ಒಳ ಉಡುಪಿನಲ್ಲಿಟ್ಟುಕೊಂಡು ಚಿನ್ನ ಸಾಗಾಟ ; ದೆಹಲಿ ಏರ್‌ಪೋರ್ಟ್‌ನಲ್ಲಿ ಮಹಿಳೆಯಿಂದ 1 ಕೆಜಿ ಗೋಲ್ಡ್ ಬಿಸ್ಕೆಟ್ ವಶಕ್ಕೆ-ಕಹಳೆ ನ್ಯೂಸ್
ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಯಾಂಗೋನ್‌ನಿಂದ ಬಂದ ಮಹಿಳಾ ಪ್ರಯಾಣಿಕಳೊಬ್ಬಳು ಚಿನ್ನ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾಳೆ.
ಯಾಂಗೂನ್‌ನಿಂದ ಬಂದ ವಿಮಾನ 8M 620 ರಲ್ಲಿ ಮಹಿಳೆ ದೆಹಲಿಗೆ ಬಂದಿದ್ದಳು. ಒಳ ಉಡುಪುಗಳಲ್ಲಿ 997.5 ಗ್ರಾಂ ತೂಕದ 6 ಚಿನ್ನದ ಬಿಸ್ಕತ್ತುಗಳನ್ನು ಅಡಗಿಸಿಟ್ಟುಕೊಂಡಿದ್ದಳು. ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಚಿನ್ನ ಇರುವುದು ಪತ್ತೆಯಾಗಿತ್ತು.
1962ರ ಕಸ್ಟಮ್ಸ್ ಕಾಯ್ದೆಯ ಅಡಿ ಚಿನ್ನವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.














