Saturday, March 7, 2026
ಸುದ್ದಿ

6 ವರ್ಷಗಳ ನಂತರ ದ.ಕೊರಿಯಾದಲ್ಲಿ ಅಮೆರಿಕ-ಚೀನಾ ಅಧ್ಯಕ್ಷರ ಭೇಟಿ; ಜಿನ್‌ಪಿಂಗ್‌ ಶ್ರೇಷ್ಠ ನಾಯಕ ಎಂದ ಟ್ರಂಪ್‌- ಕಹಳೆ ನ್ಯೂಸ್

ಸಿಯೋಲ್: ಆರು ವರ್ಷಗಳ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ದಕ್ಷಿಣ ಕೊರಿಯಾದಲ್ಲಿ ಮುಖಾಮುಖಿಯಾಗಿದ್ದಾರೆ. ಟ್ರಂಪ್‌ ಮತ್ತು ಜಿನ್‌ಪಿಂಗ್‌ ಭೇಟಿಯಾಗಿ ಪರಸ್ಪರರು ಹಸ್ತಾಲಾಘವ ಮಾಡಿದರು. ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ಸಂಭಾವ್ಯ ವ್ಯಾಪಾರ ಯುದ್ಧ ನಡೆದಿತ್ತು. ಈ ಭೇಟಿಯು ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದದ ಭರವಸೆ ಮೂಡಿಸಿದೆ.

ನಾವು ಒಬ್ಬರಿಗೊಬ್ಬರು ಚೆನ್ನಾಗಿ ಅರಿತಿದ್ದೇವೆ. ನಮಗೆ ಉತ್ತಮ ಸಂಬಂಧವಿದೆ. ನಾವು ಅತ್ಯಂತ ಯಶಸ್ವಿ ಸಭೆ ನಡೆಸಲಿದ್ದೇವೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಜಿನ್‌ಪಿಂಗ್ ಬಹಳ ಕಠಿಣ ಸಂಧಾನಕಾರರು. ಅವರು ಒಂದು ದೊಡ್ಡ ದೇಶದ ಶ್ರೇಷ್ಠ ನಾಯಕ. ನಾವು ಬಹಳ ಸಮಯದವರೆಗೆ ಉತ್ತಮ ಸಂಬಂಧವನ್ನು ಹೊಂದಲಿದ್ದೇವೆ‌ ಟ್ರಂಪ್‌ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹಲವು ಸವಾಲುಗಳ ನಡುವೆಯೂ ಚೀನಾ ಮತ್ತು ಯುಎಸ್‌ ಸಂಬಂಧ ಉತ್ತಮವಾಗಿದೆ. ನಾವಿಬ್ಬರೂ ಸರಿಯಾದ ಹಾದಿಯಲ್ಲಿ ಉಳಿಯಬೇಕು. ಚೀನಾ-ಯುಎಸ್‌ ಸಂಬಂಧಗಳನ್ನು ಖಚಿತಪಡಿಸಿಕೊಳ್ಳಬೇಕು. ಚೀನಾದ ಅಭಿವೃದ್ಧಿಯು ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠವಾಗಿಸುವ ನಿಮ್ಮ ದೃಷ್ಟಿಕೋನದೊಂದಿಗೆ ಕೈಜೋಡಿಸುತ್ತದೆ ಎಂದು ನಾನು ಭಾವಿಸಿದ್ದೇನೆ. ಎರಡೂ ದೇಶಗಳು ಪರಸ್ಪರ ಯಶಸ್ವಿಯಾಗಲು ಮತ್ತು ಒಟ್ಟಿಗೆ ಸಮೃದ್ಧಿಯಾಗಲು ಸಂಪೂರ್ಣವಾಗಿ ಸಮರ್ಥವಾಗಿವೆ. ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ಪಾಲುದಾರರು ಮತ್ತು ಸ್ನೇಹಿತರಾಗಿರಬೇಕು ಎಂದು ನಾನು ಹಲವು ಬಾರಿ ಸಾರ್ವಜನಿಕವಾಗಿ ಹೇಳಿದ್ದೇನೆ. ಇತಿಹಾಸವು ನಮಗೆ ಕಲಿಸಿದ್ದು ಇದನ್ನೇ ಎಂದು ಜಿನ್‌ಪಿಂಗ್‌ ಮಾತನಾಡಿದ್ದಾರೆ.

ಜಾಹೀರಾತು
ಜಾಹೀರಾತು

ದಕ್ಷಿಣ ಬಂದರು ನಗರಿ ಬುಸಾನ್‌ನಲ್ಲಿ ನಡೆದ ಸಭೆ ಬಳಿಕ ಅಮೆರಿಕ ಅಧ್ಯಕ್ಷರ ಏಷ್ಯಾದಾದ್ಯಂತದ ಕಾರ್ಯನಿರತ ಪ್ರವಾಸ ಕೊನೆಗೊಂಡಿದೆ. ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಯ ಹೊರತಾಗಿ ನಡೆದ ಮಾತುಕತೆಯ ಸಂದರ್ಭದಲ್ಲಿ ಕ್ಸಿ ಜೊತೆ ಒಪ್ಪಂದಕ್ಕೆ ಬರುವ ಬಗ್ಗೆ ಟ್ರಂಪ್ ಆಶಾವಾದ ವ್ಯಕ್ತಪಡಿಸಿದ್ದಾರೆ.