ನೆ ₹98,624 ಇತ್ತು. ಈ ಮೂಲಕ 8 ಗ್ರಾಂ ಚಿನ್ನದಲ್ಲಿ ಒಂದೇ ದಿನ ₹224 ರೂ. ಇಳಿಕೆ ಕಂಡು ಬಂದಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,23,000 ರೂ. ಆಗಿದ್ದು, ನಿನ್ನೆಗಿಂತ ₹280 ರೂ ಇಳಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಒಟ್ಟು ಬೆಲೆ ₹12,30,000 ರೂ. ಆಗಿದೆ. ಒಂದೇ ದಿನದಲ್ಲಿ 2,800 ರೂ.ನಷ್ಟು ಏರಿಕೆಯಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ:

24K ಚಿನ್ನಕ್ಕೆ ಹೋಲಿಸಿದ್ರೆ 22K ಚಿನ್ನ ಕಡಿಮೆ ಬೆಲೆಗೆ ಸಿಗುತ್ತದೆ. ಅದೇ ರೀತಿ ಇಂದು 22K ಚಿನ್ನದ 1 ಗ್ರಾಂ ಬೆಲೆ 11,275 ರೂ. ಆಗಿದ್ದು, ನಿನ್ನೆ ₹11,300 ರೂ. ಇತ್ತು. ಈ ಮೂಲಕ ಒಂದೇ ದಿನ ₹25 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 90,200 ರೂ. ಆಗಿದ್ದು, ಈ ಮೂಲಕ ₹200 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,12,750 ರೂ ಆಗಿದ್ದು, ನಿನ್ನೆ ₹1,13,000 ರೂ ಇತ್ತು. ನಿನ್ನೆಗಿಂತ ಇಂದು ₹250 ರೂ ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 11,27,500 ರೂ. ಆಗಿದ್ದು, ನಿನ್ನೆ ₹11,30,000 ರೂ. ಇತ್ತು.

ಭಾರತದಲ್ಲಿ 18K ಚಿನ್ನದ ಬೆಲೆ ಇಂದು ಎಷ್ಟಿದೆ?

18K ಚಿನ್ನದ 1 ಗ್ರಾಂ ಬೆಲೆ ಇಂದು ₹9,225 ರೂ. ಆಗಿದ್ದು, ನಿನ್ನೆ 9,246 ರೂ. ಇತ್ತು. ನಿನ್ನೆಗಿಂತ ಇಂದು ಕೇವಲ 21 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹73,800 ರೂ. ಆಗಿದ್ದು, ನಿನ್ನೆ 73,968 ರೂ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 168 ರೂ. ಇಳಿಕೆ ಕಂಡಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ ಇಂದು 92,250 ರೂ. ಆಗಿದ್ದು, ನಿನ್ನೆ 92,460 ರೂ. ಇತ್ತು. ಇಂದು ಇಟ್ಟು 210 ರೂ. ಇಳಿಕೆ ಕಂಡು ಬಂದಿದೆ.

ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಇಂದು ಹೇಗಿದೆ?

ಚೆನ್ನೈ: 24K ರೂ. 12,338, 22K ರೂ. 11,310, 18K ರೂ. 9,435

ಮುಂಬೈ: 24K ರೂ. 12,300, 22K ರೂ. 11,275, 18K ರೂ. 9,225

ದೆಹಲಿ: 24K ರೂ. 12,315, 22K ರೂ. 11,290, 18K ರೂ. 9,240

ಕೋಲ್ಕತ್ತಾ: 24K ರೂ. 12,300, 22K ರೂ. 11,275, 18K ರೂ. 9,225

ಬೆಂಗಳೂರು: 24K ರೂ. 12,300, 22K ರೂ. 11,275, 18K ರೂ. 9,225

ಹೈದರಾಬಾದ್: 24K ರೂ. 12,300, 22K ರೂ. 11,275, 18K ರೂ. 9,225

ಕೇರಳ: 24K ರೂ. 12,300, 22K ರೂ. 11,275, 18K ರೂ. 9,225

ಪುಣೆ: 24K ರೂ. 12,300, 22K ರೂ. 11,275, 18K ರೂ. 9,225

ವಡೋದರಾ: 24K ರೂ. 12,305, 22K ರೂ. 11,280, 18K ರೂ. 9,230

ಅಹಮದಾಬಾದ್: 24K ರೂ. 12,305, 22K ರೂ. 11,280, 18K ರೂ. 9,230

ಸ್ಪಾಟ್‌ ಗೋಲ್ಡ್‌ ವಿವರ:

