ಹಿಂದೂಗಳಿಗೆ ಊಟ ಹಾಕಲ್ಲ ಎದ್ದೇಳ್ರೀ ಮೇಲೆ – ಕುಂಕುಮ ಇಟ್ಟುಕೊಂಡವನಿಗೆ ಮುಸ್ಲಿಮರ ಮದುವೆಯಲ್ಲಿ ಅಪಮಾನ – ಕಹಳೆ ನ್ಯೂಸ್

ಬೆಂಗಳೂರು ಗ್ರಾಮಾಂತರ : ಮುಸ್ಲಿಮರ ಮದುವೆ ಮನೆಯೊಂದರಲ್ಲಿ ಊಟಕ್ಕೆ ಕುಳಿತಿದ್ದ ವ್ಯಕ್ತಿ ಹಣೆಗೆ ಕುಂಕುಮ ಧರಿಸಿದ್ದ ಎಂಬ ಕಾರಣಕ್ಕೆ ಎಬ್ಬಿಸಿ ಹೊರಗೆ ಕಳಿಸಿರುವ ಘಟನೆ ನೆಲಮಂಗಲದ ಬಳಿ ನಡೆದಿದೆ. ಹಿಂದೂಗಳಿಗೆ ಊಟ ಹಾಕೋದಿಲ್ಲ . ಎದ್ದೇಳ್ರೀ ಮೇಲೆ ಎಂದು ಬಲವಂತವಾಗಿ ಎಬ್ಬಿಸಲಾಗಿದ್ದು, ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ಇಸ್ಲಾಂಪುರದ ಸಮೀವುಲ್ಲಾ ಕುಟಂಬದವರಾದ ಮುಜಾಮಿಲ್ ಪಾಷಾ ಮತ್ತು ಸಾನಿಯಾ ಎಂಬುವವರ ಮದುವೆ ಕಾರ್ಯ್ರಕ್ರಮದಲ್ಲಿ ಈ ಘಟನೆ ನಡೆದಿದೆ. ಊಟಕ್ಕೆ ಕುಳಿತ ರಾಜು ಎಂಬ ವ್ಯಕ್ತಿಯೊಬ್ಬರು ಹಣೆಗೆ ಕುಂಕುಮ ಧರಿಸಿದ್ದರು. ಇದನ್ನು ಕಂಡ ಮದುವೆಮನೆಯವರು . ನಿಮ್ಮನ್ನು ಯಾರ್ರೀ ಇಲ್ಲಿಗೆ ಕರೆದಿದ್ದು. ಹಿಂದೂಗಳಿಗೆ ನಾವು ಊಟ ಹಾಕೋದಿಲ್ಲ. ಎದ್ದು ಆಚೆಗೆ ಹೋಗ್ರೀ ಎಂದು ಗದರಿಸಿದ್ದಾರೆ.
ಮದುವೆಯ ಮನೆಯಲ್ಲೇ ಇದ್ದ ಮತ್ತೊಬ್ಬ ವ್ಯಕ್ತಿಯೊಬ್ಬರು ಇದನ್ನು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಸಾಹೇಬ್ರೇ ಹಿಂಗೆಲ್ಲಾ ಮಾಡಬಾರದು. ಮದುವೆಗೆ ಕರೆಯುವುದು ಯಾಕೆ? ಬಂದವರನ್ನು ಊಟಕ್ಕೆ ಕುಳಿತಾಗ ಅಪಮಾನಿಸುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ ಅವರು ಹಿಂದೂಗಳಿಗೆ ಊಟ ಹಾಕೋದಿಲ್ಲವಂತೆ. ಬನ್ನಿ ಆಚೆಗೆ ಹೋಗೋಣ ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಅಷ್ಟೇ ಅಲ್ಲದೇ , ಈ ರೀತಿ ಊಟಕ್ಕೆ ಕುಳಿತಿವರನ್ನು ಎಬ್ಬಿಸುವುದು ಅಧರ್ಮ. ನೀವು ಗೇಟಿನಲ್ಲಿ ನಿಂತು ಕುಂಕುಮ ಇಟ್ಟುಕೊಂಡವರನ್ನು ಒಳಗೆ ಬಿಡಬಾರದಿತ್ತು. ಉಣ್ಣಲು ಕುಳಿತವರ ಅನ್ನ ಕಿತ್ತುಕೊಳ್ಳುವುದು ಯಾವ ಧರ್ಮ ಎಂದು ವಿಡಿಯೋ ಮಾಡಿದವರು ಪ್ರಶ್ನಿಸಿದ್ದಾರೆ.














