
ಬೆಂಗಳೂರು : ಚಿನ್ನ ಮತ್ತು ಬೆಳ್ಳಿ ಬೆಲೆಗಳ ಭರ್ಜರಿ ಕುಸಿತ ಮುಂದುವರಿದಿದೆ. ಕಳೆದ ಹತ್ತು ದಿನದಲ್ಲಿ ಈ ಎರಡೂ ಬೆಲೆಗಳು ಸಿಕ್ಕಾಪಟ್ಟೆ ಕುಸಿದಿವೆ. ಆಭರಣ ಚಿನ್ನದ ಬೆಲೆ (gold rate) 12,170 ರೂ ಇದ್ದದ್ದು 11,225 ರೂಗೆ ಇಳಿದಿದೆ. ಹತ್ತು ದಿನದಲ್ಲಿ ಶೇ. 7-8ರಷ್ಟು ಬೆಲೆ ಕುಸಿತವಾಗಿದೆ. ಬೆಳ್ಳಿ ಬೆಲೆಯಂತೂ ಇನ್ನೂ ಭಯಂಕರ ಕುಸಿತ ಕಂಡಿದೆ. ಅತಿರೇಕವಾಗಿ ಏರಿಕೆಯಾಗಿದ್ದ ಬೆಳ್ಳಿ ಬೆಲೆ ಅಷ್ಟೇ ಅತಿರೇಕವಾಗಿ ಕುಸಿಯುತ್ತಿದೆ. ಹತ್ತು ದಿನಗಳ ಹಿಂದೆ 190 ರೂಗಳ ಗರಿಷ್ಠ ಮಟ್ಟಕ್ಕೆ ಹೋಗಿದ್ದ ಅದರ ಬೆಲೆ ಶೇ. 20ರಷ್ಟು ಕುಸಿದು 151 ರೂ ಮುಟ್ಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,12,250 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,22,460 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 15,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,12,250 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 15,200 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 16,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 28ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,246 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,225 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,184 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 151 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,246 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,225 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 152 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 11,225 ರೂ
- ಚೆನ್ನೈ: 11,300 ರೂ
- ಮುಂಬೈ: 11,225 ರೂ
- ದೆಹಲಿ: 11,240 ರೂ
- ಕೋಲ್ಕತಾ: 11,225 ರೂ
- ಕೇರಳ: 11,225 ರೂ
- ಅಹ್ಮದಾಬಾದ್: 11,230 ರೂ
- ಜೈಪುರ್: 11,240 ರೂ
- ಲಕ್ನೋ: 11,240 ರೂ
- ಭುವನೇಶ್ವರ್: 11,225 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಮಲೇಷ್ಯಾ: 527 ರಿಂಗಿಟ್ (11,083 ರುಪಾಯಿ)
- ದುಬೈ: 445.50 ಡಿರಾಮ್ (10,707 ರುಪಾಯಿ)
- ಅಮೆರಿಕ: 124 ಡಾಲರ್ (10,956 ರುಪಾಯಿ)
- ಸಿಂಗಾಪುರ: 161.30 ಸಿಂಗಾಪುರ್ ಡಾಲರ್ (11,006 ರುಪಾಯಿ)
- ಕತಾರ್: 445.50 ಕತಾರಿ ರಿಯಾಲ್ (10,799 ರೂ)
- ಸೌದಿ ಅರೇಬಿಯಾ: 453 ಸೌದಿ ರಿಯಾಲ್ (10,673 ರುಪಾಯಿ)
- ಓಮನ್: 47 ಒಮಾನಿ ರಿಯಾಲ್ (10,787 ರುಪಾಯಿ)
- ಕುವೇತ್: 36.66 ಕುವೇತಿ ದಿನಾರ್ (10,569 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 152 ರೂ
- ಚೆನ್ನೈ: 165 ರೂ
- ಮುಂಬೈ: 151 ರೂ
- ದೆಹಲಿ: 151 ರೂ
- ಕೋಲ್ಕತಾ: 151 ರೂ
- ಕೇರಳ: 165 ರೂ
- ಅಹ್ಮದಾಬಾದ್: 151 ರೂ
- ಜೈಪುರ್: 151 ರೂ
- ಲಕ್ನೋ: 151 ರೂ
- ಭುವನೇಶ್ವರ್: 165 ರೂ
- ಪುಣೆ: 151
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)