ವರದಿ ಪ್ರಕಾರ, ಅಮೆರಿಕಾದಲ್ಲಿ ಚಿನ್ನದ ಬೆಲೆಗಳು ಶೇ.1 ರಷ್ಟು ಕುಸಿತವಾಗಿದ್ದು, ಇದಕ್ಕೆ ಮುಖ್ಯ ಕಾರಣ ಯುಎಸ್‌ ಫೆಡರಲ್‌ ರಿಸರ್ವ್‌ ಬಡ್ಡಿದರ ಕಡಿತದ ನಿರ್ಧಾರ.

ಸ್ಪಾಟ್‌ ಚಿನ್ನದ ಬೆಲೆಯೂ ಇಂದು ಕುಸಿತ ಕಂಡಿದ್ದು, 12.46 pm ET (1646 GMT) ನಲ್ಲಿ ಪ್ರತೀ ಔನ್ಸ್‌ಗೆ ಶೇ. 1 ರಷ್ಟು ಕುಸಿದು, $3,984.49 ಕ್ಕೆ ರೀಚ್‌ ಆಗಿದೆ. ಆದ್ರೆ ಈ ತಿಂಗಳೂ ಲೋಹ ಶೇ.3.3 ರಷ್ಟು ಏರಿಕೆಯ ಹಾದಿ ಹಿಡಿದಿದೆ.

ಬೆಳ್ಳಿ ಬೆಲೆ ಹೇಗಿದೆ?

ಚಿನ್ನದ ಬೆಲೆ ಇಳಿಕೆಯಾಯ್ತು ಎಂದು ಖುಷಿಯಲ್ಲಿದ್ದವರಿಗೆ, ಬೆಳ್ಳಿ ದರ ನಿರಾಸೆ ಮೂಡಿಸಿದೆ. ಏಕೆಂದರೆ ಬೆಳ್ಳಿ ದರ ಏರಿಕೆಯಾಗಿದ್ದು, ಒಂದು ಗ್ರಾಂ ಬೆಳ್ಳಿ ದರ ಇಂದು ₹152 ರೂ. ಆಗಿದೆ. ನಿನ್ನೆಗಿಂದ 1 ರೂ. ಹೆಚ್ಚಾಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿಯ ದರ ಇಂದು ₹1,216 ರೂ ಆಗಿದ್ದು, ನಿನ್ನೆ ₹1,208 ರೂ ಇತ್ತು. ಈ ಮೂಲಕ ₹8 ರೂ. ಹೆಚ್ಚಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು ₹1,520 ರೂ. ಇದ್ದು, ನಿನ್ನೆ ₹1,510 ರೂ ಇತ್ತು. ಒಂದೇ ದಿನದಲ್ಲಿ ₹10 ರೂ. ಹೆಚ್ಚಳ ಕಂಡಿದೆ. 1 ಕಿಲೋ ಬೆಳ್ಳಿ ಬೆಲೆ ಇಂದು ₹1,52,000 ರೂ. ಆಗಿದೆ. ನಿನ್ನೆಗಿಂತ ಇಂದು ₹1,000 ರೂ. ಏರಿಕೆಯಾಗಿದೆ.

ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆ ಬೆಳವಣಿಗೆಗಳನ್ನು ಸರಿಯಾಗಿ ಗಮನಿಸಬೇಕು. ಚಿನ್ನದ ಮೇಲಿನ ಹೂಡಿಕೆ ಮಾಡೋದು ಸುರಕ್ಷಿತ. ಇದು ಭವಿಷ್ಯದಲ್ಲಿ ಹೆಚ್ಚಿನ ಆದಾಯ ತಂದುಕೊಡುತ್ತದೆ ಎನ್ನಲಾಗಿದೆ. ಆದ್ರೆ ಇತ್ತೀಚೆಗೆ ಬೆಲೆ ಏರಿಳಿತಗಳು ಆಗುತ್ತಿರುವುದರಿಂದ ಹೂಡಿಕೆ, ಖರೀದಿ ಮಾಡುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ.