Saturday, March 7, 2026
ಬೆಂಗಳೂರುರಾಜಕೀಯರಾಜ್ಯಸುದ್ದಿ

ಅಮಾವಾಸ್ಯೆ, ಹುಣ್ಣಿಮೆಗೂ ಸೂರ್ಯ ಇರ್ತಾನೆ: ಸಿಎಂಗೆ ತೇಜಸ್ವಿ ಸೂರ್ಯ ತಿರುಗೇಟು – ಕಹಳೆ ನ್ಯೂಸ್

ಬೆಂಗಳೂರು: ತಮ್ಮನ್ನು ಅಮಾವಾಸ್ಯೆ ಸೂರ್ಯ ಎಂದು ಟೀಕಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದು ” ಅವರಿಗೆ ಅಮಾವಾಸ್ಯೆಗೂ ಹುಣ್ಣಿಮೆಗೂ ವ್ಯತ್ಯಾಸ ಗೊತ್ತಿಲ್ವಾ? ಅಮಾವಾಸ್ಯೆ, ಗ್ರಹಣ, ಸೂರ್ಯ- ಚಂದ್ರ ಎಲ್ಲ ಜ್ಯೋತಿಷಿಗಳಿಗೆ ಬಿಡಿ.

ನೀವು ಆಡಳಿತದ ಕಡೆಗೆ ಗಮನ ಕೊಡಿ ಎಂದು ವ್ಯಂಗ್ಯವಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಅಮಾವಾಸ್ಯೆಗೂ ಸೂರ್ಯ ಇರ್ತಾನೆ, ಹುಣ್ಣಿಮೆಗೂ ಸೂರ್ಯ ಇರ್ತಾನೆ. ಅಮಾವಾಸ್ಯೆಗೆ ಇಲ್ಲದಿರುವುದು ಚಂದ್ರ. ಸಿದ್ದರಾಮಯ್ಯನವರು ಹಲವು ಬಾರಿ ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಿದ್ದಾರೆ. ಇದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ವೈಯಕ್ತಿಕ ಟೀಕೆ ಮಾಡುವುದನ್ನು ನನ್ನ ಪಕ್ಷ ಕಲಿಸಿಲ್ಲ. ಅವರು ಹಿರಿಯರು ಬಿಡಿ ಎಂದು ಹೇಳಿದರು.

ಜಾಹೀರಾತು
ಜಾಹೀರಾತು

ಸಿದ್ದರಾಮಯ್ಯ ಆಡಳಿತಕ್ಕೆ ಗ್ರಹಣ ಹಿಡಿದಿದೆ
ಬೆಂಗಳೂರಿನಲ್ಲಿ ಗುಂಡಿನ ಇಲ್ಲದ ರಸ್ತೆ ಇಲ್ಲವೇ ಇಲ್ಲ ಎಂಬಂತಾಗಿದೆ. ಇವರ ಆಡಳಿತ ಎಷ್ಟು ಚೆನ್ನಾಗಿದೆ ಎಂಬುದನ್ನು ರಸ್ತೆಗಳನ್ನು ನೋಡಿದರೆ ಗೊತ್ತಾಗುತ್ತದೆ. ಬೆಂಗಳೂರಿಲ್ಲಿ ಒಂದು ಕಿ.ಮೀ ರೋಡ್ ಸರಿಯಿಲ್ಲ, ಅರ್ಧ ಕಿಮೀ ಫುಟ್‌ಪಾತ್ ಸರಿಯಿಲ್ಲ. ಆದರೆ ನೀವು ಮೋದಿಯವರಿಗೆ ಪ್ರಶ್ನೆ ಕೇಳುತ್ತೀರಿ. ಒಂದೇ ವಾರದಲ್ಲಿ ಬೆಂಗಳೂರಿನಲ್ಲಿ ಮೂರು ರೇಪ್, ಮರ್ಡರ್ ಆಗುತ್ತದೆ, ಮೈಸೂರಲ್ಲೂ ಬಾಲಕಿ ರೇಪ್ ಆಗಿದೆ. ಇದರ ಬಗ್ಗೆ ನೀವ್ಯಾರೂ ಮಾತನಾಡುತ್ತಿಲ್ಲ.ನಿಮ್ಮ ಗೃಹ ಸಚಿವರು ಬೆಟ್ಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ನಿಮ್ಮ ಐಟಿ ಮಂತ್ರಿ ಆರ್‌ಎಸ್‌ಎಸ್‌ ಬ್ಯಾನ್‌ ಮಾಡುವುದರಲ್ಲಿ ಬ್ಯುಸಿ ಇದ್ದಾರೆ. ನಿಮ್ಮ ಆಡಳಿತ ವೈಖರಿಗೆ ಬೆಚ್ಚಿ ಗೂಗಲ್‌ ಎಐ ಕಂಪನಿ ರಾಜ್ಯದ ಕೈ ತಪ್ಪಿ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ನೌಕರರಿಗೆ ವೇತನ ಕೊಡಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನಿಂದ ಕಂಪನಿಗಳು ಓಡಿ ಹೋಗುತ್ತಿವೆ. ಈ ಸರ್ಕಾರ ಬಂದ ನಂತರ ಸಾಲ ಹೆಚ್ಚುತ್ತಿದೆ, ಬಂಡವಾಳ ವೆಚ್ಚ ತಗ್ಗುತ್ತಿದೆ. ಸಾಲ ಮಾಡಿದ ಹಣವನ್ನು ಆಸ್ತಿ ಸೃಜನೆಗೆ ವಿನೊಯೋಗಿಸುತ್ತಿಲ್ಲ. ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವುದಕ್ಕೆ ಮುನ್ನ ನಿಮ್ಮ ಸರ್ಕಾರದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಆಗ್ರಹಿಸಿದರು.

ಅವರು ನನ್ನ ತಂದೆಯ ವಯಸ್ಸಿನವರು. ಸಿದ್ದರಾಮಯ್ಯ ಅವರನ್ನಾಗಲಿ, ಯಾರನ್ನೇ ಆಗಲಿ ವೈಯಕ್ತಿಕ ಟೀಕೆ ಮಾಡುವುದನ್ನು ನಮ್ಮ‌ ಪಕ್ಷ ಕಲಿಸಿಲ್ಲ. ಅದು ನಮ್ಮ ಸಂಸ್ಕಾರ ಅಲ್ಲ. ಮೋದಿ ಆಡಳಿತ ಟೀಕೆ ಮಾಡುತ್ತೀರಿ. ಆದರೆ ನಿಮ್ಮ ಆಡಳಿತದ ಬಗ್ಗೆಯೂ ಹೇಳಬೇಕಲ್ಲವೇ ? ಬೆಂಗಳುರಿನ ರಸ್ತೆ ಗುಂಡಿಗಳೇ ನಿಮ್ಮ ಆಡಳಿತ ವೈಖರಿಗೆ ಹಿಡಿತ ಕನ್ನಡಿ ಎಂದು ಟೀಕಿಸಿದರು.